ಒಂದು ಕಥೆ ಹೇಳ್ಲಾ! ಇದನ್ನು ಓದಿದ ತಕ್ಷಣ ಕೂತುಹಲದಿಂದ ಏನ್ ಕಥೆ ಹೇಳ್ತನಪ್ಪಾ ಅಂತ ಅಚ್ಚರಿಯ ಕಣ್ಣುಗಳಲ್ಲಿ ಇದನ್ನು ಓದುತ್ತಿದ್ದರೇ ಕ್ಷಮಿಸಿ ಇದು ನನ್ನ ಕಥೆಯಲ್ಲ ಒಂದು ಹೊಸ ಸಿನಿಮಾ ಟೈಟಲ್!
ಗಾಂಧಿನಗರದ ಯುವ ಪ್ರತಿಭೆ ಗಿರೀಶ್ ಜಿ ನಿರ್ದೆಶನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದ ಟೈಟಲ್ ‘ಒಂದು ಕಥೆ ಹೇಳ್ಲಾ’ ಈ ಸಿನಿಮಾ ನಾಯಕ ಕರ್ನಾಟಕದ ಮನೆಮಂದಿಗೆಲ್ಲಾ ಚಿರಪರಿಚಿತರಾಗಿರುವ ಕಲಾವಿದ ತಾಂಡವ ರಾಮ್. ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತೀರುವ ಜೋಡಿಹಕ್ಕಿ ಧಾರವಾಹಿಯ ನಾಯಕ ಈ ಧಾರಾವಾಹಿ ಹಳ್ಳಿ ಬದುಕಿನ ನೈಜ ಚಿತ್ರಣದೊಂದಿಗೆ ಅತ್ಯಂತ ಸುಮಧುರವಾಗಿ ಮೂಡಿಬರುತ್ತಿದ್ದು, ಕನ್ನಡಿಗರ ಹೃದಯ ಗೆದ್ದಿದೆ ತಾಂಡವ್ ರಾಮ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಕಿರುತೆರೆಯಿಂದ ಬೆಳ್ಳಿತೆರೆಗೆ ಬರುತ್ತಿರುವ ತಾಂಡವ್ ರಾಮ್ ನಟನೆ ಹೇಗಿರುತ್ತೆ ಅಂತ ತಿಳಿಯಬೇಕಾದರೆ ಇನ್ನೂ ಸ್ವಲ್ಪ ದಿನ ಕಾಯಲೇ ಬೇಕು. ಏಕೆಂದರೆ ಟಾಕಿ ಪೋಸನ್ಸ್ ಚಿತ್ರಿಕರಣ ಪೂರ್ಣಗೊಂಡಿರುವ ಈ ಚಿತ್ರಕ್ಕೆ ಇನ್ನೂ ಒಂದು ಹಾಡು ಮಾತ್ರ ಬಾಕಿ ಉಳಿದಿದೆ.
ಇನ್ನೂ ಈ ಚಿತ್ರದ ನಿರ್ದೇಶಕ ಗಿರೀಶ್ ಬೆಟ್ಟದಷ್ಟು ಕನಸನ್ನು ಇಟ್ಟುಗೊಂಡಿರುವ ಸೃಜನಶೀಲ ಯುವ ಪ್ರತಿಭೆ. ದಿ ಲೂಸಿಡ್ ಹ್ಯಾಂಗ್‍ಹೊವರ್ ಮತ್ತು ಅಗಾಮಿ ಎಂಬ ಎರಡು ಕಿರು ಚಿತ್ರಗಳನ್ನು ಮಾಡಿರುವ ಅನುಭವವಿದೆ. ಚಿತ್ರಕ್ಕೆ ರೋಣದ ಬಕ್ಕೆಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದು, ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ತಾಂಡವ್ ರಾಮ್ ಜೊತೆಗೆ ಶಕ್ತಿ ಸೋಮಣ್ಣ, ಪ್ರತೀಕ್, ತಾರಾ ಸದಾಶಿವಯ್ಯ , ಪ್ರಿಯಾಂಕ್ ಸೌಮ್ಯ ರಾಮನಗರ, ರಮಾಕಾಂತ್ ಮುಂತಾದವರು ನಟಿಸಿದ್ದಾರೆ. ಕ್ರೌಂಡ್ ಫಂಡಿಂಗ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಹುತೇಕ ಹೊಸಬರಿದ್ದಾರೆ.
ಕನ್ನಡ ಚಿತ್ರರಸಿಕರಿಗೆ ಈಗಾಗಲೇ ಈ ಟೈಟಲ್ ಬಹಳಷ್ಟು ಮೆಚ್ಚುಗೆ ಆಗಿದ್ದು ಸಿನಿಮಾವನ್ನು ನೋಡಲು ಬಹಳ ಕೂತುಹಲದಿಂದ ಕಾಯುತ್ತಿದ್ದಾರೆ.
-ಬಿಬಿಎಂ ನ್ಯೂಸ್