ವ್ಯಕ್ತಿತ್ವ ವಿಕಸನ

ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.!

ಒಂದು ಊರಿನಲ್ಲಿ 3 ಮಹಿಳೆಯರು ನೀರು ತುಂಬಿಸುತ್ತಿದ್ದರು.

ಮೊದಲನೆಯವಳ ಮಗ ಶಾಲೆಯಿಂದ ಅದೇ ದಾರಿಯಲ್ಲಿ ಹೋಗುತ್ತಿರುವಾಗ ತಾಯಿಯ ಕಡೆಗೆ ನೋಡಿದ . ಆವಾಗ ತಾಯಿ” ಅವನೇ ನನ್ನ ಮಗ,ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ”

ಸ್ವಲ್ಪ ಸಮಯದ ನಂತರ ಎರಡನೆಯವಳ ಮಗ ಅದೇ ದಾರಿಯಿಂದ ಶಾಲೆಯಿಂದ ಹಿಂತಿರುಗುವುದನ್ನು ತೋರಿಸಿ “ಅವನೇ ನನ್ನ ಮಗ, ಸಿಬಿಎಸ್ಇನಲ್ಲಿ ಒದುತ್ತಿದ್ದಾನೆ”

ಅವನ ಹಿಂದಿನಿಂದ ಮೂರನೆಯವಳ ಮಗ ಕೂಡಾ ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ.ತಾಯಿಯನ್ನು ನೋಡಿ ಅವಳ ಹತ್ತಿರ ಬಂದು ನೀರಿನಿಂದ ತುಂಬಿದ ಕೊಡವನ್ನು ಹೆಗಲ ಮೇಲೆ ಮತ್ತು ಬಾಲ್ದಿ ಯನ್ನು ಇನ್ನೊಂದು ಕೈಯಲ್ಲಿ ಹಿಡಿದು ತಾಯಿಯ ಕಡೆ ನೋಡಿ” ಅಮ್ಮ ಬನ್ನಿ ಮನೆಗೆ ಹೋಗುವ” ಅಂದ. ತಾಯಿ ಅವನ ಕಡೆ ಕೈ ತೋರಿಸಿ, ಸಂತೋಷದಿಂದ

” ಇವನೇ ನನ್ನ ಮಗ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾನೆ” ಅಂದಳು.

ಇದನ್ನು ಕೇಳಿ ಮತ್ತಿಬ್ಬರು ನಾಚಿಕೆಯಿಂದ ತಲೆ ಬಾಗಿಸಿದರು.
ಮೇಲಿನ ಕತೆಯ ತಾತ್ಪರ್ಯ ಇಷ್ಟೆ, “ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ………!!”

ಕೃಪೆ: ಅಂತರ್ಜಾಲ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!