ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡೀಸ್‍ರವರು ಇಂದು ಬೆಳಿಗ್ಗೆ (29.01.2019)ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹಂದಿ ಜ್ವರದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ಜಾರ್ಜ್ ಫರ್ನಾಂಡಿಸ್‍ರವರು ಪತ್ರಕರ್ತ, ಕೃಷಿಕ, ಭಾರತೀಯ ಕಾರ್ಮಿಕ ಸಂಘವಾದಿಯಾಗಿದ್ದರು, ಜನತಾ ದಳದ ನಾಯಕರಲ್ಲಿ ಪ್ರಮುಖರಾಗಿದ್ದು, ಸಂವಹನ ಕೈಗಾರಿಕೆ, ರೈಲ್ವೆ, ರಕ್ಷಣೆಯಂತಹ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಜಾರ್ಜ್ ಫರ್ನಾಂಡಿಸ್‍ರವರು ವಿ.ಪಿ. ಸಿಂಗ್ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದರು. ಕೊಂಕಣ ರೈಲ್ವೆ ಫರ್ನಾಂಡೀಸ್ ಅವಧಿಯ ದೊಡ್ಡ ಸಾಧನೆ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಸೈ ಎನಿಸಿಕೊಂಡಿದ್ದರು.
ಮಂಗಳೂರಿನಲ್ಲಿ ಜನಿಸಿದ್ದ ಫರ್ನಾಂಢೀಸ್ ಮುಂಬೈನಲ್ಲಿ ಒಬ್ಬ ಪ್ರಭಾವಿ ಕಾರ್ಮಿಕ ನಾಯಕನಾಗಿ ಮುನ್ನೆಲೆಗೆ ಬಂದರು. ರಾಮಮನೋಹರ ಲೋಹಿಯ ಅವರಿಂದ ಪ್ರಭಾವಿತರಾಗಿದ ಫರ್ನಾಂಡೀಸ್‍ರವರ ಬದುಕು ಬಹುಕಾಲ ಹೋರಾಟದ ಹಾದಿಯಲ್ಲೇ ಸಾಗಿತ್ತು.