ರಾಮನಗರ ಜಿಲ್ಲೆ ಚನ್ನಪಟ್ಟಣ ವಾಸಿ, ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಅವರು 2018-19ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸರ್ಕಾರಿ ಅಸ್ಪತ್ರೆಗಳ ಸಮಗ್ರ ನಿರ್ವಹಣೆ, ಸ್ವಚ್ಛತೆ, ಔಷಧಗಳ ಲಭ್ಯತೆ, ಗುಣಮಟ್ಟದ ಚಿಕಿತ್ಸಾ ವಿಧಾನ, ರೋಗಿಗಳೊಂದಿಗಿನ ಸಂವಹನ ಸಂಬಂಧ ಹಾಗೂ ನಗುಮೊಗದ ಸೇವೆ, ಸಕಾಲಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯತೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯಲ್ಲಿನ ಎಲ್ಲಾ ಕಾರ್ಯಕ್ಷಮತೆಯನ್ನು ಸದರಿ ಆಸ್ಪತ್ರೆಗಳಿಗೆ ಗೊತ್ತಾಗದ ರೀತಿಯಲ್ಲಿ ಸಮೀಕ್ಷೆ ನಡೆಸಿ, ನೂರಾರು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ತುಲನೆ ಮಾಡಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ರಾಮ್ ಘಡ್ ರಾಕರ್ಸ್ ಚಾರಣ -5 |Ramghad Rockers Trekking –
ಈ ಸಂಬಂಧ ಸಂತಸ ಹಂಚಿಕೊಂಡಿರುವ ಗಿರೀಶ್, ಕಳೆದ ಹತ್ತು ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಕಾಯಕಲ್ಪ ಪ್ರಶಸ್ತಿ ಸಂದಿದೆ. ಆಸ್ಪತ್ರೆಯ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯಯೇತರ ಸಿಬ್ಬಂದಿ, ಆಸ್ಪತ್ರೆ ನಿರ್ವಹಣಾ ಸಿಬ್ಬಂದಿ ಹಾಗೂ ವಿಶೇಷವಾಗಿ ನನ್ನ ಸಹೋದ್ಯೋಗಿಗಳ ಸಂಯಮ ಹಾಗೂ ರೋಗಿಗಳ ಸಹಕಾರದಿಂದಾಗಿ ಈ ಒಂದು ಕಾಯಕಲ್ಪ ಪ್ರಶಸ್ತಿ ನಮ್ಮ ಆಸ್ಪತ್ರೆಯ ಮುಡಿಗೇರಲು ಕಾರಣವಾಗಿದೆ ಎನ್ನುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಂದಿನಿ ವಿವಿಧ ಆಯುರ್ವೇದಿಕ್ ಹಾಲು ಬಿಡುಗಡೆ
ಇನ್ನೂ ಹೆಚ್ಚಿನ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಈ ಪ್ರಶಸ್ತಿ ಯು ಒಂದು ರೀತಿಯಲ್ಲಿ ನಮಗೆ ನಮ್ಮದೇ ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಟಾನಿಕ್ ರೂಪದಲ್ಲಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸ್ಫೂರ್ತಿಯಾಗಿದೆ ಎಂಬುದು ಅವರ ಮನದಾಳದ ಮಾತಾಗಿದೆ.ಇವರಿಗೆ ನಮ್ಮ ರಾಮನಗರ ಜನತೆಯ ಪರವಾಗಿ ಶುಭಾಶಯಗಳು.
.