ನಮ್ಮ ರಾಮನಗರ

ವಿವಿಧ ಸಾಧಕರಿಗೆ ಸನ್ಮಾನ ಮತ್ತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ರೊಟರಿ ಸಿಲ್ಕ್ ಸಿಟಿವತಿಯಿಂದ ವೈದ್ಯರ ಶಿಕ್ಷಕರ, ಅಭಿಯಂತರರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ನಗರದ ಗುರುಶ್ರೀ ಮ್ಯಾನ್‍ಷನ್, ಅರ್ಕಾವತಿ ಬಡಾವಣೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೊಟರಿ ಅಂತರಾಷ್ಟ್ರೀಯ ಜಿಲ್ಲೆ 3190 ಜಿಲ್ಲಾ ಸಹ ಪಾಲಕರಾದ ರೊ. ಪಿ. ಶಿವಪ್ಪ ನವರು ಭಾಗವಹಿಸಿ, ಬೆಂಗಳೂರು ಹೊರವಲಯದ ರೊಟರಿ ಕ್ಲಬ್‍ಗಳಲ್ಲಿ ರೊಟರಿ ಸಿಲ್ಕ್ ಸಿಟಿ ಯಾವಾಗಲೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅತೀವ ಸಂತಸ ತಂದಿದೆ. ಈ ಕ್ಲಬ್‍ನ ಎಲ್ಲಾ ಸದಸ್ಯರು ಕ್ರೀಯಾಶಿಲರಾಗಿದ್ದು, ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ತಿಳಿಸಿದರು.

ಪ್ರಾಂಶುಪಾಲರು ದಯಾನಂದ ಜಿ. ವೈದ್ಯರಾದ ಡಾ: ಯಶೋಧ ಸಹಾಯಕ ಪ್ರಾಧ್ಯಾಕರಾದ ಕವಿತಾ ವಿ. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಗಂಗಾಧರ್ ಬಿ.ಎಸ್. ಲ್ಯಾಬ್ ಟೇಕ್ನಷಿಯನ್ ಪುಟ್ಟರಾಜು ರವನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಎಸ್. ಎಲ್.ಸಿ. ಯಲ್ಲಿ ಅತಿ ಹೆಚ್ಚು ಅಂಕಪಡೆದ ಸರ್ಕಾರಿ ಪ್ರೌಢಶಾಲೆಯ ಅರ್ಚನಾ ಬಿ.ಎಸ್. ನಿಸರ್ಗ ಜೆ.ವಿ. ಹಾಗೂ ದ್ವೀತಿಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹುಸೇನ್ ಪಾಷಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಕ್ಷಿತಾ ಜೆ.ಆರ್. ರವರಿಗೆ ಪ್ರಶಂಸನಾ ಪತ್ರನೀಡಿ ಗೌರವಿಸಲಾಯಿತು.

ರೊಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ರೋ. ರವಿಕುಮಾರ್ ರವರು ಮಾತನಾಡಿ ಸಿಲ್ಕ್ ಸಿಟಿ ಎಲ್ಲಾ ಸದಸ್ಯರ ಸಹಕಾರದಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ದಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗೌರವಿಸಿದ್ದು ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗಿದ್ದು, ರೊಟರಿ ಸಿಲ್ಕ್ ಸಿಟಿ ಹಾಗೂ ರಾಮ್‍ಗಡ್ ರಾಕರ್ಸ್ ಚಾರಣ ಕೈಗೊಂಡ ಬೆಟ್ಟಗಳಲ್ಲಿ ಸೀಡ್ ಬಾಲ್ಸ್ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಮಾಡುತ್ತಿದ್ದು, ಪರಿಸರ ಸ್ವಚ್ಚತೆ ಕೆಲಸಗಳನ್ನು ಮಾಡಲಾಗುತ್ತಿದೆ. ರೊಟರಿ ಸಿಲ್ಕ್ ಸಿಟಿ ಮುಂದೆ ಇನ್ನೂ ಉತ್ತಮ ಕೆಲಸಗಳನ್ನು ಮಾಡುತ್ತದೆಂದು ತಿಳಿಸಿದರು.

ರೋ ಸಿಲ್ಕ್ ಸಿಟಿಯ ರೋ. ಎಂ.ಕೆ ಮಂಜುನಾಥ್ ರವರಿಗೆ ಜಿಲ್ಲಾ ರೋಟರಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವಿಸಿರುವುದಕ್ಕೆ. ಅಭಿನಂದಿಸಲಾಯಿತು

ದಿನದ ವಿಶೇಷದ ಬಗ್ಗೆ ರೋ. ಸೋಮಶೇಖರ್ ರಾವ್ ತಿಳಿಸಿದರು.  ಪ್ರಾರ್ಥನೆಯನ್ನು ರೊ. ಕೆ.ವಿ. ಉಮೇಶ್‍ರವರು ಮಾಡಿದರು. ಕಾರ್ಯದರ್ಶಿ ರೋ. ರಘುಕುಮಾರ್ ವರದಿ ಓದಿದರು. ರೋ. ನವೀನ್ ರಾಮನಗರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರೊಟರಿ ಸಿಲ್ಕ್ ಸಿಟಿ ವೃತ್ತಿಸೇವಾ ನಿರ್ದೇಶಕರಾದ ರೋ. ಎನ್. ನರಸಿಂಹರಾಜು, ಸಿಲ್ಕ್ ಸಿಟಿ ಸಂಸ್ಥಾಪಕ ಅಧ್ಯಕ್ಷರಾದ ರೋ. ಬಿ.ಗೋಪಾಲ್, ಸಿಲ್ಕ್ ಸಿಟಿ ಹಾಗೂ ರಾಮ್‍ಗಡ್ ರಾಕರ್ಸ್ ತಂಡದ ನಾಯಕರಾದ ರೋ. ಎಲ್. ಪ್ರಭಾಕರ್, 2018-19ನೇ ಸಾಲಿನ ಅದ್ಯಕ್ಷರಾಗಿದ್ದ ರೋ. ಎ.ಜೆ. ಸುರೇಶ್, 2018-19ರ ಸಿಲ್ಕ್ ಸಿಟಿ ಕಾರ್ಯದರ್ಶಿಯಾಗಿದ್ದ ರೊ. ಶಿವರಾಜ್, ಮತ್ತು ಸಿಲ್ಕ್ ಸಿಟಿ ಸದಸ್ಯರಾದ ರೋ. ಲತಾಗೋಪಾಲ್ ರೋ. ಪುಷ್ಪಲತಾ, ರೊ. ಗುರುಮೂರ್ತಿ, ರೋ. ಉಮಶಂಕರ್ ರೋ. ಧನರಾಜ್, ರೋ. ಅನಿಲ್, ರೋ.ಶೇಖರ್, ರೊ. ಪ್ರಕಾಶ್, ರೋ. ಪ್ರೇಮ್ ಕುಮಾರ್. ರೋ. ಗಂಗಾಧರ್, ರೋ. ಉಮಾಶಂಕರ್, ರೋ. ರಾಮು, ರೋ. ಮಂಜುನಾಥ್, ರೋ. ಪ್ರದೀಪ್, ರೋ. ಪರಮೇಶ್, ರೋ. ಗುರು,ಉಪಸ್ಥಿತರಿದ್ದರು.

– ರೋ. ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!