ನಿಮ್ಗೆ ವಿಶ್ವದ ಒಂದಿಷ್ಟು ಸುಂದರ ತಾಣಗಳ ಪರಿಚಯ ಮಾಡಿಕೊಡುತ್ತೇವೆ. ಯಾವಾದ್ರೂ ಫಾರಿನ್ ಟೂರ್ ಅವಕಾಶವಿದ್ದಾಗ ಇಲ್ಲಿಗೆ ಹೋಗಿ ಬರಬಹುದು. ‘ಬ್ರಿಸ್ಟಲ್ ಕೋರ್ ಪೈನ್ ಟ್ರೀ’ಗೆ ಸುಮಾರು 4 ಸಾವಿರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ಪೂರ್ವ ಕ್ಯಾಲಿಫೋರ್ನಿಯಾದ ವೈಟ್ ಮೌಂಟೇನ್ಗಳಿರುವ ಮಿತುಸೆಲಾಹಾ ಹೆಸರಿನ ಅರಣ್ಯ ಪ್ರದೇಶದಲ್ಲಿದೆ. ಇನ್ಯೋ ನ್ಯಾಷನಲ್ ಪಾರ್ಕ್ ವ್ಯಾಪ್ತಿಯಲ್ಲಿರುವ ಈ ಮರವನ್ನ ಪರಿಸರ ಸಂಸ್ಥೆಗಳು ಕಾಪಾಡುತ್ತಿವೆ. ಇದು ಪ್ರಪಂಚದಲ್ಲೆ ಅತ್ಯಂತ ಪುರಾತನ ಮರವೆಂದು ಘೋಷಿಸಲಾಗಿದೆ. ನ್ಯಾಚುರಲ್ ಹಿಸ್ಟರಿ ತಿಳಿಸುವ ಕಾರ್ಯಕ್ರಮಗಳು ಇಲ್ಲಿ ಪ್ರತಿ ವರ್ಷದ ಜೂನ್ ತಿಂಗಳಲ್ಲಿ ನಡೆಯುತ್ತವೆ.
ಆಫೀಸ್ ಒಳಗೆ ಕೆಲಸ ಮಾಡುವವರು ಫಿಟ್ನೆಸ್ ಗೆ ಹೀಗೆ ಮಾಡಿ..
ಮಶ್ರೂಮ್ ಬಂಡೆಗಳು :ನೋಡಲು ಥೇಟ್ ಮಶ್ರೂಮ್ ನಂತೆ ಕಾಣಿಸುವ ಬೃಹತ್ತಾಕಾರದ ಬಂಡೆಗಳು ಟರ್ಕಿಯಲ್ಲಿವೆ. ಹಾಗಂತ ಇವು ಬರೀ ಬಂಡೆಗಳಲ್ಲ. ನೂರಾರು ಕಥೆಗಳನ್ನ ಹೇಳುವ ಗುಹಾಂತರ ಮನೆಗಳು. ಇಲ್ಲಿ ಸಾವಿರಾರು ಶತಮಾನಗಳಷ್ಟು ಹಿಂದೆಯೇ ನಗರ ನಿರ್ಮಾಣವಾಗಿತ್ತೆಂದು ಇಲ್ಲಿನ ಇತಿಹಾಸ ಹೇಳುತ್ತದೆ. ವಾಸ ಯೋಗ್ಯವಾದ ಗುಹೆ, ಚರ್ಚ್ ಸೇರಿ ಎಲ್ಲಾ ಸೌಲಭ್ಯಗಳಿವೆ ಎನ್ನಲಾಗ್ತಿದೆ. ಇದೀಗ ಇದು ಪ್ರವಾಸಿಗರ ತಾಣವಾಗಿದೆ.
ಜ್ವಾಲಮುಖಿಯ ನ್ಯಾಷನಲ್ ಪಾರ್ಕ್:ಹವಾಯಿ ದ್ವೀಪದಲ್ಲಿ ಜ್ವಾಲಮುಖಿಯ ನ್ಯಾಷನಲ್ ಪಾರ್ಕ್ ಇದೆ. ವಾಲ್ಕನೋ ಟೂರಿಸಂ ಎಂದೇ ಇದು ಹೆಸರುವಾಸಿಯಾಗಿದೆ. ಹವಾಯಿಗೆ ತೆರಳುವಾಗ ಮೊದಲೇ ಅಲ್ಲಿನ ಸ್ಥಿತಿಗತಿಗಳನ್ನ ತಿಳಿದು ಹೋಗಬೇಕು ಅಂತಾರೆ ತಜ್ಞರು. ಕಾರಣ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಕಿಲೌಯಾ ಜ್ವಾಲಮುಖಿಯೊಂದು ಲಾವಾ ರಸವನ್ನ ಸಾಗರದೊಳಗೆ ಉಗುಳಿತ್ತು. ಅದು ಯಾವ ಮಟ್ಟಿಗೆ ಇತ್ತೆಂದರೆ ಸಾಗರಯಾನ ಮಾಡಲು ಆಗುತ್ತಿರಲಿಲ್ಲವಂತೆ. ಸ್ಥಳೀಯರೆಲ್ಲ ದ್ವೀಪ ಬಿಟ್ಟು ವಲಸೆ ಹೋಗಿದ್ದರಂತೆ.
ಬ್ಯೂಟಿಫುಲ್ ಟೀ ಗಾರ್ಡನ್
ಅತ್ಯಂತ ಬ್ಯೂಟಿಫುಲ್ ಟೀ ಗಾರ್ಡನ್ ಸೆಂಟ್ರಲ್ ಚೀನಾದ ಯೆನ್ಶಿಯ ವುಜಿಯಾತಾಯಿ ಹಳ್ಳಿಯಲ್ಲಿದೆ. ನಯನ ಮನೋಹರ ಟೀ ಗಾರ್ಡನ್ ನೋಡಲು ದಿನದಿಂದ ದಿನಕ್ಕೆ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಜಾಹೀರಾತು ಹಾಗೂ ಸಿನಿಮಾ ಶೂಟಿಂಗ್ ಗಳು ಇಲ್ಲಿ ಹೆಚ್ಚಾಗಿ ನಡೆಯುತ್ತಿವೆ. ನೋಡಲು ಪೇಂಟಿಂಗ್ ನಂತೆ ಕಾಣುವ ಇಲ್ಲಿನ ಟೀ ಗಾರ್ಡನ್ ಗಳು ಚೀನಾದ ಬ್ಯೂಟಿಫುಲ್ ಸ್ಥಳಗಳ ಲಿಸ್ಟ್ನಲ್ಲಿದೆ.