ಉಪಯುಕ್ತ ಮಾಹಿತಿ

ಒನ್ ಡೇ ಟೂರ್ ಗೆ ಬೆಸ್ಟ್ ಜಾಗ..ಯಾವ್ದು ಗೊತ್ತಾ ಓದಿ ?

ಬೆಂಗಳೂರಿನಲ್ಲಿರುವ ಜನರಿಗೆ ವಾರಂತ್ಯ ಬಂದರೆ ಸಾಕು, ಹೊರಗೆ ಹೋಗುವ ಪ್ಲಾನ್ ಮಾಡುತ್ತಾರೆ. ಫ್ರೆಂಡ್ಸ್, ಫ್ಯಾಮಿಲಿ, ಕಪಲ್ಸ್ ಹೋಗಬಹುದಾದ ಒಂದು ದಿನ ಟೂರಿಂಗ್ ಸ್ಪಾಟ್ ಗಳು ಸಾಕಷ್ಟು ಇವೆ. ಸೂರ್ಯ ಹುಟ್ಟುವ ಮೊದಲು ಹೊರಟರೆ, ಸೂರ್ಯ ಮುಳುಗುವ ಹೊತ್ತಿಗೆ ಮನೆಯಲ್ಲಿ ಇರಬಹುದು. ಅಂತಹ ಒಂದಿಷ್ಟು ತಾಣಗಳ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Image result for bannerghatta national park

ಬನ್ನೇರುಘಟ್ಟ ಪಾರ್ಕ್: ಬೆಂಗಳೂರಿನಿಂದ 22 ಕಿಲೋ ಮೀಟರ್ ದೂರದಲ್ಲಿ ಬನ್ನೇರುಘಟ್ಟ ಪಾರ್ಕ್ ಇದೆ. ಅತ್ಯಂತ ವಿಸ್ತಾರವಾದ ಪಾರ್ಕ್ ನಲ್ಲಿ ಬೃಹತ್ ಪ್ರಾಣಿ, ಪಕ್ಷಿಗಳಿಂದ ಹಿಡಿದು ಸರಿಸೃಪಗಳವರೆಗೂ ನೋಡಬಹುದು. ಬಟರ್ ಫ್ಲೈ ಪಾರ್ಕ್ ನೋಡಬಹುದು. ಇದರ ಜೊತೆಗೆ ಬೋಟಿಂಗ್ ವ್ಯವಸ್ಥೆ ಇದೆ. ಕಾಡಿನೊಳಗೆ ಸಪಾರಿಗೆ ಹೋಗುವ ಮೂಲಕ ಕಾಡು ಪ್ರಾಣಿಗಳ ದರ್ಶನ ಸಹ ಪಡೆಯಬಹುದು.

ಭಾರತದ ಹೆಮ್ಮೆ ಚಂದ್ರಯಾನ -2 ಯಶಸ್ವಿ ಉಡಾವಣೆ ನೋಡಿ

Image result for talakadu
ತಲಕಾಡು -ಶಿವನಸಮುದ್ರ :ಬೆಂಗಳೂರಿನಿಂದ 150 ಕಿಲೋ ಮೀಟರ್ ದೂರದಲ್ಲಿ ತಲಕಾಡು ಇದೆ. ಇದನ್ನ ಶಿಂಷಾ ಫಾಲ್ಸ್ ಅಂತಾ ಸಹ ಕರೆಯುತ್ತಾರೆ. ಇದು ಮೈಸೂರಿನಿಂದ 70 ಕಿಲೋ ಮೀಟರ್ ದೂರದಲ್ಲಿದೆ. ತಲಕಾಡು ಹಾಗೂ ಶಿವನಸಮುದ್ರ ತುಂಬಾ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಮೊದಲು ಶಿವನ ಸಮುದ್ರ ನೋಡಿ ನಂತರ ತಲಕಾಡಿನತ್ತ ಪ್ರಯಾಣ ಬೆಳೆಸಬಹುದು.

Image result for talakadu

ತಲಕಾಡು ಶಿವನಸಮುದ್ರದಿಂದ ಕೇವಲ 20ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ದೇವಸ್ಥಾನ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ. ಒಟ್ಟು ಐದು ದೇಗುಲಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ದೇವಸ್ಥಾನಗಳು ಮರಳಿನಿಂದ ಮುಚ್ಚಿ ಹೋದ್ರೆ, ಬೇಸಿಗೆಯಲ್ಲಿ ಇವುಗಳ ದರ್ಶನ ಪಡೆಯಬಹುದು. ಪ್ರತಿ 12ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ.

ಹಳದಿ ಸೀರೆಯ ಚೆಲುವೆ ರೀನಾ ವಿಡಿಯೋ ವೈರಲ್!

Image result for ranganathittu
ರಂಗನತಿಟ್ಟು ಪಕ್ಷಿಧಾಮ:ಕರ್ನಾಟಕದ ಪಕ್ಷಿ ಕಾಶಿ ಅಂದರೆ ಅದು ರಂಗನತಿಟ್ಟು ಪಕ್ಷಿಧಾಮ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಈ ತಾಣ, ಸಿಲಿಕಾನ್ ಸಿಟಿಯಿಂದ 125 ಕಿಲೋ ಮೀಟರ್ ದೂರದಲ್ಲಿದೆ. ಮೈಸೂರಿನಿಂದ ಕೇವಲ 13 ಕಿಲೋ ಮೀಟರ್ ದೂರದಲ್ಲಿದೆ. ಪ್ರತಿವರ್ಷ ಇಲ್ಲಿ ಹಲವಾರು ಪಕ್ಷಿಗಳು ವಲಸೆ ಬರುತ್ತವೆ. ಇವುಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಪಕ್ಷಿ ಪ್ರೇಮಿಗಳು ಬರುತ್ತಾರೆ.

ಮುತ್ಯಾಳಮಡುವು:ಬೆಂಗಳೂರಿನಿಂದ ಕೇವಲ 40ಕಿಲೋ ಮೀಟರ್ ದೂರದಲ್ಲಿರುವ ಆನೆಕಲ್ನಲ್ಲಿದೆ. ಇಲ್ಲಿ ಜಲಪಾತ, ಸಣ್ಣ ದೇವಸ್ಥಾನವಿದೆ. ಇದೀಗ ನೀರಿನ ಹರಿವು ಕಡಿಮೆ ಇದ್ದು, ನೀರಾಟವಾಡಬಹುದು. ಇದನ್ನು ಪರ್ಲ್ ವ್ಯಾಲಿ ಅಂತಾ ಸಹ ಕರೆಯಲಾಗುತ್ತೆ. ಮುತ್ಯಾಳು ಅಂದರೆ ಮುತ್ತು, ಮುದುಡು ಅಂದರೆ ಕೊಳ ಎಂದರ್ಥ. ಇಲ್ಲಿನ ಜಲಪಾತದ ಹರಿವು ಮುತ್ತುಗಳನ್ನು ಸುರಿದಂತೆ ಭಾಸವಾಗುತ್ತದೆ. ಅದಕ್ಕೆ ಮುತ್ಯಾಳ ಮಡುವು ಅನ್ನೋ ಹೆಸರು ಬಂದಿದೆ ಎನ್ನಲಾಗುತ್ತಿದೆ.

ದ್ವೀಪದ ಮೇಲೊಂದು ಊರು…ಹಾಂಕಾಂಗ್ ಹೊಸ ಪ್ಲಾನ್
ಶಿವಗಂಗಾ ಬೆಟ್ಟ:ಶಿವಗಂಗಾ ಬೆಟ್ಟ ಬೆಂಗಳೂರಿನಿಂದ 66 ಕಿಲೋ ಮೀಟರ್ ದೂರದಲ್ಲಿದೆ. ನಾಲ್ಕು ಮುಖಗಳನ್ನು ಹೊಂದಿರೋ ರೋಚಕ ಬೆಟ್ಟವಿದೆ. ಶಿವಗಂಗಾ ಬೆಟ್ಟವನ್ನು ದಕ್ಷಿಣ ಕಾಶಿ ಅಂತಾ ಕರೆಯಲಾಗುತ್ತೆ. ಪೂರ್ವದಿಂದ ನಂದಿಯ ಹಾಗೆ, ಪಶ್ಚಿಮಕ್ಕೆ ಗಣೇಶನಂತೆ, ದಕ್ಷಿಣದಿಂದ ಶಿವಲಿಂಗದ ಹಾಗೆ, ಉತ್ತರದಿಂದ ನಾಗರ ಹಾವಿನಂತೆ ಕಾಣಿಸುತ್ತದೆ. ಗಂಗಾಧರೇಶ್ವರ ಹಾಗೂ ಹೊನ್ನಾದೇವಿಯನ್ನು ಬೆಟ್ಟದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಪಾತಾಳ ಗಂಗೆ ದರ್ಶನ ಪಡೆಯಬಹುದು. ಟ್ರೆಕ್ಕಿಂಗ್ ಮಾಡುವವರಿಗೆ ಅದ್ಭುತ ತಾಣ.
Image result for shivaganga hills

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!