ಉಪಯುಕ್ತ ಮಾಹಿತಿ

ಆಫೀಸ್ ಒಳಗೆ ಕೆಲಸ ಮಾಡುವವರು ಫಿಟ್ನೆಸ್ ಗೆ ಹೀಗೆ ಮಾಡಿ

ಆಫೀಸ್ ಒಳಗೆ ಕೆಲಸ ಮಾಡುವವರಲ್ಲಿ ಒಂದಿಷ್ಟು ಸಮಸ್ಯೆಗಳು ಕಾಡುತ್ತವೆ. ಒಂದೇ ಕಡೆ ಕುಳಿತು ಕೆಲಸ ಮಾಡೋ ನೌಕರರು, ಡೆಸ್ಕ್ ವರ್ಕೌಟ್ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಅದ್ಹೇಗೆ ಅನ್ನೋದು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.

Image result for office
ಆ್ಯಕ್ಟಿವಿಟಿ ಆಗಿರಬೇಕು:ಹೆಚ್ಚು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಹೊರಗಡೆ ಎಲ್ಲಿಯೂ ಹೋಗದೆ, ಒಂದೆಡೆ ಕುಳಿತು ಕಾರ್ಯ ನಿರ್ವಹಿಸುವವರಲ್ಲಿ ಒಂದಿಷ್ಟು ಫಿಸಿಕಲ್ ಆ್ಯಕ್ಟಿವಿಟಿ ಅಗತ್ಯ. ದೇಹ ರಿಲಾಕ್ಸ್ ಆಗಲು ಮಳೆಗಾಲದಲ್ಲೂ ಒಂದಿಷ್ಟು ಓಡಾಟ ಮುಖ್ಯ. ಕಚೇರಿಯಲ್ಲಿ ಜಿಮ್ ವ್ಯವಸ್ಥೆ ಇದ್ದರೇ ಬಳಸಿಕೊಳ್ಳಿ. ಯೋಗ ಹಾಗೂ ಮೆಡಿಟೇಷನ್ ರೂಮ್ ಇದ್ದಲ್ಲಿ ಅಟೆಂಡ್ ಆಗಿ. ಅಕ್ಕಪಕ್ಕದಲ್ಲಿ ಇದ್ದಲ್ಲಿ ಆಫೀಸಿನ ಸಮಯದ ನಂತರ ಅಟೆಂಡ್ ಮಾಡಿ. ಕೊಂಚ ರಿಲಾಕ್ಸ್ ಆಗಲು ಪ್ರತಿಯೊಬ್ಬರಿಗೂ ವರ್ಕೌಟ್ ಅಗತ್ಯವಾಗಿದೆ.

ಕ್ಯಾಬಿನ್ ವ್ಯಾಯಾಮ: ಕ್ಯಾಬಿನ್ನೊಳಗೆ ವ್ಯಾಯಾಮ ಮಾಡುವುದನ್ನ ರೂಢಿಸಿಕೊಳ್ಳಬೇಕು. ಕುಳಿತಲ್ಲೆ ವ್ಯಾಯಾಮ ಮಾಡುವ ಒಂದಿಷ್ಟು ಎಕ್ಸೆರ್ಸೈಸ್ಗಳನ್ನ ಕಲಿತುಕೊಳ್ಳುವುದು, ಸಮಯ ಸಿಕ್ಕಾಗ ಅಭ್ಯಾಸ ಮಾಡುವುದು ಒಳ್ಳೆಯದು. ಸದಾ ಕುಳಿತೇ ಕೆಲಸ ಮಾಡುವ ಬದಲು ಮಧ್ಯೆ ಮಧ್ಯೆ ನಿಲ್ಲುವ ಹಾಗೂ ನಿಂತು ಮಾಡಬಹುದಾದ ಕಾರ್ಯಗಳನ್ನ ಮಾಡಿ. ಡೆಸ್ಕ್ನಲ್ಲೆ ಕುಳಿತು ಅತ್ತಿತ್ತ ದೇಹವನ್ನು ಸ್ಟ್ರೆಚ್ ಮಾಡಿ. ಇದು ಮಸ್ಸಲ್ ಫ್ರೀ ಮಾಡುತ್ತದೆ.

ಆನ್ಲೈನ್ ಟ್ಯೂಷನ್: ಟ್ರೇನರ್ಗಳಿಂದ ವ್ಯಾಯಾಮ ಕಲಿಯಲು ಆಗದಿದ್ರೆ, ಆನ್ಲೈನ್ ಟ್ಯುಟೋರಿಯಲ್ ನೋಡಿ ವ್ಯಾಯಾಮ ಮಾಡಬಹುದು. ಇದಕ್ಕೆಂದೇ ಸಾಕಷ್ಟು ವೆಬ್ ಸೈಟ್ ಕಾರ್ಯ ನಿರ್ವಹಿಸುತ್ತಿವೆ. ಆನ್ಲೈನ್ ಟ್ರೇನರ್ಸ್ ಕೂಡ ನಿಮ್ಮ ಸಮಯಕ್ಕನುಗುಣವಾಗಿ ದೊರೆಯುತ್ತಾರೆ. ಇದನ್ನ ಸಹ ಬಳಸಿಕೊಳ್ಳಬಹುದು.

Image result for office

ಒಳಾಂಗಣದಲ್ಲೆ ತಿರುಗಾಡಿ:ಸಮಯ ಸಿಕ್ಕರೆ ಸೋಷಿಯಲ್ ಮೀಡಿಯಾದಲ್ಲಿ ಮುಳುಗಬೇಡಿ. ಕಚೇರಿಯಲ್ಲಿನ ಕೆಲಸ ಕಾರ್ಯಗಳ ಮಧ್ಯೆ ಆಫೀಸ್ ಬಾಯ್ ಕರೆಯುವ ಬದಲು ನೀವೇ ಕೊಂಚ ಓಡಾಡಿ. ನಿಮ್ಮ ಕೆಲಸ ನೀವೇ ಮಾಡಿ ನೋಡಿ. ಸ್ನೇಹಿತರೊಂದಿಗೆ ತಿರುಗಾಡುತ್ತಲೇ ಮಾತನಾಡಿ. ಲಿಫ್ಟ್ ಬದಲು ನೀವೇ ಸ್ಟೇರ್ ಕೇಸ್ ಬಳಸಿ. ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ರೆ ಬೇಡ.

ಓಡಾಟ ಇರಲಿ:ಹೆಚ್ಚೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಆಗಾಗ್ಗೆ ಬಾತ್ ರೂಮ್ ಬ್ರೇಕ್ ತೆಗೆದುಕೊಳ್ಳಬಹುದು. ನಿಮ್ಮ ಸೌಂದರ್ಯ ಕೂಡ ಸಂರಕ್ಷಿಸಿಕೊಳ್ಳಬಹುದು. ನಿಮ್ಮ ವಾಹನವನ್ನ ಆದಷ್ಟೂ ದೂರವೇ ಪಾರ್ಕ್ ಮಾಡಿ. ಪಾರ್ಕಿಂಗ್ ಹತ್ತಿರವಿರಲಿ ಎಂಬ ಮನೋಭಾವ ಬೇಡ. ಓಡಾಟಕ್ಕೆ ಆಸ್ಪದವಾಗಲಿ. ಹೀಗೆ ಒಂದಿಷ್ಟು ಇನ್ ಸೈಡ್ ವರ್ಕೌಟ್ ಮಾಡಿದ್ರೆ ನೀವು ಫಿಟ್ ಆ್ಯಂಡ್ ಫೈನ್ ಆಗಿರಬಹುದು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!