ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ದರದಲ್ಲಿ ಸಿಗುವ ತರಕಾರಿ ಎಂದರೆ ಅದು ಎಲೆಕೋಸು. ಇದನ್ನು ತಿನ್ನುವುದರಿಂದ ನಮ್ಮ ತ್ವಚೆಯ ಆರೋಗ್ಯ ಕಾಪಾಡಬಹುದು ಮತ್ತು ಚರ್ಮಕ್ಕೆ ಕಾಂತಿ ನೀಡಬಹುದು. ಎಲೆಕೋಸನ್ನು ವಿವಿಧ ರೀತಿಯಲ್ಲಿ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು.
1. ಎಲೆಕೋಸು ತ್ವಚೆಗೆ ಕೂಡ ತುಂಬಾ ಒಳ್ಳೆಯದು ಆರೋಗ್ಯಕಾರಿ ಹಾಗೂ ಯೌವನಯುತ ತ್ವಚೆ ಪಡೆಯಲು ಎಲೆಕೋಸು ತಿನ್ನುವುದು ಉತ್ತಮ.
2. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಜತೆಯಾಗಿ ಚರ್ಮವನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ತಪ್ಪಿಸುವುದು. ಇದು ವಯಸ್ಸಾದ ಲಕ್ಷಣಗಳನ್ನು ತಡೆಯುವ ಅದ್ಭುತ ಆಹಾರವಾಗಿದೆ.
3. ಇದು ಎಲ್ಲಾ ರೀತಿಯ ಧೂಳು, ಕೊಳೆ ಮತ್ತು ಕಲ್ಮಶವನ್ನು ತೆಗೆದುಹಾಕಿ, ತ್ವಚೆಯನ್ನು ಶುದ್ಧೀಕರಿಸುವುದು ಮತ್ತು ಶುಚಿಯಾಗಿಸುವುದು.
4. ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕುವಂತೆ ಮಾಡುವುದು. ಇದನ್ನು ನಿಯಮಿತವಾಗಿ ತಿನ್ನುವುದರಿಂದ ಚರ್ಮಕ್ಕೆ ಹೊಳಪು ನೀಡುವುದು.
5. ಎಲೆಕೋಸು ಸೇವಿಸುವುದರಿಂದ ಚರ್ಮಕ್ಕೆ ತೇವಾಂಶ ಸಿಗುವುದು ಮತ್ತು ಒಣ ಚರ್ಮದ ಸಮಸ್ಯೆ ದೂರವಾಗುವುದು.
6. ಇದರಲ್ಲಿ ಇರುವಂತಹ ಸಲ್ಫರ್ ಅಂಶವು ದೇಹದಲ್ಲಿ ಕೆರೆಟಿನ್ ನ್ನು ಹೆಚ್ಚಿಸುವುದು.ಕೆರೆಟಿನ್ ನಿಂದಾಗಿ ಕೂದಲು,ಚರ್ಮ ಮತ್ತು ಉಗುರು ಆರೋಗ್ಯವಾಗಿ ಇರುವುದು.
ಇದನ್ನು ಹಾಗಾಗೇ ಬಳಸಿದರೆ ಆಗ ಖಂಡಿತವಾಗಿಯೂ ಇದರ ಪರಿಣಾಮ ಕಂಡುಬರುವುದು.