ಸುದ್ದಿ

‘ವಿದ್ಯಾರ್ಥಿಭವನ’ದ ರುಚಿಕರ ದೋಸೆ ಜೀವತಳೆದ ಕಥೆಯೊಂದು ನಾಟಕವಾಗಿ ಜನರ ಮುಂದೆ

      ಬೆಂಗಳೂರಿನ ದಂತ ಕಥೆ ‘ವಿದ್ಯಾರ್ಥಿ ಭವನ ಮಲ್ಲೇಶ್ವರಕ್ಕೆ ಬರಲಿದೆ’ ಎಂಬ ಸುದ್ದಿಗೆ ರೆಕ್ಕೆ ಪುಕ್ಕಗಳ ಭಾರವೋ ಭಾರ. ಆದರೆ ವಿದ್ಯಾರ್ಥಿ ಭವನಕ್ಕೆ ಒಂದೇ ಗುರಿ. ಅದು, ತನ್ನ ಗುಣ ಮಟ್ಟ ಕಾಪಾಡಿ ಕೊಂಡು ಗ್ರಾಹಕರಿಗೆ ಎಂದಿನ ಅತ್ಯುತ್ತಮ ಸೇವೆ ಸಲ್ಲಿಸಿವುದೇ. ಇದು ಬಿಟ್ಟು ಇನ್ನೊಂದು ಆಲೋಚನೆ ಇಲ್ಲ. ವಿದ್ಯಾರ್ಥಿ ಭವನಕ್ಕೆ ದೋಸೆಯಷ್ಟೇ ಸವಿಯಾದ ವಿಭಿನ್ನ ಆಯಾಮವೂ ಇದೆ. ಅದು ಬಸವನಗುಡಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅದರ ಸಕ್ರಿಯ ಪಾತ್ರ. ಈ ಪಾತ್ರಕ್ಕೊಂದು ಹೊಸ ಆಯಾಮವೀಗ. ಬೆಂಗಳೂರು ಥೀಯೇಟರ್ ಫೌಂಡೇಶನ್ ನೊಂದಿಗೆ ಸಾಹಚರ್ಯ. ನಾಟಕ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು.
   ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಾಂಧಿ ಬಜಾರಿನಲ್ಲಿ ಕಳೆದ ಎಂಟು ದಶಕಗಳಿಂದ ನೂರಾರು ಅವಿಸ್ಮರಣೀಯ ಅನುಭವಗಳಿಗೆ ಸಾಕ್ಷಿಯಾಗಿ ಜನಪ್ರೀತಿಗಳಿಸಿರುವ ‘ವಿದ್ಯಾರ್ಥಿಭವನ’ದ ರುಚಿಕರ ದೋಸೆ ಜೀವತಳೆದ ಕಥೆಯೊಂದು ನಾಟಕವಾಗಿ ಜನರ ಮುಂದೆ ಬರಲಿದೆ.
ಖ್ಯಾತ ನಾಟಕ ರಚನೆಕಾರ ರಾಜೇಂದ್ರ ಕಾರಂತರು ರಚಿಸಿರುವ ‘ವಿದ್ಯಾರ್ಥಿ ಭವನ’ ನಾಟಕದ ಮೊದಲ ನಾಲ್ಕು ಪ್ರದರ್ಶನಗಳು ಅರ್ಜುನ ಕಬ್ಬಿಣ ನಿರ್ದೇಶನದಲ್ಲಿ 2022ರ ಮೇ 6, ಮೇ 7 ಮತ್ತು ಮೇ 8 ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಅನಾವರಣಗೊಳ್ಳಲಿದೆ.
credit: vidyarthi bhavana fb wall

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!