ನಮ್ಮ ರಾಮನಗರ

‘ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ

ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿದರು.

ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ‘ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರು, ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಲಹೆ ಸೂಚನೆಗಳನ್ನು ನೀಡಿದರೆ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳುತ್ತದೆ. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಸಹ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿದ ವಿಜಯ್ ರಾಂಪುರ ಮಾತನಾಡಿ ಸಾಧನೆಯನ್ನು ಎಲ್ಲರೂ ಮಾಡಬಹುದು, ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಸತತ ಅಭ್ಯಾಸ ಶ್ರಮದಿಂದ ಪ್ರಯತ್ನ ಪಡಬೇಕು. ಜನರು ಸಾಯುವವರೆಗೆ ಟೀಕಿಸುತ್ತಲೆ ಇರುತ್ತಾರೆ, ಟೀಕೆ, ಆರೋಪಗಳ ಗಮನ ಕೊಡದೆ ಸಾಧನೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.


ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ ಮಾತನಾಡಿ ರಾಮನಗರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ವಾರಕ್ಕೊಮ್ಮೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಧಕರ ಸಾಧನೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.2020ನೇ ಸಾಲಿನಲ್ಲಿ ಪೋಸ್ಟ್ ಕಾರ್ಡ್‍ನ ಒಂದು ಬದಿಯಲ್ಲಿ ‘ಇಂಡಿಯಾ’ ಎಂಬ ಪದವನ್ನು 11,865 ಬಾರಿ ಒಟ್ಟು 59,325 ಅಕ್ಷರಗಳನ್ನು ಬರೆದು ‘ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದು ವಿಜಯ್ ರಾಂಪುರ ಅವರು ರಾಮನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಹಿತ್ಯ, ಸಾಂಸ್ಕøತಿಕ, ಜಾನಪದ, ರಂಗಭೂಮಿ, ಜಾಗೃತಿ ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.

ಲವಂಗದಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಓದಿ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತಾ, ಶಿಕ್ಷಕರಾದ ರೂಪಶ್ರೀ, ಡಿ.ಆರ್. ನೀಲಾಂಬಿಕಾ, ವಕೀಲ ವಿನೋದ್ ಭಗತ್, ಸಮಾಜ ಸೇವಕ ಅಮಿತ್ ರಾಜ್ ಶಿವ, ಸಾಮಾಜಿಕ ಕಾರ್ಯಕರ್ತೆ ಎಸ್. ಪದ್ಮರೇಖ, ಯುವ ಕವಿಗಳಾದ ಲಕ್ಷ್ಮಿಕಿಶೋರ್ ಅರಸ್, ಎಂ.ಎ. ತುಳಸೀಧರ, ಆರ್. ರವಿಕಿರಣ್, ಆರ್. ಸುಭಾಷ್, ಬೈರವ್, ಅರ್ಚಕ ಶ್ರೀನಿವಾಸಬಾಬು ಇತರರು ಉಪಸ್ಥಿತರಿದ್ದರು.

Credit: Rudreshwar

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!