ಸುದ್ದಿ

ಅವಳಿ ಜವಳಿ ಮಕ್ಕಳ ಸ್ವರ್ಗ..ಕೇರಳ

ಇದೊಂದು ಪುಟ್ಟ ಗ್ರಾಮ. ಕೇರಳ ರಾಜ್ಯದ ಈ ಊರು ವಿಶ್ವದಲ್ಲಿಯೇ ತನ್ನ ವಿಶೇಷತೆಯಿಂದ ಗುರುತಿಸಿಕೊಂಡಿದೆ. ನೀವೇನಾದರೂ ಈ ಊರಿಗೆ ಹೋದ್ರೆ, ನಿಮ್ಗೆ ಖಂಡಿತ ಶಾಕ್ ಕಾದಿರುತ್ತೆ. ಅದೇನಪ್ಪ ವಿಶೇಷ ಅಂದ್ರಾ.. ನೀವು ಎಲ್ಲಿಯೂ ನೋಡಿರಲು ಸಾಧ್ಯವಿಲ್ಲದಷ್ಟು ಅವಳಿ ಮಕ್ಕಳು ಈ ಊರಿನಲ್ಲಿವೆ.

ಹೌದು, ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಕೊದಿನ್ಹಿ ಅನ್ನೋ ಗ್ರಾಮದಲ್ಲಿರುವ ಮಕ್ಕಳೆಲ್ಲ ಅವಳಿ ಮಕ್ಕಳು. ಹೀಗಾಗಿ ಈ ಊರು ‘ಟ್ವಿನ್ ಟೌನ್’ ಅಂತಾ ಕರೆಸಿಕೊಂಡಿದೆ. ಈ ಊರಿನಲ್ಲಿ ಹುಟ್ಟುವ ಅವಳಿ ಮಕ್ಕಳ ಸಂಖ್ಯೆ ಜಗತ್ತಿನಲ್ಲಿಯೇ ಅತೀ ಹೆಚ್ಚು. ಶೇಕಡ 100ರಷ್ಟು ಅವಳಿ ಮಕ್ಕಳು ಇಲ್ಲಿ ಪ್ರತಿ ವರ್ಷ ಜನಿಸುತ್ತವೆ ಅನ್ನೋ ಮಾಹಿತಿ ಇದೆ.

Related image
ಈ ಪುಟ್ಟ ಊರಿನಲ್ಲಿ ಇರೋದು ಕೇವಲ 2000 ಜನಸಂಖ್ಯೆ ಮಾತ್ರ. ಅದರಲ್ಲಿ ಬರೋಬ್ಬರಿ 204 ಅವಳಿ ಜವಳಿ ಮಕ್ಕಳಿವೆ. ಪ್ರತಿ ವರ್ಷ 15 ಜೋಡಿ ಅವಳಿ ಮಕ್ಕಳು ಇಲ್ಲಿ ಹುಟ್ಟತ್ತವೆ. ಇದು ಸಂಶೋದಕರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ಇದರ ಹಿಂದಿರುವ ರಹಸ್ಯ ಮಾತ್ರ ತಿಳಿದಿಲ್ಲ.

ಈ ಊರಿನ ಜನರು ಹೇಳುವ ಪ್ರಕಾರ 1949ರಿಂದಲ್ಲೇ ಇಲ್ಲಿ ಅವಳಿ ಮಕ್ಕಳು ಜನನವಾಗುತ್ತಿವೆ. ಇಲ್ಲಿನ ಹೆಣ್ಮಕ್ಕಳು ಹೊರಗಿನ ಹುಡ್ಗನನ್ನ ಮದ್ವೆಯಾದರೂ, ಇಲ್ಲಿನ ಹುಡುಗರು ಬೇರೆ ಬೇರೆ ಸಮುದಾಯದಲ್ಲಿ ಮದುವೆಯಾದರೂ, ಇವರಿಗೆ ಜನಿಸುವ ಮಕ್ಕಳು ಅವಳಿ ಜವಳಿ ಆಗಿರುತ್ತವೆ ಅಂತಾರೆ ಗ್ರಾಮಸ್ಥರು. ಈ ಬಗ್ಗೆ ಜೀನ್ಸ್, ಆನುವಂಶಿಕ ಅಂಶಗಳು, ಹವಮಾನ ಅಂಶಗಳು, ಪ್ರಾದೇಶಿಕತೆಯ ವಿಶೇಷಗಳಲ್ಲೆವನ್ನ ಸಹ ಅಧ್ಯಯನ ಮಾಡಲಾಗಿದೆ. ಆದರೆ, ಇಲ್ಲಿ ಇಷ್ಟೊಂದು ಅವಳಿ ಮಕ್ಕಳ ಹುಟ್ಟಲು ಕಾರಣ ಮಾತ್ರ ಸ್ಪಷ್ಟವಾಗಿ ತಿಳಿಯುತ್ತಿಲ್ಲ.

Image result for kerala twins babies images
ಈ ಗ್ರಾಮದಲ್ಲಿ ನೀವು ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ಜೀವಗಳ ತನಕ ಅವಳಿ ಜವಳಿ ನೋಡಬಹುದು. ಇದು ಹೇಗೆ ಆಗಿದೆ ಅಂದ್ರೆ, ಕೇರಳ ಪ್ರವಾಸೋದ್ಯಮ ಇಲಾಖೆ ಈ ಊರಿಗೆ ಹೋಗಲು ಪ್ರವಾಸಿಗರಿಗೆ ವ್ಯವಸ್ಥೆ ಮಾಡಿದೆ. ಅಷ್ಟರ ಮಟ್ಟಿಗೆ ಈ ಊರು ಪ್ರಸಿದ್ಧಿ ಪಡೆದಿದೆ. ಮಲಪ್ಪುರಂ ಜಿಲ್ಲೆಯಿಂದ ಕೇವಲ 15 ಮೈಲಗಳಷ್ಟು ದೂರದಲ್ಲಿರುವ ಹಳ್ಳಿ, ಜಗತ್ತಿನಲ್ಲಿಯೇ ವಿಶೇಷ ಸ್ಥಾನ ಪಡೆದಿದೆ.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!