ಸುಷ್ಮಾ ಬಾಲ್ಯದ ದಿನಗಳು: ಹರಿಯಾಣದ ಅಂಬಾಲ ಕಂಟನಲ್ಲಿ ಆಗಸ್ಟ್ 14, 1953ರಲ್ಲಿ ಸುಷ್ಮಾ ಸ್ವಾರಜ್ ಜನಿಸಿದ್ರು. ಹರಿದೇವ ಶರ್ಮಾ ಹಾಗೂ ಸ್ಮೃತಿ ಲಕ್ಷ್ಮಿದೇವಿ ದಂಪತಿಯ ಮಗಳಾದ ಸುಷ್ಮಾ, ಸನಾತನ ಧರ್ಮ ಕಾಲೇಜಿನಲ್ಲಿ ವಿದ್ಯಾಭಾಸ ಮಾಡಿದ್ರು. ಪದವಿಯಲ್ಲಿ ರಾಜ್ಯಶಾಸ್ತ್ರ ಮತ್ತು ಸಂಸ್ಕೃತವನ್ನ ಮುಖ್ಯವಿಷಯವನ್ನಾಗಿ ಪಡೆದುಕೊಂಡಿದ್ರು. ಮುಂದೆ ಚಂಡಿಗಡನ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದುಕೊಂಡ್ರು.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇನ್ನಿಲ್ಲ.
ಇವರ ತಂದೆ ಆರ್ ಎಸ್ಎಸ್ ನ ಖಾಯಂ ಸದಸ್ಯರಾಗಿದ್ರು.ವಕೀಲಕಿ ಮತ್ತು ರಾಜಕೀಯ ನಂಟು 1973ರಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲಕಿ ವೃತ್ತಿಯ ಜೊತೆಗೆ ರಾಜಕೀಯದ ನಂಟು ಸಹ ಬೆಳೆಯಿತು. ಯಾಕಂದ್ರೆ, ಅದಕ್ಕೂ ಮೊದ್ಲು 1970ರಿಂದಲ್ಲೇ ಎಬಿವಿಪಿನಲ್ಲಿ ತೊಡಗಿಸಿಕೊಂಡಿದ್ರು. ಸುಷ್ಮಾ ಪತಿ ಕುಶಾಲ ಸ್ವರಾಜ್ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಜೊತೆ ಗುರುತಿಸಿಕೊಂಡಿದ್ರು. ಹೀಗಿರುವಾಗ 1975ರ ಟೈಂನಲ್ಲಿ ಫರ್ನಾಂಡಿಸ್ ಕಾನೂನು ರಕ್ಷಣಾ ಟೀಂನಲ್ಲಿ ಸುಷ್ಮಾ ಇದ್ರು. ಅಲ್ದೇ, ಜಯಪ್ರಕಾಶ ನಾರಾಯಣ ಅವರ ಚಳವಳಿಯಲ್ಲಿ ಸಹ ತೊಡಗಿಸಿಕೊಂಡಿದ್ರು.
1975 ತುರ್ತು ಪರಿಸ್ಥಿತಿ ನಂತರ ಸುಷ್ಮಾ ಸ್ವರಾಜ್ ಭಾರತೀಯ ಜನತಾ ಪಾರ್ಟಿಯನ್ನ ಸೇರಿಕೊಂಡ್ರು. ಅಲ್ಲಿಂದ ಮುಂದೆ ಬಿಜೆಪಿಯ ರಾಷ್ಟ್ರೀಯ ನಾಯಕಿ ಆಗುವ ಮಟ್ಟಕ್ಕೆ ಬೆಳೆದ್ರು. 1977ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಶಾಸಕಿಯಾದ್ರು. ಅಲ್ಲಿಂದ ರಾಜಕೀಯದ ಒಂದೊಂದೆ ಮೆಟ್ಟಿಲುಗಳನ್ನ ಏರುತ್ತಾ ಬಂದವರು ಸುಷ್ಮಾ ಸ್ವರಾಜ್.
42 – 28ರ ಮದುವೆ ಕಹಾನಿ,ಸುಷ್ಮಿತಾ ಸೇನ್ & ರ್ಹೋನ್ ಶಾಲ್ ಮದುವೆ!!?
ಸಾಕಷ್ಟು ಸೋಲು ಗೆಲುವುಗಳನ್ನ ಕಂಡ ನಾಯಕಿ ಸದಾ ನಗು ಮುಖದಿಂದಲೇ ಕಾಣಿಸಿಕೊಳ್ಳುವವರು. ಅವರ ಯಾವುದೇ ಫೋಟೋ ನೋಡಿದ್ರೂ ಸದಾ ನಗು ತುಂಬಿಕೊಂಡಿರ್ತಿತ್ತು. ಆ ಚಂದದ ನಗು ಬಿಟ್ಟು ಬೇರೆ ರೀತಿಯ ಅವರ ಫೋಟೋ ಸಿಗೋದು ತುಂಬಾ ಅಪರೂಪ. ಇಂಥಾ ನಾಯಕಿ ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಇದ್ರಿಂದಾಗಿ ಬಿಜೆಪಿ ನಾಯಕರಿಗೆ, ಅವರ ಅಭಿಮಾನಿಗಳಿಗೆ, ಹಿತೈಸಿಗಳಿಗೆ ಬರಸಿಡಿಲು ಬಂಡೆದಂತಾಗಿದೆ.
ನೀವು ಸತ್ತ ಮೇಲೆ ನಿಮ್ಮ ಜಿ-ಮೇಲ್ ಡಿಲೀಟ್ ಮಾಡೋದು ಹೇಗೆ ಗೊತ್ತಾ?
ವೈರಲ್ ಆದ ಸುಷ್ಮಾ ಕೊನೆಯ ಟ್ವೀಟ್:ಸೋಮವಾರವಷ್ಟೇ 370 ಮತ್ತು 35ಎ ವಿಧಿ ರದ್ದು ಮಾಡಲಾಗಿತ್ತು. ಈ ಬಗ್ಗೆ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಅವರು, ಧನ್ಯವಾದಗಳು ಮೋದಿಜೀ. ನನ್ನ ಇಡೀ ಜೀವನವನ್ನ ಈ ದಿನಕ್ಕಾಗಿ ಕಾಯುತ್ತಿದ್ದೆ ಅಂತಾ ಟ್ವೀಟ್ ಮಾಡಿದ್ರು. ಅದು ಕಾಕತಳಿಯವೋ ಏನೋ ಗೊತ್ತಿಲ್ಲ. ಅದೇ ದಿನ ಸಂಜೆ ಕೊನೆಯುಸಿರೆಳೆದಿದ್ದಾರೆ.
प्रधान मंत्री जी – आपका हार्दिक अभिनन्दन. मैं अपने जीवन में इस दिन को देखने की प्रतीक्षा कर रही थी. @narendramodi ji – Thank you Prime Minister. Thank you very much. I was waiting to see this day in my lifetime.
— Sushma Swaraj (@SushmaSwaraj) August 6, 2019