ಸುದ್ದಿ

ಸತತ ಪರಿಶ್ರಮ ಹಾಗೂ ಅಧ್ಯಯನ ಯಶಸ್ಸಿನ ಗುಟ್ಟು- ಡಿ. ಸೃಜನಾ

ಎಸ್.ಎಸ್.ಎಲ್.ಸಿ. 2019ರ ಫಲಿತಾಂಶ ಪ್ರಕಟಣೆಗೊಂಡಿದ್ದು, ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯ ವಿದ್ಯಾರ್ಥಿನಿ ಡಿ. ಸೃಜನಾ ಪರಿಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನುಗಳಿಸಿದ್ದಾಳೆ.

ಸತತವಾದ ಪರಿಶ್ರಮ ಮತ್ತು ಅಧ್ಯಯನವೇ ಯಶಸ್ಸಿನ ಗುಟ್ಟು ಎನ್ನುವ ಸೃಜನಾ ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಟಿ.ವಿ. ಮತ್ತು ಮೊಬೈಲ್‍ಗಳಿಂದ ದೂರನೇ ಉಳಿದು ಅಧ್ಯಯನ ಮಾಡಿದ್ದಾಳೆ. ಸದಾ ಓದು ಹಾಗೂ ವಿಶ್ರಾಂತಿ, ಇವರ ಜೀವನ ಶೈಲಿಯಾಗಿದ್ದು, ಇವರ ತಂದೆ ವಿಜ್ಞಾನ ಶಿಕ್ಷಕರಾಗಿದ್ದು, ವಿಜ್ಞಾನವನ್ನು ಹೇಳಿಕೊಡುತ್ತಿದ್ದರಂತೆ ಹಾಗೆಯೇ ಇವರ ತಂದೆಯ ಸ್ನೇಹಿತರಾದ ಸೋಮಶೇಖರ್‍ರವರು ಗಣಿತ ವಿಷಯವನ್ನು ಹೇಳಿಕೊಟ್ಟಿದ್ದರು.

ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹದಿಂದ ಈ ಸಾಧನೆಮಾಡಲು ಸಾಧ್ಯವಾಯಿತು ಎನ್ನುವ ಸೃಜನಾ ಅವರ ತಂದೆ ತಾಯಿ ಆಶಯದಂತೆ ವೈದ್ಯೆಯಾಗಬೇಕೆಂಬ ಕನಸನ್ನು ಹೊಂದಿದ್ದಾರೆ. ಸೃಜನಾ ಗೆ ಬದುಕಿಗೊಂದು ಭರವಸೆಯ ಮಾತು ವೆಬ್ ಸೈಟ್‍ವತಿಯಿಂದ ಅಭಿನಂದನೆಗಳು.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!