ಚಂದನವನದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಬ್ಯಾಂಕಾಕ್‍ನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆಂದು ಸುದ್ದಿ ಬಂದಿದೆ. ನಟ ವಿಜಯ್ ರಾಘವೇಂದ್ರರವರು 2007 ಆಗಸ್ಟ್ 26ರಂದು ಸ್ಪಂದನಾ ರವರನ್ನು ವಿವಾಹವಾಗಿದ್ದರು. ಇವರು ಮೂಲತ: ಮಂಗಳೂರಿನವರಾಗಿದ್ದು, ಇವರ ತಂದೆ ಬಿ.ಕೆ ಶಿವರಾಂ ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು.
ಫ್ಯಾಮಿಲಿ ಸದಸ್ಯರ ಜೊತೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ. ರಾತ್ರಿ ಕೊಠಡಿಯಲ್ಲಿ ಮಲಗಿದ್ದ ಸ್ಪಂದನಾರವರು ಮಲಗಿದ್ದ ಸ್ಥಳದಲ್ಲೇ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್ ರಾಘವೇಂದ್ರವರು ಪತ್ನಿ ಸ್ಪಂದನಾರವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮುದ್ದಾದ ಜೋಡಿಗೆ ಒಬ್ಬನೇ ಮಗ. ಇವರ ಅಕಾಲಿಕ ನಿಧನ ಸುದ್ದಿ ಇಡೀ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ
ಬ್ಯಾಂಕಾಕ್‍ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಬೆಂಗಳೂರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಸ್ಪಂದನಾ ರವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಂಧುಗಳು, ಗಣ್ಯರು, ವಿಜಯ್ ರಾಘವೇಂದ್ರರವರ ಮನೆಗೆ ತೆರಳಿ ಮೃತಕುಟುಂಬಕ್ಕೆ ಸಾಂತ್ವನ ಹೇಳಿ ಕಂಬನಿ ಮಿಡಿಯುತ್ತಿದ್ದಾರೆ.