ದಿನಾಂಕ 24.10.2020ರಂದು ರೋಟರಿ ಸಿಲ್ಕ್ ಸಿಟಿ ರಾಮನಗರ ವತಿಯಿಂದ ಅಂತರರಾಷ್ಟ್ರೀಯ ಪೋಲಿಯೋ ನಿರ್ಮೂಲನೆ ದಿನಾಚರಣೆಯನ್ನು ಆಚರಿಸಲಾಯಿತು.
ಐಜೂರು ವೃತ್ತದಲ್ಲಿ ರಾಮನಗರ ಸಂಚಾರಿ ಪೋಲಿಸ್ ಠಾಣೆಯ ಸಹಕಾರದೊಂದಿಗೆ ಪೋಲಿಯೋ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಬೇಕೆಂದು ಜಾಗೃತಿ ಮೂಡಿಸಲಾಯಿತು. ರೋಟರಿ ಸಿಲ್ಕ್ ಸಿಟಿ ಸದಸ್ಯರು ಟ್ರಾಪಿಕ್ ಸಿಗ್ನಲ್ ಬಳಿ ವಾಹನಗಳಿಗೆ ಜಾಗೃತಿ ಸಾರುವ ಸ್ಟಿಕ್ಕರ್‍ಗಳನ್ನು ಅಂಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರೋ. ಎನ್. ರವಿಕುಮಾರ್, ಪ್ರತಿವರ್ಷ ಅಕ್ಟೋಬರ್ 24ರಂದು ವಿಶ್ವ ಪೊಲಿಯೋ ದಿನ ಆಚರಿಸಲಾಗುತ್ತದೆ. ಪೊಲಿಯೋ ಲಸಿಕೆ ಕಂಡು ಹಿಡಿದ ತಂಡದ ನೇತೃತ್ವ ವಹಿಸಿದ್ದ ವಿಜ್ಞಾನಿ ಜೊನಾಸ್ ಸಾಕ್ ಅವರ ಜನ್ಮದಿನವಿಂದು ಈ ದಿನವನ್ನು ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ದಶಕಗಳ ಹಿಂದೆ ಈ ದಿನವನ್ನು ಅಂತರಾಷ್ಟ್ರೀಯ ಪೊಲಿಯೋ ನಿರ್ಮೂಲನೆ ದಿನವನ್ನಾಗಿ ಆಚರಿಸಿತು. ಮುಂದೇ ರೋಟರಿ ಸಂಸ್ಥೆಯೇ 1988ರಲ್ಲಿ ಜಾಗತಿಕ ಪೊಲಿಯೋ ನಿರ್ಮೂಲನೆ ಅಭಿಯಾನ ಆರಂಭಿಸುವುದಕ್ಕೂ ಪ್ರೇರಣೆಯಾಯಿತು ಎಂದು ತಿಳಿಸಿದರು.
ಈ ಸಂದರ್ಭದಲಿ ಸಂಚಾರಿ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್‍ಗಳಾದ ಶ್ರೀ ಭಾಸ್ಕರ್, ಶ್ರೀ ಸೂರ್ಯನಾರಾಯಣ್ ಸಹಾಯಕ ಪೋಲಿಸ್ ಸಬ್‍ಇನ್ಸ್‍ಪೆಕ್ಟರ್ ಶ್ರೀ ಕೆ. ಸ್ವಾಮಿ ಹಾಗೂ ರೋಟರಿ ಸಿಲ್ಕ್ ಸಿಟಿಯ ಮಾಜಿ ಅಧ್ಯಕ್ಷರುಗಳಾದ ರೋ. ಎ.ಜೆ. ಸುರೇಶ್, ರೋ. ಎಲ್ ಪ್ರಭಾಕರ್, ಸಂಸ್ಥಾಪಕ ಅಧ್ಯಕ್ಷರಾದ ರೋ ಗೋಪಾಲ್, ಪೋಲಿಯೋ ಛೇರ್ಮನ್ ರೋ. ರಾಘವೇಂದ್ರ ಕೆ. ಸಲಹೆಗಾರರಾದ ರೋ. ಕೆ.ವಿ. ಉಮೇಶ್, ನಿರ್ದೇಶಕರುಗಳಾದ ರೋ. ಲತಾಗೋಪಾಲ್ ರೋ. ಸೋಮಣ್ಣ, ರೋ. ನವೀನ್ ರೋ. ಉಮಾಶಂಕರ್ ರೋ. ಪ್ರದೀಪ್, ರೋ. ರಾಜು, ರೋ. ದೀಪಕ್ ರೋ. ರಾಮು ರೋ. ಶೇಖರ್ ರೋ. ಪರಮೇಶಿ, ರೋ. ಗುರು. ರೋ. ಮಂಜುನಾಥ್, ಉಪಸ್ಥಿತರಿದ್ದರು.
-Naveen, Public Image, Rotary Silk City, Ramangara