ನಮ್ಮ ರಾಮನಗರ

ಇಂದು ರೋಟರಿ ಸಿಲ್ಕ್ ಸಿಟಿ 2020-21ನೇ ಸಾಲಿನ ಪದವಿ ಸ್ವೀಕಾರ ಸಮಾರಂಭ

ರೋಟರಿ ಸಿಲ್ಕ್ ಸಿಟಿ ರಾಮನಗರ 2020-21ನೇ ಸಾಲಿನ ಅಧ್ಯಕ್ಷರಾಗಿ ರೋ. ರವಿಕುಮಾರ್ ಎನ್. ಕಾರ್ಯದರ್ಶಿಯಾಗಿ ರೋ ರಘುಕುಮಾರ್ ರವರು ದಿನಾಂಕ 07.07.2020ರ ಮಂಗಳವಾರ ಸಂಜೆ 5 ಗಂಟೆ ಗುರುಶ್ರೀ ಮ್ಯಾನ್‍ಷನ್ ಸಿ.ಎ. ಕಚೇರಿ ಅರ್ಕಾವತಿ ಬಡಾವಣೆ ರಾಮನಗರ ಇಲ್ಲಿ ನಡೆಯುವ ಸರಳವಾದ ಸಮಾರಂಭದಲ್ಲಿ ಪದವಿ ಸ್ವೀಕಾರ ಮಾಡಲಿದ್ದಾರೆಇವರ ಜೊತೆ ನೂತನ ಪದಾಧಿಕಾರಿಗಳು ಸಹ ಪದವಿ ಸ್ವೀಕಾರ ಮಾಡಲಿದ್ದು, ಈ ಸಂದರ್ಭದಲ್ಲಿ 9 ಜನ ನೂತನ ಸದಸ್ಯರು ರೋಟರಿ ಸಿಲ್ಕ್ ಸಿಟಿ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಅನುಸ್ಥಾಪನಾಧಿಕಾರಿಯಾಗಿ ಜಿಲ್ಲಾ ಕಾರ್ಯದರ್ಶಿ ರೋ. ಬಿ. ಕರೀಗೌಡ ಮತ್ತು ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಪಾಲಕರಾದ ರೋ. ಪಿ. ಶಿವಪ್ಪನವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿಯ ರೇಷ್ಮೆನಾಡು ಪತ್ರಿಕೆ ಬಿಡುಗಡಯಾಗಲಿದೆ.

2019-20ನೇ ಸಾಲಿನ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ಎ. ಜೆ. ಸುರೇಶ್ ರವರ ಅವಧಿಯಲ್ಲಿ 85ಕ್ಕೂ ಹೆಚ್ಚೂ ಸಮಾಜಮುಖಿ ಕೆಲಸಗಳು ನಡೆದಿದ್ದನ್ನು ಸ್ಮರಿಸಬಹುದು. ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಅಧ್ಯಕ್ಷರಾದ ಎ.ಜೆ. ಸುರೇಶ್, ಕಾರ್ಯದರ್ಶಿ ರೊ ಶಿವರಾಜ್ ಆರ್. ಮತ್ತು ಸಿಲ್ಕ್ ಸಿಟಿಯ ಸದಸ್ಯರು ಪಾಲ್ಗೋಳ್ಳಲಿದ್ದಾರೆ.

ಈ ಪದವಿ ಸ್ವೀಕಾರ ಸಮಾರಂಭದ ನೇರ ಪ್ರಸಾರ ಯೂ ಟ್ಯೂಬ್ ಚಿಗುರು ಟಿ.ವಿ ಯಲ್ಲಿ ಪ್ರಸಾರವಾಗಲಿದ್ದು, ಕೊವಿಡ್ 19 ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಮನೆಯಲ್ಲಿಯೇ ಕುಳಿತು ವೀಕ್ಷಿಸಲು ಕೋರಿದೆ.

-ನವೀನ್ ರಾಮನಗರ
ಪಬ್ಲಿಕ್ ಇಮೇಜ್, ರೋಟರಿ ಸಿಲ್ಕ್ ಸಿಟಿ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!