ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದ ರೀನಾ ದ್ವಿವೇದಿ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದರು. ಹಳದಿ ಸೀರೆಯುಟ್ಟುಕೊಂಡಿದ್ದ ಅವರ ಫೋಟೋಗಳು ಭಾರೀ ವೈರಲ್ ಆಗಿದ್ದವು. ಇವಿಎಂ ಮಶೀನ್ ಹಿಡಿದುಕೊಂಡು ಮತಗಟ್ಟೆಗೆ ಆಗಮಿಸುತ್ತಿದ್ದ ವೇಳೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಬಳಿಕ ಇವರು ಹಳದಿ ಸೀರೆಯ ಬೆಡಗಿ ಎಂದೇ ಫೇಮಸ್ ಆದರು. ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಇಚ್ಛೆ ಇಟ್ಟುಕೊಂಡಿರುವ ರೀನಾ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗುತ್ತಿದೆ.
ಹಳದಿ ಸೀರೆಯುಟ್ಟುಕೊಂಡು ಫೋಸ್ ಕೊಟ್ಟಿದ್ದ ರೀನಾ ಇಂದು ಹಸಿರು ವರ್ಣದ ಸೀರೆಯುಟ್ಟು ಸೊಂಟ ಬಳುಕಿಸಿದ್ದಾರೆ. ಹಿಂದಿ ಬಿಗ್ ಬಾಸ್ ಖ್ಯಾತಿಯ ಹರ್ಯಾಣ ಡಾನ್ಸರ್ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿರುವ ರೀನಾ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಖುದ್ದು ರೀನಾ ದ್ವಿವೇದಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾನಾದಲ್ಲಿ ಯಾವಾಗ ಯಾರು ಫೇಮಸ್ ಆಗುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ರೀನಾ ವಿಡಿಯೋ ನೋಡಿ.
teri aakya ka yo kajal 😂
Posted by Reena Dwivedi on Wednesday, July 10, 2019