ಸುದ್ದಿ

ಲಾಕ್‍ಡೌನ್ ವಿಸ್ತರಣೆ ಮತ್ತೆ ಆಗುತ್ತಾ ಇಲ್ವಾ ನರೇಂದ್ರ ಮೋದಿಯವರ 5ನೇ ಭಾಷಣ ಇಂದು ರಾತ್ರಿ 8ಕ್ಕೆ

 ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶದ ಜನತೆಯನ್ನುದೇಶಿಸಿ ಭಾಷಣ ಮಾಡಲಿದ್ದಾರೆ. ಕೋರೊನಾ ದೇಶಕ್ಕೆ ಕಾಲಿಟ್ಟ ಮೇಲೆ ಮೋದಿಯವರು ಮೊದಲು ಜನತಾ ಕಪ್ರ್ಯೂಗೆ ಕರೆ ನೀಡುವ ಮೂಲಕ ಮಾರ್ಚ್ ನಲ್ಲಿ ಮೊದಲ ಭಾಷಣ ಮಾಡಿದ್ದರು.

ಲಾಕ್ ಡೌನ್ ಘೋಷಣೆ ಮಾಡಲು ಮತ್ತೇ ಭಾಷಣ ಮಾಡಿದ್ದರು. ಒಮ್ಮೇ ಚಪ್ಪಾಳೆ ತಟ್ಟಲು ಕರೆ ನೀಡಿದ್ದರು ಮತ್ತೊಮ್ಮೇ ದೀಪ ಬೆಳಗಲು ಕರೆ ನೀಡಿದ್ದರು ಇವೆಲ್ಲವನ್ನು ನಮ್ಮ ದೇಶದ ಪ್ರಜೆಗಳು ಕೋರೊನಾ ವಾರಿಯರ್ಸ್‍ಗಾಗಿ ಶ್ರದ್ದಾ ಭಕ್ತಿಯಿಂದ ಮಾಡಿದ್ದನ್ನು ಸ್ಮರಿಸಬಹುದು. ಒಟ್ಟಾರೆ 4 ಭಾಷಣ ಮಾಡಿದ್ದ ನರೇಂದ್ರ ಮೋದಿಯವರು ಇಂದು ರಾತ್ರಿ 8ಕ್ಕೆ 5 ನೇ ಭಾಷಣ ಮಾಡಲಿದ್ದಾರೆ. ಈಗಾಗಲೇ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಮಾಡಿರುವ ಮೋದಿಯವರು ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದು ಸಾಕಷ್ಟು ಕೂತುಹಲ ಮೂಡಿಸಿದೆ.

PM Modi to address the nation today on measures to combat ...
ಲಾಕ್‍ಡೌನ್ ಒಂದು ಅಸ್ತ್ರ ಅಷ್ಟೇ ಈಗಾಗಲೇ ಅದನ್ನು ಬಳಸಿ ಆಗಿದೆ. ಇನ್ನೇನಿದ್ದರು ಕೋರೊನಾ ಜೊತೆಯ ಬದುಕು! ಅಂದರೆ ಜಾಗ್ರತೆಯಿಂದ ಬದುಕುವುದೇ ಆಗಿದೆ. ಸಾಮಾಜಿಕ ಅಂತರ, ಪದೇ ಪದೇ ಕೈಗಳನ್ನು ಸೋಪು/ ಸ್ಯಾನಿಟೇಶರ್‍ನಿಂದ ಸ್ವಚ್ಚಗೊಳಿಸುವುದು. ಈ ರೀತಿ ನಮ್ಮ ದೈನಂದಿನ ಬದುಕನ್ನು ಬದಲಾಯಿಸಿಕೊಳ್ಳಬೇಕಿದೆ. ದೇಶದ ಜನತೆಯ ಆರೋಗ್ಯ, ಆರ್ಥಿಕತೆ, ಎಲ್ಲವನ್ನೂ ಜೊತೆ ಜೊತೆಯಾಗಿ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯದಲ್ಲಿ ಸರ್ಕಾರಗಳಿವೆ.

 

ಕರ್ನಾಟಕದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆ. ಇಂದು ಎಷ್ಟು ಗೊತ್ತಾ?

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!