ದೇಶದ ಕನ್ನಡಿಗ ಏಕೈಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಎಂ.ಕೃಷ್ಣಪ್ಪನವರ ಸೋದರನ ಮಗಳು ರೇವತಿ ನಿಶ್ಚಿತಾರ್ಥ ನಗರದ ಖಾಸಗಿ ಹೋಟೆಲ್‍ನಲ್ಲಿ ಅದ್ದೂರಿಯಾಗಿ ನಡೆಯಿತು. ಹೆಚ್.ಡಿ. ದೇವೆಗೌಡ ಮತ್ತು ಚನ್ನಮ್ಮ ದಂಪತಿಗಳು ನಿಖಿಲ್ ಮತ್ತು ರೇವತಿಗೆ ಶುಭಕೋರಿ ಆಶೀರ್ವಾದ ಮಾಡಿದರು.
ನಿಖಿಲ್‍ಕುಮಾರಸ್ವಾಮಿ ರೇವತಿಗೆ ವಜ್ರದುಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ಗಣ್ಯರು ಮತ್ತು ಚಲನಚಿತ್ರರಂಗದ ಕಲಾವಿದರು ಉಪಸ್ಥಿತರಿದ್ದರು.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ರಾಮನಗರ ಮತ್ತು ಚನ್ನಪಟ್ಟಣದ ಮದ್ಯಭಾಗದ ಸುಮಾರು 50 ಎಕರೆ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆಯಲಿದೆ ಈಗಾಗಲೇ ಜಾಗ ಅಂತಿಮವಾಗಿದೆ.