ಕೆಎಂಎಫ್ ಸುದ್ದಿ

ನಂದಿನಿ ಬ್ರ್ಯಾಂಡಿನಡಿ ವಿವಿಧ ಮಾದರಿಯ ಬ್ರೆಡ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ

ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 4 ದಶಕಗಳಿಂದ ರುಚಿ ಮತ್ತು ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ರಾಂಡ್ ಅಡಿಯಲ್ಲಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಾ ಬರುತ್ತಿದ್ದು, ಗ್ರಾಹಕರ ನೆಚ್ಚಿನ ಹಾಲಿನ ಬ್ರಾಂಡ್ ಆಗಿ ಹೊರಹೊಮ್ಮಿದೆ. ಪ್ರಸ್ತುತ ನಂದಿನಿ ಬ್ರಾಂಡ್‍ನಲ್ಲಿ 170 ಕ್ಕೂ ಹೆಚ್ಚಿನ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಿದ್ದು, ಮಾರುಕಟ್ಟೆ ಪ್ರದೇಶ ಬೇಡಿಕೆ ಹಾಗು ಗ್ರಾಹಕರ ಅಭಿರುಚಿಯನ್ನು ಪರಿಗಣಿಸಿ ಹೊಸ ಹೊಸ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ.

ಆರೋಗ್ಯಕರ ಮತ್ತು ಪೌಷ್ಟಿಕವಾದ ವಿವಿಧ 4 ಮಾದರಿಯ ನಂದಿನಿ ಗುಡ್‍ಲೈಫ್ ಬ್ರೆಡ್‍ಗಳನ್ನು ಇಂದು (ದಿನಾಂಕ : 15.01.2021 ) ಕೆಎಂಎಫ್ ಕಛೇರಿಯಲ್ಲಿ ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್, ಕೆಸಿಎಸ್ ರವರು ಸಾಂಕೇತಿಕವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು, ಮಾದ್ಯಮ ಉದ್ದೇಶಿಸಿ ಮಾತನಾಡಿದ ಬಿ.ಸಿ. ಸತೀಶ್ ರವರು ಬೆಳಗಾವಿ ಸಹಕಾರ ಸಪ್ತಾಹದಲ್ಲಿ ತಿಳಿಸಿದಂತೆ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ 4 ವಿವಿಧ ಬಗೆಯ ಬ್ರೆಡ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು,

ಸದ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಾಗಲಿದೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗದಲ್ಲಿಯೂ ಸಿಗುವಂತೆ ಕ್ರಮವಿಡಲಾಗುವುದೆಂದು ತಿಳಿಸಿದರು. ಯುಗಾದಿ ಹಬ್ಬಕ್ಕೆ 27 ಬಗೆಯ ವಿವಿಧ ಮಾದರಿಯ ನಂದಿನಿ ಚಾಕೊಲೆಟ್‍ಗಳನ್ನು ಬಿಡುಗಡೆಗೊಳಿಸಲು ಯೋಜಿಸಿರುವುದಾಗಿ ತಿಳಿಸಿದರು. ಎಲ್ಲಾ ಮಾಧ್ಯಮಗಳು ಕೆಎಂಎಫ್ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಸಾರ /ಪ್ರಕಟಣೆ ಮಾಡುತ್ತಿರುವುದಕ್ಕೆ ಕಹಾಮ ಅಧ್ಯಕ್ಷರು/ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಹಾಲು ಉತ್ಪಾಕರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಈ ಸಂಧರ್ಭದಲ್ಲಿ ಕೆಎಂಎಫ್‍ನ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

 

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!