ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, (ಬಮುಲ್)/ಬೆಂಗಳೂರು ಡೇರಿ ಯು ಖಾಲಿ ಇರುವ ವಿವಿಧ ವೃಂದಗಳಲ್ಲಿನ 297 ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ 30.12.2020ರಂದು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03.02.2021.
ಸದರಿ ಹುದ್ದೆಗಳಿಗೆ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, www.bamulnandini.coop ಜಾಲ ತಾಣಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಮೂಲ್ ಸಹಾಯವಾಣಿ 8792614997 / 080 26096210 ಗೆ ಕಛೇರಿಯ ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ಒಳಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದರಿ ನೇರ ನೇಮಕಾತಿಗೆ 200 ಅಂಕಗಳ ಲಿಖಿತ ಪರೀಕ್ಷೆಯಿದ್ದು, ಸಿಲೇಬಸ್ ಈ ರೀತಿ ಇರುತ್ತದೆ. 1. ಕನ್ನಡ ಭಾಷೆಗೆ 50 ಅಂಕಗಳು 2. ಸಾಮಾನ್ಯ ಇಂಗ್ಲೀಷ್‍ಗಾಗಿ 25 ಅಂಕಗಳು 3. ಸಾಮಾನ್ಯ ಜ್ಞಾನಕ್ಕಾಗಿ 25 ಅಂಕಗಳು 4. ಸಹಕಾರ ವಿಷಯಗಳಿಗಾಗಿ 50 ಅಂಕಗಳು 5. ಭಾರತದ ಸಂವಿಧಾನ ವಿಷಯಕ್ಕಾಗಿ 25 ಅಂಕಗಳು 6. ಸಮಾಜಯುಕ್ತವಾದ ಚಟುವಟಿಕೆಗಳು ಮತ್ತು ವಸ್ತುನಿಷ್ಠ ವಿಷಯಗಳಿಗೆ 25 ಅಂಕಗಳು ಒಳಗೊಂಡಿರುತ್ತದೆ.