ಚಳಿಗಾಲಕ್ಕೆ ನಮ್ಮ ದೇಹವನ್ನು ಬೆಚ್ಚಗಿರಿಸಲು ಮತ್ತು ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಸೇವನೆ ಉತ್ತಮ.ಅಂತಹ ಸೂಪರ್ ಪುಡ್ ಯಾವುದು ಎಂದು ಯೋಚಿಸುತ್ತಿದ್ದಿರಾ.ಅದು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥ ಬೆಲ್ಲ ಮತ್ತು ಹಾಲು ಹೌದು ಬೆಲ್ಲವನ್ನು ಹಾಲಿಗೆ ಸೇರಿಸಿ ಕುಡಿದರೆ ಹಲವು ಆರೋಗ್ಯಕರ ಪ್ರಯೋಜನ ಸಿಗಲಿದೆ. ಅವು ಯಾವುವು ಎಂದರೆ:- ನೀವು ಪ್ರತಿ ದೀನ ಹಾಲಿಗೆ ಬೆಲ್ಲವನ್ನು ಬೆರೆಸಿ ಕುಡಿದರೆ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ.ಹಾಲಿನಲ್ಲಿ ಬೆಲ್ಲಹಾಕಿ ಕುಡಿದರೆ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಹಲವು ರೀತಿಯ ಪ್ರಯೋಜನೆಗಳಿವೆ.
ನೀವು ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ಬೆಲ್ಲ ಮಿಕ್ಸ್ ಮಾಡಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುಗುತ್ತದೆ.ನಿಮ್ಮ ದೇಹದಲ್ಲಿ ಕ್ಯಾಸಿಯಂ ಹೆಚ್ಚಿಸಲು ದೀನವು ಹಾಲು ಸೇವಿಸುವುದು ಉತ್ತಮ.ನಿಮ್ಮ ದೇಹದಲ್ಲಿ ಆಹಾರದಲ್ಲಿ ಹಾಲಿನಲ್ಲಿ ಬೆಲ್ಲವನ್ನು ಸೇರಿಸಿ ಕುಡಿದರೆ ನೀವು ಕ್ಯಾನ್ಸರ್, ಹೃದ್ರೋಗ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಂದ ದೂರ ಇರಬಹುದು.ಹಾಲಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಜೀಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿಕುಡಿಯುವುದರಿಂದ ಉತ್ತಮ ನಿದ್ರೆ,ಚಯಾಪಚಯ ದರವನ್ನು ವೇಗಗೊಳಿಸಲು ಉತ್ತಮ ನಿದ್ರೆ ಸಹಾಯ ಮಾಡುತ್ತದೆ.ರಕ್ತಹೀನತೆ ಇದ್ದರೆ,ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.ಬೆಲ್ಲದಲ್ಲಿ ಹಿಮೋಗ್ಲೋಬಿನ್ ವರ್ಧಿಸುವ ಗುಣಲಕ್ಷಣಗಳು ಕಂಡುಬರುತ್ತವೆ.ಹೀಗಾಗಿ ಹಾಲಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ನಿಮ್ಮ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ.