ನಮ್ಮ ಹಿಂದು ಸನಾತನ ಧರ್ಮ ಶಾಸ್ತ್ರದ ಪ್ರಕಾರ ಕಾಲಿಗೆ ಗೆಜ್ಜೆಯೂ ಸಹ ಒಂದು ಹೆಣ್ಣಿನ ಮುತೈದೆಯ ಸಂಕೇತ ಆದರಿಂದಲೇ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಕಾಲಿಗೆ ಗೆಜ್ಜೆಯನ್ನು ಹಾಕುತ್ತಾರೆ, ಆದರೆ ಬದಲಾದ ಈ ಆಧುನಿಕ ಯುಗದಲ್ಲಿ ನಮ್ಮ ಹೆಣ್ಣು ಮಕ್ಕಳು ವಿದೇಶಿ ಉಡುಗೆ ತೊಡುಗೆಗೆ ಮಾರು ಹೋಗಿ ಕಾಲಿಗೆ ಗೆಜ್ಜೆ ಹಾಕುವುದನ್ನು ಮರೆತಿದ್ದಾರೆ.
ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಬೆಳ್ಳಿಯು ಒಂದು ಉತ್ತಮ ಮತ್ತು ಪವಿತ್ರವಾದ ಲೋಹವಾಗಿದೆ ಇನ್ನು ವೈಜ್ಷಾನಿಕ ದೃಷ್ಟಿಯಲ್ಲಿ ನಾವು ನೋಡುವುದಾದರೆ , ಬೆಳ್ಳಿಯು ಒಂದು ಅತ್ಯುತ್ತಮ ವಾಹಕವಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯಲ್ಲಿ ಶುಕ್ರನ ಕಾರಕತ್ವವಿರುತ್ತದೆ, ಶುಕ್ರನು ಸಿರಿಸಂಪತ್ತಿನ ಸಂಕೇತ, ಹಾಗಾಗಿ ಯಾರು ಕಾಲಿಗೆ ಬೆಳ್ಳಿಯ ಹಾಕಿರುತ್ತಾರೋ ಅವರ ಮನೆಯಲ್ಲಿ ಧನಲಕ್ಷೀ ನೆಲೆಸುತ್ತಾಳೆ
ಆರೋಗ್ಯದ ದೃಷ್ಟಿಯಿಂದ ನೋಡಿದರು ಸಹ ಬೆಳ್ಳಿಯ ಹೆಜ್ಜೆಯನ್ನು ಹಾಕಿಕೊಳ್ಳುವುದು ತುಂಬಾ ಒಳ್ಳೆಯದು.ಬೆಳ್ಳಿ ಹೆಜ್ಜೆಯನ್ನು ಹೆಣ್ಣು ಮಕ್ಕಳ ಕಾಲಿಗೆ ಹಾಕಿಕೊಂಡು ಮನೆಯಲ್ಲಿ ಓಡಾಡುವುದರಿಂದ ಆ ಲಯಬದ್ದವಾದ ಶಬ್ದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೋಗಿ ಮನೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಯೂರುತ್ತದೆ, ಅಷ್ಟೆ ಅಲ್ಲದೆ ವೈಜ್ಷಾನಿಕ ವಾಗಿ ಬೆಳ್ಳಿಯು ಒಂದು ಉತ್ತಮ ರೋಗ ನಿರೋದಕ ಶಕ್ತಿ ಹೊಂದಿರುತ್ತದೆ ಮತ್ತು ಉಷ್ಣವನ್ನು ಹೀರಿಕೊಂಡು ದೇಹವನ್ನು ಸಮಶೀತೋಷ್ಣದಲ್ಲಿ ಇಡುವುದರಲ್ಲಿ ಸಹಾಕರಿಯಾಗುತ್ತದೆ,ಹಾಗೆಯೇ ಬೆಳ್ಳಿಯು ಹೆಣ್ಣು ಮಕ್ಕಳ ದೇಹವು ಸುಕ್ಕುಗಟ್ಟುವುದನ್ನು ತಡೆಯುವುದಲ್ಲದೆ ಅವರ ದೇಹದ ಅಂದವನ್ನು ಹೆಚ್ಚಿಸುತ್ತದೆ.