ಉಪಯುಕ್ತ ಮಾಹಿತಿ

ಎಲ್ಲರನ್ನೂ ಕಾಡುವ ಗ್ಯಾಸ್ಟ್ರೀಕ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆ ಮದ್ದು

ನಮ್ಮ ದೇಹದ ಸಾಕಷ್ಟು ಸಮಸ್ಯೆಗೆ ಕೆಲವು ಮನೆ ಮದ್ದುಗಳಿವೆ. ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯ ಕಾರಣದಿಂದ ವಾಂತಿ,ಹೊಟ್ಟೆಯುರಿ,ಹೊಟ್ಟೆತೊಳಸಿದಂತಾಗುವುದು ಆಗುತ್ತದೆ. ಏನೇ ತಿಂದರೂ ಸರಿಯಾಗಿ ಜೀರ್ಣವಾಗದೇ ಬಾಯಲ್ಲಿ ನೀರು ಸುರಿದಂತಾಗತ್ತದೆ. ಈ ಗ್ಯಾಸ್ಟ್ರಿಕ್‍ನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಗುಣಪಡಿಸಿಕೊಳ್ಳಬಹುದು.

• ಒಂದು ಗ್ಲಾಸ್ ನೀರನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುಂಠಿಯನ್ನು ಜಜ್ಜಿ ಹಾಕಿ 5 ನಿಮಿಷಗಳ ಕಾಲ ಕುದಿಸಿ. ಕುದಿಸಿದ ನಂತರ ಒಂದು ಬಿಳಿ ಬಟ್ಟೆಯಲ್ಲಿ ಸೋಸಿ ಅದು ಉಗುರು ಬಿಸಿಗೆ ಹಾರಿಸಿ ಕುಡಿಯಿರಿ. ಶುಂಠಿಯು ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ಶುಂಠಿಯ ಔಷಧೀಯ ಗುಣ ವಾಂತಿಯನ್ನು ಕಡಿಮೆ ಮಾಡುತ್ತದೆ.
• ಒಂದು ಟೀ ಸ್ಪೂನ್ ಜೀರಿಗೆಗೆ, ಅರ್ಧ ಟೀ ಸ್ಪೂನ್ ಸೋಂಪು 6 ಕಾಳು ಮೆಣಸು ಹಾಕಿ ಸ್ವಲ್ಪ ಬಿಸಿಮಾಡಿ ಪುಡಿ ಮಾಡಿ ಒಂದು ಗ್ಲಾಸ್ ನೀರನ್ನು ಒಲೆಯ ಮೇಲಿಟ್ಟು ನೀರು ಬಿಸಿಯಾದಾಗ ಪೌಡರ್ ಹಾಕಿ ಕುದಿಸಿ ನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಸೋಸಿ ಕುಡಿಯುವುದರಿಂದ ಕೂಡ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
• ನಮ್ಮ ದೇಹದ ಸಾಕಷ್ಟು ಸಮಸ್ಯೆಯನ್ನು ನೀರು ಕುಡಿಯುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಮಹಿಳೆಯರು ದಿನಕ್ಕೆ 2.7 ಲೀಟರ್ ಹಾಗೂ ಪುರುಷರು 3.7 ಲೀಟರ್ ನೀರು ಕುಡಿಯುವುದರಿಂದ ಗ್ಯಾಸ್ಟ್ರೀಕ್ ದೂರ ಮಾಡಬಹುದು.
• ಜೆಂಕ್ ಪುಡ್, ಮಸಾಲ ಪದಾರ್ಥ, ಮಾಂಸಹಾರ ಸೇವನೆ ಕಡಿಮೆ ಮಾಡುವ ಮೂಲಕ ಗ್ಯಾಸ್ಟ್ರೀಕ್ ಸಮಸ್ಯೆ ಬರದಂತೆಯೂ ತಡೆಯಬಹುದು

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!