ರೈತರ ಜೀವನಾಡಿ ಕೆಎಂಎಫ್ ಸದಾ ಕಾಲ ಗ್ರಾಹಕರಿಗೆ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಾ ದೇಶದಲ್ಲೇ ಉತ್ತಮ ನಂದಿನಿ ಬ್ರಾಂಡ್ ಎಂಬ ಹಿರಿಮೆಯನ್ನು ಪಡೆದಿದೆ. ಸದಾ ಕಾಲ “ನಂದಿನಿ ಶ್ರೇಣಿಯ ಎಲ್ಲಾ ಹಾಲು ಮತ್ತು ಹಾಲಿನ ಉತ್ಪನ್ನಗಳು ರಾಜ್ಯ/ಹೊರರಾಜ್ಯಗಳ ಗ್ರಾಹಕರಿಗೆ ದೊರಕುವಂತೆ ಮಾಡಲು ಪಟ್ಟಣ, ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಂದಿನಿ ಪಾರ್ಲರ್‍ಗಳನ್ನು ತೆರೆಯಲಾಗುತ್ತಿದೆ.
ಇದೇ ನಿಟ್ಟಿನಲ್ಲಿ ರಾಷ್ಟ್ರ ಮತ್ತು ಹೊರರಾಷ್ಟ್ರಗಳ ಗ್ರಾಹಕರಲ್ಲಿಯೂ ಸಹ ನಮ್ಮ ರಾಜ್ಯದ ಹೆಮ್ಮೆಯ ನಂದಿನಿ ಬ್ಯ್ರಾಂಡ್ ಪರಿಚಯದೊಂದಿಗೆ ಶ್ರೇಷ್ಠ ಗುಣಮಟ್ಟದ ನಂದಿನಿ ಹಾಲಿನ ಉತ್ಪನ್ನಗಳು ಹಾಗೂ ವಿವಿಧ ಸ್ವಾದದ ಐಸ್‍ಕ್ರೀಂ ಉತ್ಪನ್ನಗಳು ದೊರಕುವಂತೆ ಮಾಡಲು ಬೆಂಗಳೂರಿನ ಪ್ರತಿಷ್ಟಿತ ಸ್ಥಳವಾದ “ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ” ದಲ್ಲಿ ಅತ್ಯಾಕರ್ಷಕ ವಿನ್ಯಾಸದೊಂದಿಗೆ ನೂತನ ನಂದಿನಿ ಮಳಿಗೆಯನ್ನು ನಿರ್ಮಿಸಲಾಗಿದ್ದು, ಈ ಮಳಿಗೆಯು ದಿನ ಪೂರ್ತಿ ತೆರೆಯಲಿದ್ದು 24/7 ಗ್ರಾಹಕರಿಗೆ ಸೇವೆ ನೀಡಲಾಗುತ್ತದೆ. ಈ ನಂದಿನಿ ಮಳಿಗೆಯನ್ನು ದಿನಾಂಕ 12.10.2020 ರಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್,ಕೆಸಿಎಸ್ ರವರು ಉದ್ಘಾಟಿಸಿದರು.
ಬೆಂಗಳೂರಿನಿಂದ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗುವವರು ಮತ್ತು ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬರುವ ಗ್ರಾಹಕರು ನಮ್ಮ ನಂದಿನಿ ಉತ್ಪನ್ನಗಳನ್ನು ಬಳಸಿಕೊಳ್ಳಿ ಎಂದು ಕೆಎಂಎಫ್ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕೆಎಂಎಫ್ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಸಮಸ್ತ ರೈತರ ಪರವಾಗಿ ಕೇಳಿಕೊಳ್ಳುತ್ತೇನೆಂದು ಕಹಾಮ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ. ಸಿ. ಸತೀಶ್ ರವರು ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದರು. ಸರಳವಾಗಿ ಜರುಗಿದ ಈ ಸಮಾರಂಭದಲ್ಲಿ ವಿಮಾನ ನಿಲ್ದಾಣ ಮತ್ತು ಕೆಎಂಎಫ್‍ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
-ನವೀನ್ ರಾಮನಗರ