ಕೆಎಂಎಫ್ ಸುದ್ದಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಂದಿನಿ ವಿವಿಧ ಆಯುರ್ವೇದಿಕ್ ಹಾಲು ಬಿಡುಗಡೆ

ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ರಾಂಡ್ ಅಡಿಯಲ್ಲಿ ಕಳೆದ 40 ವರ್ಷಗಳಿಂದ ಒದಗಿಸಿ, ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರಾಂಡ್ ಆಗಿ ಹೊರಹೊಮ್ಮಿತ್ತಿದೆ.

ರಾಜ್ಯದ್ಯಾಂತ ಕೋರಾನಾ ವೈರಸ್ ಬಹಳ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಈ ಕೋರಾನಾ ವೈರಸ್ ಸೋಂಕಿಗೆ ನಿಗಧಿತ ಪ್ರತ್ಯೇಕ ಔಷಧಿ ಲಭ್ಯವಿಲ್ಲದ ಕಾರಣ ಜನ ಸಾಮಾನ್ಯರು ಸೋಂಕಿನಿಂದ ರಕ್ಷಿಸಿಕೊಳ್ಳಲು ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸಿಕೊಳ್ಳಲು ಆರ್ಯುವೇದದ ಕಷಾಯದ ಅವಶ್ಯವಿರುತ್ತದೆ. ರಾಜ್ಯದ ಜನರು ಉತ್ತಮ ರೋಗನಿರೋಧಕ ಶಕ್ತಿಯೊಂದಿಗೆ ಆರೋಗ್ಯ ಹಿತದೃಷ್ಟಿಯಿಂದ ಈಗಾಗಲೇ ಕೆಎಂಎಫ್ ವತಿಯಿಂದ ನಂದಿನಿ ಅರಿಶಿನ ಹಾಲು ಬಿಡುಗಡೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ, ಪ್ರಸ್ತುತದ ನಂದಿನಿ ಅರಿಶಿನ ಹಾಲಿನ ಜೊತೆಗೆ ಆರ್ಯುವೇದಿಕ್ ಗುಣಗಳೊಂದಿಗೆ ಹಾಲಿನ ಪೌಷ್ಟಿಕಾಂಶಗಳನ್ನು ಹೊಂದಿರುವ 5 ಬಗೆಯ ವಿವಿಧ ಹಾಲು ಮತ್ತು ಆರೋಗ್ಯದಾಯಕ ಸಿರಿಧಾನ್ಯ ಉತ್ಪನ್ನಗಳನ್ನು ದಿನಾಂಕ: 30.07.2020 ರಂದು ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ಕೆಎಂಎಫ್‍ನ ಸನ್ಮಾನ್ಯ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಲ.ಜಾರಕಿಹೊಳಿ ರವರು ಬಿಡುಗಡೆ ಮಾಡಿದರು ಹಾಗು ಈ ಸಂಧರ್ಭದಲ್ಲಿ ಕಹಾಮ ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ ಹೆಚ್.ಡಿ ರೇವಣ್ಣ, ಶಾಸಕರು, ಶ್ರೀ ಭೀಮಾನಾಯ್ಕ್ ಶಾಸಕರು, ಶ್ರೀ ಹೆಚ್.ಜಿ ಹೀರೇಗೌಡ್ರ, ಶ್ರೀ ಮಾರುತಿ ಖಾಶಂಪೂರ್, ಶ್ರೀ ದಿವಾಕರ ಶೆಟ್ಟಿ, ಶ್ರೀ ಶ್ರೀಶೈಲಗೌಡ ಪಾಟೀಲ್, ಶ್ರೀ ಕೆಎಸ್. ಕುಮಾರ, ಶ್ರೀ ಅಮರನಾಥ ರ ಜಾರಕಿಹೊಳಿ, ಶ್ರೀ ಆನಂದ್‍ಕುಮಾರ, ಶ್ರೀ ಆರ್ ಶ್ರೀನಿವಾಸ, ಶ್ರೀ ಎಂ ನಂಜುಡಸ್ವಾಮಿ, ಶ್ರೀ ವೀರಭದ್ರ ಸಿ ಬಾಬು, ಶ್ರೀ ಪ್ರಕಾಶ್, ಸಹಕಾರ ಸಂಘಗಳ ನಿಂಬಂಧಕರಾದ ಶ್ರೀ ಜಿಯಾವುಲ್ಲಾ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್, ಕೆಸಿಎಸ್ ರವರು ಮತ್ತು ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡುಗಡೆ ಮಾಡಲಾದ ನಂದಿನಿ ನೂತನ ಉತ್ಪನ್ನಗಳು:-

· ನಂದಿನಿ ತುಳಸಿ ಹಾಲು

· ನಂದಿನಿ ಅಶ್ವಗಂಧ ಹಾಲು

· ನಂದಿನಿ ಕಾಳು ಮೆಣಸು ಹಾಲು

· ನಂದಿನಿ ಲವಂಗ ಹಾಲು

· ನಂದಿನಿ ಶುಂಠಿ ಹಾಲು

· ನಂದಿನಿ ಸಿರಿಧಾನ್ಯ ಸಿಹಿ ಪೊಂಗಲ್

· ನಂದಿನಿ ಸಿರಿಧಾನ್ಯ ಖಾರಾ ಪೊಂಗಲ್

· ನಂದಿನಿ ಸಿರಿಧಾನ್ಯ ಪಾಯಸ.

ಸದರಿ ಆರ್ಯುವೇದಿಕ್ ಗುಣವುಳ್ಳ ಹಾಲಿನ ಪಾನಿಯಗಳ ಮಾರುಕಟ್ಟೆ ದರವು ರೂ. 25/- ಗಳಿದ್ದು, ಆರಂಭಿಕ ಕೊಡುಗೆಯಾಗಿ ರೂ. 20/- ರಂತೆ ರಿಯಾಯಿತಿ ದರ ನಿಗಧಿಪಡಿಸಲಾಗಿದೆ.

ವಿವಿಧಆಯುರ್ವೆದಿಕ್ ಹಾಲಿನಲ್ಲಿರುವ ಪೋಷಕಾಂಶಗಳು ಮತ್ತುಆರೋಗ್ಯದ ಲಾಭಗಳು:

ಶುಂಠಿ ಹಾಲು:

1. ರೋಗ-ನಿರೋಧಕಗುಣವಿರುವುದರಿಂದ ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮುಗಳನ್ನು ತಡೆಗಟ್ಟಬಹುದಾಗಿದೆ.2. ಉರಿಯೂತವನ್ನು ಕಡಿಮೆಗೊಳಿಸುತ್ತದೆ.3. ಜೀರ್ಣಕ್ರಯೆಯನ್ನು ಉತ್ತಮಗೊಳಿಸುತ್ತದೆ.4. ಸೋಂಕನ್ನು ನಿವಾರಿಸುವಗುಣವಿದೆ.5. ಬೆಳಗಿನ ವಾಕರಿಕೆಯನ್ನು ನಿವಾರಿಸುವ ಶಕ್ತಿಯಿದೆ.

ಲವಂಗ ಹಾಲು

1. ಉತ್ತಮ ನಾರಿನಾಂಶ, ಪೋಷಕಾಂಶ ಹಾಗೂ ಜೀವಸತ್ವವಿರುವುದರಿಂದಜೀರ್ಣಶಕ್ತಿ ಹೆಚ್ಚಿಸುತ್ತದೆ.2. ಉತ್ಕರ್ಷಣರೋಗ ನಿರೋಧಕ ಶಕ್ತಿ ಹೊಂದಿದೆ.3. ರೋಗ-ನಿರೋಧಕಗುಣವಿರುವುದರಿಂದಅರ್ಬುಧರೋಗತಡೆಯುವಲ್ಲಿ ಸಹಾಯಕವಾಗಿರುತ್ತದೆ.4. ರೋಗ ನಿರೋಧಕ ಶಕ್ತಿ ಹೊ0ದಿದ್ದು, ವಸಡುರೋಗ ನಿಯಂತ್ರಣ, ಜಠರ ನಿರ್ವಹಣೆ, ಮಧುಮೇಹರೋಗ ನಿಯಂತ್ರಿಸುವಲ್ಲಿ ಸಹಾಯಕವಾಗಿರುತ್ತದೆ.5. ನೋವು ನಿವಾರಕ ಶಕ್ತಿಯನ್ನು ಹೊಂದಿದ್ದು, ಹಲ್ಲು ನೋವು ನಿವಾರಣೆಯಲ್ಲಿ ಹಾಗೂ ವಾಕರಿಕೆ ನಿಯಂತ್ರಿಸುವಲ್ಲಿ ಸಹಾಯಕವಾಗಿರುತ್ತದೆ.

ಕಾಳು ಮೆಣಸು ಹಾಲು

1. ಉತ್ತಮ ಪೋಷಕಾಂಶಗಳಿಂದ ಕೂಡಿದ್ದುರೋಗ ನಿರೋಧಕ ಶಕ್ತಿ ಹೊಂದಿರುತ್ತದೆ.2. ಉತ್ತಮಔಷಧೀಯ ಗುಣಗಳಿಂದ ಕೂಡಿದ್ದುviಣ ಂ, viಣ ಅ, ಗಿiಣ ಏ,ಪೊಟ್ಯಾಷಿಯಂ, ಮೆಗ್ನೀಷಿಯಂ, ಫೋಲಿಕ್ ಅಸಿಡ್ ಹಾಗೂ ನಾರಿನಾಂಶವಿರುತ್ತದೆ.3. ತೂಕವನ್ನುಕಡಿಮೆಯಾಗಿಸುತ್ತದೆ.4. ಜೀರ್ಣಾಂಗಗಳ ನಿರ್ವಿಷೀಕರಣಕ್ರಿಯೆಕೈಗೊಂಡುಉತ್ತಮಆರೋಗ್ಯಕ್ಕೆ ಸಹಾಯಕಾರಿಯಾಗಿದೆ.5. ರೋಗ ನಿರೋಧಕಗುಣವಿರುವುದರಿಂದಅರ್ಬುಧರೋಗತಡೆಯುವಲ್ಲಿ ಹಾಗೂ ಮೆದುಳಿನ ಆರೋಗ್ಯಕ್ಕೆಉತ್ತಮವಾಗಿರುತ್ತದೆ.6. ಕೊಲೊಸ್ಟ್ರಾಲ್ ಹಾಗೂ ಸಕ್ಕರೆ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿರುತ್ತದೆ.

ತುಳಸಿ ಹಾಲು

1. ಉತ್ಕøಷಣರೋಗ ನಿರೋಧಕ ಶಕ್ತಿ ಹೊಂದಿದ್ದು, ಒತ್ತಡ, ಸಕ್ಕರೆ ಅಂಶ ಹಾಗೂ ರಕ್ತದಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿರುತ್ತದೆ. 2. ಜ್ವರ, ನೆಗಡಿ ಮತ್ತುಕೆಮ್ಮುನ್ನುತಡೆಗಟ್ಟಲು ಸಹಾಯಕವಾಗುತ್ತದೆ.3. ಲಿನೋಲಿಯಿಕ್ ಅಸಿಡ್ ಎಂಬ ಅಗತ್ಯ ಅಮೈನೋ ಅಮ್ಲವಿರುವುದರಿಂದಚರ್ಮದರೋಗವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿರುತ್ತದೆ.4. ಇದರಲ್ಲಿ ಸಾರಭೂತತೈಲವಿರುವುದರಿಂದಚರ್ಮ ನ್ಯೂನ್ಯತೆ ಕಾಯಿಲೆ, ಸೋಂಕು ಹಾಗೂ ರೋಗಕಾರಕ ಜೀವಿಗಳನ್ನು ತಡೆಯುವಲ್ಲಿ ಸಹಾಯಕವಾಗಿರುತ್ತದೆ.5. ರೋಗ ನಿರೋಧಕಗುಣವಿದ್ದುರೋಗ ಮೂಕ್ತವನ್ನುಉಂಟು ಮಾಡುವಗುಣವಿರುತ್ತದೆ.

ಅಶ್ವಗಂಧ ಹಾಲು

1. ಸನಾತನಆಯುರ್ವೇದ ಔಷಧಗಳಲ್ಲಿ ಬಳಕೆಯಿದ್ದು, ಉತ್ತಮಆರೋಗ್ಯ ಗುಣಗಳನ್ನು ಹೊಂದಿರುತ್ತದೆ. 2. ಜೀವ ವಿರೋಧಿಗುಣವಿರುವುದರಿಂದಒತ್ತಡ ಹಾಗೂ ಉರಿಯೂತವನ್ನುನಿಗ್ರಹಿಸುವುದರಲ್ಲಿ ಸಹಾಯಕವಾಗಿರುತ್ತದೆ.3. ರೋಗ ನಿರೋಧಕ ಶಕ್ತಿ ಹೊಂದಿದ್ದು, ಉತ್ತಮ ಮೆದುಳಿನ ಆರೋಗ್ಯ ನಿರ್ವಹಣೆ, ಮಧುಮೇಹರೋಗ ನಿಯಂತ್ರಣ ಹಾಗೂ ಅರ್ಬುಧರೋಗ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಸಹಾಯಕವಾಗಿರುತ್ತದೆ.

ತಿನ್ನಲು ಸಿದ್ದವಾದ ಖಾರ ಮತ್ತು ಸಿಹಿ ಸಿರಿಧಾನ್ಯ ಪೊಂಗಲ್ ಹಾಗೂ ಸಿರಿಧಾನ್ಯ ಪಾಯಸ:

1. ಸಿರಿಧಾನ್ಯಮತ್ತು ನಂದಿನಿ ತುಪ್ಪವನ್ನು ಹೊಂದಿದಪೊಂಗಲ್ ಹಾಗೂ ಪಾಯಸಸಮಗ್ರ ಪೌಷ್ಠಿಕಾಂಶಗಳು ಮತ್ತುಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುತ್ತವೆ.

2. ಸಾಂಪ್ರಾದಾಯಕವಾಗಿ ತಯಾರಿಸಿದ ಪೊಂಗಲ್‍ಖಾರ ಮತ್ತು ಸಿಹಿ ಮಾದರಿಯಲ್ಲಿ ಹಾಗೂ ಪಾಯಸವನ್ನುಆಯ್ದಗುಣಮಟ್ಟ ಸಿರಿಧಾನ್ಯದಿಂದ ತಯಾರಿಸಿದೆ.

3. ಪೊಂಗಲ್ ಮತ್ತು ಪಾಯಸಕ್ಕೆ ಉಪಯೋಗಿಸಿದ ಸಿರಿಧಾನ್ಯದಲ್ಲಿ ಹೆಚ್ಚು ನಾರಿನಂಶ ಮತ್ತುಉತ್ಕರ್ಷಣ ನಿರೋಧಕ ಅಂಶಗಳು ತೂಕಕಡಿಮೆ ಮಾಡಲು ಮತ್ತುರಕ್ತದಲ್ಲಿನ ಸಕ್ಕರೆ ಮತ್ತುಕೊಲೆಸ್ಟ್ರಾಲ್‍ಅಂಶವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.

4. ಮನೆಯಲ್ಲಿಯೇತಾಜಾವಾಗಿತಯಾರಾದಂತೆರುಚಿಕರ ಮತ್ತುಸ್ವಾದದಅನುಭವ ನೀಡುವುದು.

5. ಈ ಉತ್ಪನ್ನಗಳು ಆರೋಗ್ಯದಾಯಕ, ಅನುಕೂಲದಾಯಕ ಮತ್ತು ವೈವಿಧ್ಯತೆಯಿಂದಕೂಡಿರುತ್ತದೆ.

6. ಕೋವಿಡ್-19 ಸಂದರ್ಭದ ಪರಿಸ್ಥಿತಿಗೆಅನುಗುಣವಾಗಿಸುರಕ್ಷಿತವಾದ ಸಿದ್ದವಿರುವ ರುಚಿಕರ ಮತ್ತುಆರೋಗ್ಯದಾಯಕಆಹಾರ ಲಭ್ಯವಾಗುತ್ತದೆ.

7. ನೈಸರ್ಗಿಕವಾದ ಪ್ರಕ್ರಿಯೆಯಲ್ಲಿಯಾವುದೇ ಹಾನಿಕಾರಕಸಂರಕ್ಷಕಗಳನ್ನು ಉಪಯೋಗಿಸದೇತಯಾರಾದ ಈ ಉತ್ಪನ್ನಗಳ ಜೀವಿತಾವಧಿಯು 03 ತಿಂಗಳ ಕಾಲ ಸಾಮಾನ್ಯಉಷ್ಣತೆಯಲ್ಲಿತಿನ್ನಲುಯೋಗ್ಯವಾಗಿರುತ್ತವೆ.

8. ಸಿದ್ದವಾದ ಪೊಂಗಲ್ ಮತ್ತು ಪಾಯಸ ಶಾಲಾ ಮಕ್ಕಳಿಗೆ ಮತ್ತುಉದ್ಯೋಗಸ್ಥರಿಗೆ ಸುಲಭವಾಗಿಉಪಹಾರ ಮತ್ತುಊಟಕ್ಕೆ ಅನುಕೂಲವಾಗುತ್ತದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!