ಕರ್ನಾಟಕ ಹಾಲು ಮಹಾಮಂಡಳಿ( ಕೆಎಂಎಫ್) ಇದರ 14 ಹಾಲು ಒಕ್ಕೂಟಗಳಲ್ಲಿ ಒಂದಾದ ಧಾರವಾಡ ಸಹಕಾರ ಹಾಲು ಒಕ್ಕೂಟವೂ ತನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಉತ್ತಮ ಗುಣಮಟ್ಟದ ಪರಿಶುದ್ಧ ಪಾಶ್ಚೀಕರಿಸಿದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಸಹಕಾರಿ ಸಂಸ್ಥೆಯಾಗಿದ್ದು. ವಿವಿಧ 42 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು(ಎ.ಹೆಚ್ & ಎ.ಐ.) ವೇತನಶ್ರೇಣಿ 52650-97100 ಹುದ್ದೆಗಳ ಸಂಖ್ಯೆ-13, ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್) ವೇತನಶ್ರೇಣಿ 52650-97100 ಹುದ್ದೆಗಳ ಸಂಖ್ಯೆ-04,ಸಹಾಯಕ ವ್ಯವಸ್ಥಾಪಕರು(ಹಣಕಾಸು) ವೇತನಶ್ರೇಣಿ 52650-97100 ಹುದ್ದೆಗಳ ಸಂಖ್ಯೆ-01,ವಿಸ್ತರಣಾಧಿಕಾರಿ ದರ್ಜೆ-3, ವೇತನಶ್ರೇಣಿ 33450-62600, ಹುದ್ದೆಗಳ ಸಂಖ್ಯೆ-10,ಡೇರಿ ಪರಿವೀಕ್ಷಕರು ದರ್ಜೆ-3, ವೇತನಶ್ರೇಣಿ 33450-62600 ಹುದ್ದೆಗಳ ಸಂಖ್ಯೆ-04,ಹಿರಿಯ ತಾಂತ್ರಿಕ ವೇತನಶ್ರೇಣಿ 27650-52650, ಹುದ್ದೆಗಳ ಸಂಖ್ಯೆ-08, ತಾಂತ್ರಿಕ ಅಧಿಕಾರಿ (ಡಿ.ಟಿ)(ಬ್ಯಾಕ್‍ಲಾಗ್ ಹುದ್ದೆ) ವೇತನಶ್ರೇಣಿ 43100-83900, ಹುದ್ದೆಗಳ ಸಂಖ್ಯೆ-01,ಮಾರುಕಟ್ಟೆ ಅಧಿಕಾರಿ (ಬ್ಯಾಕ್‍ಲಾಗ್ ಹುದ್ದೆ) ವೇತನಶ್ರೇಣಿ 43100-83900 ಹುದ್ದೆಗಳ ಸಂಖ್ಯೆ-01, ವಿದ್ಯಾರ್ಹತೆ ಮುಂತಾದ ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ವೆಬ್‍ಸ್ಶೆಟ್‍ಗೆ ಭೇಟಿ ನೀಡುವುದು.
ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಖುದ್ದಾಗಿ/ಅಂಚೆ/ಕೋರಿಯರ್ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಸಲ್ಲಿಸಲು ಮಂಡ್ಯ ಹಾಲು ಒಕ್ಕೂಟದ ಅಧಿಕೃತ ವೆಬ್ ಸೈಟ್ www.dhamul.in ಅನ್ನು ಸಂಪರ್ಕಿಸಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭ ದಿನಾಂಕ 7.01.2019, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 06.02.2019, ಅರ್ಜಿ ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 7.2.2019ಆಗಿರುತ್ತದೆ.
ಓದಿ ಸುಮ್ಮನಾಗಬೇಡಿ! ಲೈಕ್ ಮಾಡಿ ಶೇರ್ ಮಾಡಿ ನಿಮ್ಮಿಂದ ಒಬ್ಬರಿಗೆ ಸಹಾಯವಾಗಲಿ, ಮಾಹಿತಿ ಎಲ್ಲರಿಗೂ ತಲುಪಲಿ.ಶುಭವಾಗಲಿ.
ನವೀನ್ ರಾಮನಗರ