ಸುದ್ದಿ

ಇಂದು ಅಂತರರಾಷ್ಟ್ರೀಯ ಕಿಡ್ನಿ ಡೇ. ಕಿಡ್ನಿ ಆರೋಗ್ಯಕ್ಕೆ ಏನು ಮಾಡಬೇಕು? ಓದಿ

ಮೂತ್ರಪಿಂಡಗಳು ಮೂತ್ರದ ಉದ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿ ಜೋಡಿಯಾಗಿರುವ ಅಂಗ. ವಿಸರ್ಜನಾ ಕ್ರಿಯೆಗಳಲ್ಲಿ ಒಂದಾದ ಮೂತ್ರ ವ್ಯವಸ್ಥೆಯ ಮುಖ್ಯವಾದ ಭಾಗವೇ ಕಿಡ್ನಿ.

ದೇಹದ ಅಂತರಿಕ ಸಮತೋಲನಕ್ಕೆ ಸಂಬಂಧಿದಿದಂತೆ ಹಲವು ಅನುಷಂಗಿಕ ಕ್ರಿಯೆಗಳನ್ನೂ ಮೂತ್ರಪಿಂಡಗಳು ಮಾಡುತ್ತವೆ. ಬದಲಾದ ಆಹಾರ, ವಿಹಾರ, ಜೀವನಶೈಲಿಗಳಿಂದ ಜನರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರಪಿಂಡ ಕಾಯಿಲೆಯೂ ಪ್ರಮುಖವಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಪ್ರಪಂಚದಾದ್ಯಂತ 850 ಮಿಲಿಯನ್ ಜನರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮೂತ್ರಪಿಂಡದ ಸಮಸ್ಯೆ ಯಾವುದರಿಂದ ಬರುತ್ತದೆ ಎಂದು ಗಮನಿಸೋಣ.

ಡಯಾಬಿಟಿಕ್( ಮಧುಮೇಹ) ಹೈ ಬಿಪಿ ( ಅಧಿಕ ರಕ್ತದೊತ್ತಡ ) ಇಬೇಸಿಟಿ (ಬೊಜ್ಜು) ಮತ್ತಿತ್ತರ ಸಮಸ್ಯೆ ಇದ್ದವರು ಅವುಗಳ ಶಮನಕ್ಕೆ ಸೇವಿಸುವ ಮಾತ್ರೆ ಔಷಧಗಳು ಮೂತ್ರಪಿಂಡ ಸಮಸ್ಯೆಗೆ ಕಾರಣವಾಗುತ್ತವೆ. ಪ್ರಗತಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಇಂಥ ರೋಗಿಗಳ ಸಮಸ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ವೈದ್ಯಕೀಯ ವಿಜಾÐನ ಕ್ಷೇತ್ರ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ.ಎಲ್ಲ ರೋಗಗಳಿಗೂ ಪರಿಹಾರೋಪಾಯ ಮತ್ತು ಔಷಧ ಕಂಡುಹಿಡಿಯಲಾಗಿದೆ. ರಕ್ತ ಹಾಗೂ ಮೂತ್ರ ಪರೀಕ್ಷೆಗಳ ಮೂಲಕ ಆರಂಭಿಕ ಹಂತದಲ್ಲೇ ಕಿಡ್ನಿ ಸಮಸ್ಯೆ ಪತ್ತೆ ಮಾಡಲು ಸಾಧ್ಯವಿದೆ. ಇದರಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸಮಸ್ಯೆ ಹೆಚ್ಚಾಗದಂತೆ ಜಾಗೃತಿ ವಹಿಸಬೇಕಿದೆ.

ಸಮತೋಲನ ಆಹಾರ ಸೇವನೆ, ಶುದ್ಧ ನೀರು ಸೇವನೆ, ಬೇಕರಿ ತಿನಿಸು, ಮಸಾಲೆ ಪದಾರ್ಥ ಮತ್ತು ಹೊರಗಿನ ಆಹಾರ ಸೇವನೆಯಲ್ಲಿ ಮಿತಿಗಳನ್ನು ಪಾಲಿಸಿದರೆ ಕಿಡ್ನಿ ಆರೋಗ್ಯ ಪಾಲನೆ ಸಾಧ್ಯ. 2006 ರಿಂದ ( ಮಾರ್ಚ್ ತಿಂಗಳ ಎರಡನೇ ಗುರುವಾರ )ವಲ್ಡ್ ್ ಕಿಡ್ನಿ ಡೇ ಆಚರಿಸುವ ಮೂಲಕ ಆರೋಗ್ಯ ಜಾಗೃತಿಗೆ ಮುನ್ನಡೆ ಇಡಲಾಯಿತು. ಈ ನಿಟ್ಟಿನಲ್ಲಿ ಭಾರತದಲ್ಲಿ 2016 ರಲ್ಲಿ ಪ್ರಧಾನಮಂತ್ರಿ ನ್ಯಾಷನಲ್ ಡಯಾಲಿಸಿಸ್ ಪ್ರೋಗ್ರಾಂ ಚಾಲನೆ ಪಡೆಯಿತು.
-ಲಕ್ಷ್ಮೀ ಸಂತೋಷ್

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!