ಕನಾ೯ಟಕದಲ್ಲಿ ಮೇ ಅಂತ್ಯದವರೆಗೆ ಲಾಕ್ ಡೌನ್ ಮುಂದುವರೆಯಲಿದೆ.ಪ್ರತೀ ಭಾನುವಾರ ಸಂಪೂಣ೯ ಲಾಕ್ ಡೌನ್ಕಂಟೈನ್ಮೆಂಟ್ ಜೋನ್ ನಲ್ಲಿ ಕಠಿಣ ಕಾನೂನು ಕ್ರಮ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರಕ್ಕೆ ಗ್ರೀನ್, ಆರೆಂಜ್ ಜೋನ್ ನಲ್ಲಿ ನಾಳೆಯಿಂದಲೇ ಅನುಮತಿ.
ಅಂತರ ಜಿಲ್ಲಾ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಸಕಾ೯ರ. ಖಾಸಗಿ ಬಸ್ ಸಂಚಾರಕ್ಕೂ ರಾಜ್ಯದಲ್ಲಿ ಅವಕಾಶ- 1 ಬಸ್ ನಲ್ಲಿ 30 ಪ್ರಯಾಣಿಕರಷ್ಟೇ ಪ್ರಯಾಣಕ್ಕೆ ಅವಕಾಶ – ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಸಂಪಕ೯ ತಡೆ ಮುಂದುವರೆಯಲಿದೆ.- ಬಸ್ ಪ್ರಯಾಣ ದರ ಹೆಚ್ಚಳವಿಲ್ಲ.- ಬೇರೆ ರಾಜ್ಯಗಳಿಂದ ಕನಾ೯ಟಕಕ್ಕೆ ಅನಿವಾಯ೯ ಕಾರಣಗಳು ಬಿಟ್ಟು ಬೇರೆ ಕಾರಣಗಳಿಗೆ ನೀಡುವುದಿಲ್ಲ.- ಆಟೋ, ಟ್ಯಾಕ್ಸಿ ಸಂಚಾರಕ್ಕೂ ಅನುಮತಿ, ಡ್ವೈವರ್ ಬಿಟ್ಟು ಇಬ್ಬರು ಪ್ರಯಾಣಿಸಬಹುದು.
ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ ದಂಡಶುಲ್ಕ ಖಂಡಿತಾ.- ಮಾಲ್, ಹೋಟೇಲ್, ರೆಸ್ಟೋರೆಂಟ್, ಬಾರ್, ರೆಸಾಟ್೯, ಲಾಡ್ಜ್ ಗಳನ್ನು ಬಿಟ್ಟು ಬೇರೆಲ್ಲಾ ಅಂಗಡಿಗಳಿಗೆ ತೆರೆಯಲು ಅನುಮತಿ.- ಪ್ರತೀ ಭಾನುವಾರ ಮೇ ಅಂತ್ಯದವರೆಗೆ ಸಂಪೂಣ೯ ಲಾಕ್ ಡೌನ್ ಇರಲಿದೆ. – ರಾಜ್ಯದ ಎಲ್ಲಾ ಪಾಕ್೯ಗಳಲ್ಲಿ ಬೆಳಗ್ಗೆ 7 ರಿಂದ ಬೆಳಗ್ಗೆ 9 ಮತ್ತು ಸಂಜೆ 5 ರಿಂದ ಸಂಜೆ 7 ಗಂಟೆಯವೆರೆಗೆ ಓಡಾಡಲು ಅನುಮತಿ.- ಮೇ 31 ರವರೆಗೆ ರಾಜ್ಯದಲ್ಲಿ ಜನರ ಸಹಕಾರ ಗಮನಿಸುತ್ತೇವೆ. ರಾಜ್ಯಗಳಿಗೆ ಸಂಪೂಣ೯ ಅಧಿಕಾರ ಇರುವುದರಿಂದಾಗಿ ಸಮಸ್ಯೆಯಾದಲ್ಲಿ ನಿಯಮಾವಳಿ ಬದಲಿಸುತ್ತೇವೆ.
ಕೋವಿಡ್ -19 ಸೋಂಕಿತರ ಸಂಖ್ಯೆ 1231 ಕ್ಕೆ ಏರಿಕೆ. ಇಂದು ಎಲ್ಲೆಲ್ಲಿ ಎಷ್ಟು ಗೊತ್ತಾ?
ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ರಾಜ್ಯವ್ಯಾಪಿ ಕಫ್ಯೂ೯ – ಜನಸಂಚಾರಕ್ಕೆ ಅವಕಾಶವಿಲ್ಲ. ಭಾನುವಾರ ಯಾವುದೇ ವಹಿವಾಟಿಗೂ ಅವಕಾಶವಿಲ್ಲ, ಸಂಪೂಣ೯ ಲಾಕ್ ಡೌನ್ ಅನ್ವಯವಿರುತ್ತದೆ.- ಬೀದಿ ಬದಿ ವ್ಯಾಪಾರಿಗಳು ವಹಿವಾಟು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.- ವಿವಾಹ ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚು ಸೇರಬಾರದು.