ಮೇ 18 ಬೆಳಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಅನ್ವಯ ಕರ್ನಾಟಕದಲ್ಲಿ ಕೊವೀಡ್ -19 ಸಂಖ್ಯೆ 1231ಕ್ಕೆ ಏರಿದೆ. ಇವುಗಳ ಪೈಕಿ 37 ಪ್ರಕರಣಗಳು ಮರಣ ಹೊಂದಿದ್ದು, 521 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ದಿನಾಂಕ 17.05.2020 ಸಂಜೆ 5 ರಿಂದ ದಿನಾಂಕ 18.05.2020 ಬೆಳಿಗ್ಗೆ 12 ವರೆಗೆ 84 ಹೊಸ ಕೊವೀಡ್ -9 ಪ್ರಕರಣಗಳು ಪತ್ತೆಯಾಗಿರುತ್ತವೆ.ಸಾರ್ವಜನಿಕರಿಗೆ ಮನವಿ: ದಯಮಾಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರನ್ನು ಬಳಸಿ,
ಕೈ ಸ್ವಚ್ಛಗೊಳಿಸುವ ದ್ರಾವಣ( ಸ್ಯಾನಿಟೈಸರ್) ಅಥವಾ ನೀರು ಮತ್ತು ಸೊಪನ್ನು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬೇಡಿ.
ಆರೋಗ್ಯ ಸಹಾಯವಾಣಿ ಸಂಖ್ಯೆ: 14410ಕ್ಕೆ ಹಾಗೂ 9745697456, 080-46848600, 080-66692000ಕ್ಕೆ ಕರೆಮಾಡಿ ನಿಮಗೆ ಸಹಾಯ ಮಾಡಲು ನಮಗೆ ನೆರವು ನೀಡಿ ನಾವೆಲ್ಲರೂ ಒಟ್ಟಾಗಿ ಕೋವಿಡ್ -19 ವಿರುದ್ದ ಹೋರಾಡೋಣ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ.
ಕರ್ನಾಟಕ ಸರ್ಕಾರದ ಅಧಿಕೃತ ಕೋವಿಡ್ -19 ಮಾಹಿತಿ ಜಾಲತಾಣ www.covid19.karnataka.gov.in ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.