ಅಡುಗೆ ಯಿಂದ ಹಿಡಿದು ಚರ್ಮದವರೆಗೆ ದಿನನಿತ್ಯದ ಜೀವನದಲ್ಲಿ ತೆಂಗಿನೆಣ್ಣೆಯ ಉಪಯೋಗವಿದೆ. ತೆಂಗಿನೆಣ್ಣೆಯಲ್ಲಿರುವ ಔಷಧಿಯ ಗುಣ ಹಲ್ಲುಗಳನ್ನು ಕೂಡ ಗಟ್ಟಿಯಾಗಿಸುತ್ತವೆಯಂತೆ.ಹಲ್ಲುಜ್ಜಲು ಈ ತೆಂಗಿನೆಣ್ಣೆಯನ್ನು ಹೇಗೆಲ್ಲಾ ಬಳಸಬಹುದು ಏನೆಲ್ಲಾ ಉಪಯೋಗವಿದೆ ಗೊತ್ತಾ ಮುಂದೆ ಓದಿ.
ತೆಂಗಿನೆಣ್ಣೆಯಲ್ಲಿ ಯಾವುದೇ ರೀತಿಯ ಕೆಮಿಕಲ್ಸ್ ಇರುವುದಿಲ್ಲ ಶುದ್ಧವಾದ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಟೂತ್ ಪೇಸ್ಟ್ ರೀತಿ ಬಳಸಬಹುದು. ತೆಂಗಿನೆಣ್ಣೆ ಬಳಸಿಕೊಂಡು ಕೆಲವೊಂದು ವಸ್ತುವನ್ನು ಉಪಯೋಗಿಸಿಕೊಂಡು ಮನೆಯಲ್ಲಿ ಟೂತ್ ಪೇಸ್ಟ್ ತಯಾರಿಸಿಕೊಂಡು ಪ್ರತಿ ನಿತ್ಯ ಹಲ್ಲುಜ್ಜುವುದರಿಂದ ಹಲವಾರು ಉಪಯೋಗಗಳಿವೆ.
ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.
ಸ್ಪಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ನಿಮ್ಮ ಒಸಡಿಗೆ 10 ನಿಮಿಷ ಮಸಾಜ್ ಮಾಡಿ ಇದರಿಂದ ಬಾಯಲ್ಲಿರುವ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ. 1 ಟೀಸ್ಪೂನ್ ಬೇಂಕಿಗ್ ಸೋಡ ಅರ್ಧ ಚಮಚ ಉಪ್ಪು, 1 ಹನಿ ಪುದೀನಾ ಎಣ್ಣೆ , 4 ಹನಿ ತೆಂಗಿನಣ್ಣೆ, 3 ಹನಿ ನೀರು ಇವಿಷ್ಟುನ್ನು ಒಂದು ಬೌಲ್ ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಆದ ನಂತರ ಇದರ ಮೂಲಕ ನಿಮ್ಮ ಹಲ್ಲುಜ್ಜಿ. ತೆಂಗಿನೆಣ್ಣೆಯು ಬ್ಯಾಕ್ಟಿರಿಯಗಳ ವಿರುದ್ದ ಹೋರಾಡುವ ಗುಣ ಹೊಂದಿದೆ. ಎಣ್ಣೆಯನ್ನು ಬಳಸಿ ಬಾಯಿ ಮುಕ್ಕಳಿಸುವ ಪದ್ದತಿ ಹಿಂದಿನ ಕಾಲದಿಂದಲೂ ಇದೆ. ಇದರಿಂದ ಬಾಯಲ್ಲಿರುವ ಬ್ಯಾಕ್ತಿರಿಯಾಗಳು ನಾಶವಾಗುತ್ತವೆ.
ಕಿತ್ತಳೆ ಹಣ್ಣು ಮಾರುವ ಸಾಮಾನ್ಯನಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಏಕೆ ಬಂತು ಗೊತ್ತಾ?
ಹಲ್ಲುಜ್ಜಲು ಹಿಂದೆ ಇದ್ದಿಲು ಪುಡಿ, ಬೇವಿನ ಕಡ್ಡಿ ಬಳಸುತ್ತಿದ್ದದ್ದು ನೆನಪಿಲ್ಲವೇ. ನಂತರ ಗೋಪಾಲ್ ಹಲ್ಲಿನ ಪುಡಿ ಬಳಸಿ ಹಲ್ಲುಜ್ಜುತ್ತಿದ್ದ ನೆನಪು ಬರುತ್ತಿಲ್ಲವೇ ಇವೆಲ್ಲವೂ ಕೂಡ ಗಟ್ಟಿ ಮುಟ್ಟಿನ ಹಲ್ಲಿಗೆ ರಾಮಬಾಣವಾಗಿದ್ದವು. ಜಾಹಿರಾತಿನ ಮೊಡಿಗೆ ಬಿದ್ದು, ಪಳ ಪಳ ಹೊಳೆಯುವ ಹಲ್ಲನ್ನು ತೊರಿಸಿ ಕೆಮಿಕಲ್‍ಯುಕ್ತ ಟೂತ್ ಪೆಸ್ಟ್ ಬಳಸುತ್ತಿರುವ ಈಗಿನವರಿಗೆ ಇದೆಲ್ಲಾ ಅರ್ಥಮಾಡಿಸೋದು ಕಷ್ಟ ಅಲ್ಲವೇ? ಹಲ್ಲಿನ ಆರೋಗ್ಯವೂ ಕೂಡ ಅತ್ಯಂತ ಮಹತ್ವದ್ದು ಆಗಾಗಿ ಇಷ್ಟೇಲ್ಲಾ ಹೇಳಬೇಕಾಯಿತು.