ಪ್ರತಿ ವಿಕೇಂಡ್ ಬಂತು ಅಂದ್ರೆ ಸಾಕು ಜೀ ವಾಹಿನಿಯಲ್ಲಿ ಬರುವ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನು ಎಲ್ಲರೂ ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಈ ಕಾರ್ಯಕ್ರಮದಲ್ಲಿ ಬರುವ ಸಾಧಕರು ತಮ್ಮ ಅನುಭವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪರಿ, ಸಾಧನೆಗೆ ಮಾಡಿದ ತ್ಯಾಗ ಅವರ ಬದುಕು ಎಲ್ಲವೂ ಅನಾವರಣಗೊಳ್ಳುತ್ತದೆ. ಜೊತೆಗೆ ರಮೇಶ್ ಮಾತಿನ ಸ್ಪರ್ಶ ಕಾರ್ಯಕ್ರಮ್ಕಕೆ ಮತ್ತಷ್ಟು ಮೆರಗನ್ನು ನೀಡುತ್ತದೆ.
ಸೀಸನ್ 4ಲ್ಲಿ ಈಗಾಗಲೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ನಟ ಶಶಿಕುಮಾರ್, ವಿನಯ್ ಪ್ರಸಾದ್, ಶ್ರೀಮುರಳಿ, ಪ್ರೇಮಾರವರು ಕಾಣಿಸಿಕೊಂಡಿದ್ದಾರೆ. ಜೂನ್ 1 ರಂದು ಪ್ರಸಾರವಾಗುವ ಶೋ ನಲ್ಲಿ ಕನ್ನಡದ ಹೆಮ್ಮೆ ನಾರಾಯಣಮೂರ್ತಿಯವರು ಭಾಗವಹಿಸಲಿದ್ದಾರೆ. ಈಗಾಗಲೇ ಜೀ ವಾಹಿನಿ ಚಿತ್ರಿಕರಣದಿಂದಲೇ ತನ್ನ ಫೇಸ್‍ಬುಕ್ ಖಾತೆಯಲ್ಲಿ ನೇರ ತುಣುಕೊಂದನ್ನು ಪ್ರಸಾರಮಾಡಿದೆ.
ಕರುನಾಡ ನೆಲದಲ್ಲಿ ಕನ್ನಡಿಗರ ಕಂಪನಿಗಳಿಲ್ಲ ಎಂಬ ಕೊರಗನ್ನು ನಿಗಿಸಿದ ಹೆಮ್ಮೆ ನಾರಾಯಣಮೂರ್ತಿಯವರಿಗೆ ಸಲ್ಲುತ್ತದೆ. ಕಂಪನಿ ಕಟ್ಟುವಾಗಿನ ಸ್ಥಿತಿ ಕಂಪನಿಯನ್ನು ಹೆಮ್ಮೆರವಾಗಿ ಬೆಳಸಿದ ಪರಿ ಎಲ್ಲವನ್ನು ಹಂಚಿಕೊಂಡಿದ್ದಾರೆ ನಾರಾಯಣಮೂರ್ತಿ ಅವರ ಪತ್ನಿ ಶ್ರೀಮತಿ ಸುಧಾಮೂರ್ತಿ ಕೂಡ ಅವರೊಂದಿಗನ ನೆನಪುಗಳನ್ನು ಎಳೆ ಎಳೆಯಾಗಿ ಹಂಚಿಕೊಂಡಿದ್ದಾರೆ. ತಮ್ಮ ಪ್ರೇಮ ವಿವಾಹ, ಸರಳ ಬದುಕು, ಸಮಾಜ ಸೇವೆ ಎಲ್ಲವೂ ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.
ಪ್ರತಿಯೊಬ್ಬರೂ ತಪ್ಪದೇ ಈ ಶೋ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ನೀವೂ ಕೂಡ ಮಿಸ್ ಮಾಡದೆ ನೋಡಿ.