ನಮ್ಮ ದೇಹದ ಸಾಕಷ್ಟು ಸಮಸ್ಯೆಗೆ ಕೆಲವು ಮನೆ ಮದ್ದುಗಳಿವೆ. ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯ ಕಾರಣದಿಂದ ವಾಂತಿ,ಹೊಟ್ಟೆಯುರಿ,ಹೊಟ್ಟೆತೊಳಸಿದಂತಾಗುವುದು ಆಗುತ್ತದೆ. ಏನೇ ತಿಂದರೂ ಸರಿಯಾಗಿ ಜೀರ್ಣವಾಗದೇ ಬಾಯಲ್ಲಿ ನೀರು ಸುರಿದಂತಾಗತ್ತದೆ. ಈ ಗ್ಯಾಸ್ಟ್ರಿಕ್‍ನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಗುಣಪಡಿಸಿಕೊಳ್ಳಬಹುದು.
• ಒಂದು ಗ್ಲಾಸ್ ನೀರನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುಂಠಿಯನ್ನು ಜಜ್ಜಿ ಹಾಕಿ 5 ನಿಮಿಷಗಳ ಕಾಲ ಕುದಿಸಿ. ಕುದಿಸಿದ ನಂತರ ಒಂದು ಬಿಳಿ ಬಟ್ಟೆಯಲ್ಲಿ ಸೋಸಿ ಅದು ಉಗುರು ಬಿಸಿಗೆ ಹಾರಿಸಿ ಕುಡಿಯಿರಿ. ಶುಂಠಿಯು ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ಶುಂಠಿಯ ಔಷಧೀಯ ಗುಣ ವಾಂತಿಯನ್ನು ಕಡಿಮೆ ಮಾಡುತ್ತದೆ.
• ಒಂದು ಟೀ ಸ್ಪೂನ್ ಜೀರಿಗೆಗೆ, ಅರ್ಧ ಟೀ ಸ್ಪೂನ್ ಸೋಂಪು 6 ಕಾಳು ಮೆಣಸು ಹಾಕಿ ಸ್ವಲ್ಪ ಬಿಸಿಮಾಡಿ ಪುಡಿ ಮಾಡಿ ಒಂದು ಗ್ಲಾಸ್ ನೀರನ್ನು ಒಲೆಯ ಮೇಲಿಟ್ಟು ನೀರು ಬಿಸಿಯಾದಾಗ ಪೌಡರ್ ಹಾಕಿ ಕುದಿಸಿ ನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಸೋಸಿ ಕುಡಿಯುವುದರಿಂದ ಕೂಡ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
• ನಮ್ಮ ದೇಹದ ಸಾಕಷ್ಟು ಸಮಸ್ಯೆಯನ್ನು ನೀರು ಕುಡಿಯುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಮಹಿಳೆಯರು ದಿನಕ್ಕೆ 2.7 ಲೀಟರ್ ಹಾಗೂ ಪುರುಷರು 3.7 ಲೀಟರ್ ನೀರು ಕುಡಿಯುವುದರಿಂದ ಗ್ಯಾಸ್ಟ್ರೀಕ್ ದೂರ ಮಾಡಬಹುದು.
• ಜೆಂಕ್ ಪುಡ್, ಮಸಾಲ ಪದಾರ್ಥ, ಮಾಂಸಹಾರ ಸೇವನೆ ಕಡಿಮೆ ಮಾಡುವ ಮೂಲಕ ಗ್ಯಾಸ್ಟ್ರೀಕ್ ಸಮಸ್ಯೆ ಬರದಂತೆಯೂ ತಡೆಯಬಹುದು