ನಮ್ಮ ರಾಮನಗರ

ರಾಮನಗರಮಾಜಿ ಶಾಸಕ ಹಾಗೂ ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್(87) ವಿಧಿವಶ

ರಾಮನಗರದಲ್ಲಿ ಜೂನಿಯರ್‌ ಕಾಲೇಜು ಮಂಜೂರು ಮಾಡಿಸಿ ಕಾರ್ಯಾರಂಭ ಮಾಡುವಲ್ಲಿ ಯಶಸ್ವಿಯಾಗಿದ್ದ ಎ.ಕೆ. ಅಬ್ದುಲ್ ಸಮದ್‌ ನಿಧನ

ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್(87) ಮಂಗಳವಾರ ಮುಂಜಾನೆ ವಿಧಿವಶರಾಗಿದರು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಸಮದ್ ಅವರು, ಬೆಂಗಳೂರು ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂಸದ ಡಿ.ಕೆ. ಸುರೇಶ್‍ರವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರ

ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಖಬ್ರಸ್ಥಾನದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯದಂತೆ ಮಂಗಳವಾರ ಸಂಜೆ ನೆರವೇರಿತು. ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಅಬ್ದುಲ್ ಸಮದ್ ಅವರು, ರಾಮನಗರ ಕ್ಷೇತ್ರದಿಂದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಪರಾಜಿತರಾಗೊಂಡಿದ್ದರು. 1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಅಬ್ದುಲ್ ಸಮದ್ ಅವರು, (20978 ಮತ) ಪ್ರತಿಸ್ಪರ್ಧಿ ನ್ಯಾಷನಲ್ ಕಾಂಗ್ರೆಸ್ ಆರ್ಗನೈಸೇಶನ್ (ಎನ್ ಸಿಒ) ಅಭ್ಯರ್ಥಿ ಬಿ‌.ಪುಟ್ಟಸ್ವಾಮಯ್ಯ (26775) ಎದುರು 5797 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆ ನಂತರ 1978ರ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಇಂದಿರಾ ) ಅಭ್ಯರ್ಥಿ ಯಾದ ಅಬ್ದುಲ್ ಸಮದ್ ಅವರು 27837 ಮತಗಳನ್ನು ಪಡೆದು ಜನತಾ ಪಕ್ಷದ ಅಭ್ಯರ್ಥಿ ಸಿ‌.ಬೋರಯ್ಯ ವಿರುದ್ಧ 6962 ಮತಗಳ ಅಂತರದಿಂದ ಗೆದ್ದು ರಾಮನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ 1983ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷದ ಸಿ.ಬೋರಯ್ಯ( 45076) ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಅಬ್ದುಲ್ ಸಮದ್ ಅವರು 18876 ಮತಗಳಿಂದ ಸೋಲು ಅನುಭವಿಸಿದ್ದರು. ಆ ನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡ ಅಬ್ದುಲ್ ಸಮದ್ ,ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಬೆಂಗಳೂರಿನಲ್ಲಿರುವ ಯುನಾನಿ ಮಹಾವಿದ್ಯಾಲಯಕ್ಕೆ ಸರಕಾರಿ ಜಾಗ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುದಾನ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಲ್ಲದೆ, ರಾಮನಗರದಲ್ಲಿ ಜೂನಿಯರ್‌ ಕಾಲೇಜು ಮಂಜೂರು ಮಾಡಿಸಿ ಕಾರ್ಯಾರಂಭ ಮಾಡುವಲ್ಲಿಯೂ ಅಬ್ದುಲ್ ಸಮದ್‌ ಯಶಸ್ವಿಯಾಗಿದ್ದರು.

ಕಾಲು-ಬಾಯಿ-ಜ್ವರ ಪಶುಗಳಲ್ಲಿ ಸೃಷ್ಟಿಸಬಹುದಾದ ಸಮಸ್ಯೆಗಳ ನಿಯಂತ್ರಣಕ್ಕೆ ಲಸಿಕೆಯೊಂದೇ ಸೂಕ್ತ ಅಸ್ತ್ರ

ಚುನಾವಣೆ ಯಲ್ಲಿ ಭರ್ಜರಿ ಬಹುಮತದೊಂದಿಗೆ ಚುನಾಯಿತರಾಗಿ ದ್ದ ಅಬ್ದುಲ್ ಸಮದ್, ನಂತರ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು ಧಾರ್ಮಿಕ ಕ್ಷೇತ್ರದತ್ತ ಮುಖ ಮಾಡಿದರು. ತಮ್ಮ ಅಧಿಕಾರವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ, ಶುದ್ಧ ಹಸ್ತದಿಂದ ರಾಜಕಾರಣ ಮಾಡಿದರು ಎಂಬ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ಶಿವಾಜಿನಗರದಲ್ಲಿರುವ ಮರ್ಕಝ್ ಸುಲ್ತಾನ್ ಶಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅಬ್ದುಲ್ ಸಮದ್, ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.

– ಎಸ್‌. ರುದ್ರೇಶ್ವರ

ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ

About the author

admin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!