ದಿ.ನಿಸಾರ್ ಅಹಮದ್ ರವರ “ಕುರಿಗಳು ಸಾರ್ ನಾವ್ ಕುರಿಗಳು” ಸಾಲುಗಳು ನಮಗೆಲ್ಲ ಅನ್ವಯಿಸುತ್ತೆ! ಏಕೆಂದರೆ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣ, ಮಾದ್ಯಮಗಳಲ್ಲಿ ಮಿಂಚಿ ಯುವಕರ ಸ್ಪೂತಿ, ಯುವಕರ ಆಶಾಕಿರಣ ಡ್ರೋಣ್ ಪ್ರತಾಪ್ ಎಲ್ಲರಿಗೂ ಕುರಿ ಮಾಡಿ ಮಾನ ಸನ್ಮಾನ ಗೌರವಗಳನ್ನು ಪಡೆದು ಹಿರೋ ಆಗಿದ್ದಾಗಿದೆ! ಆದರೆ ಅಸಲಿ ಕಥೆ ಏನೆಂದರೆ ಇಷ್ಟು ವರ್ಷ ನಮಗೆ ದ್ರೋಣ್ ಪ್ರತಾಪ್ ಆಲಿಯಾಸ್ ಎಂ.ಎನ್. ಪ್ರತಾಪ್ ಕಿವಿಗೆ ಹೂ ಮುಡಿಸಿ ಕುರಿ ಆಗಿಸಿದ್ದು ಮಾತ್ರ ಈಗ ಬೆಳಕಿಗೆ ಬಂದಿದೆ!.
ಕುರಿ ಪ್ರತಾಪ್ ಉದಯ ಟಿವಿಯಲ್ಲಿ ಹಾಸ್ಯಕ್ಕಾಗಿ ಜನರನ್ನು ಕುರಿಮಾಡಿ ನಗಿಸಿ ಜನಪ್ರಿಯತೆಗಳಿಸಿದ್ದರು. ಆದರೆ ಈ ದ್ರೋಣ್ ಪ್ರತಾಪ್ ರಿಯಲ್ ಆಗಿ ಎಲ್ಲರನ್ನೂ ಕುರಿ ಮಾಡಿ ಬಕ್ರಾ ಮಾಡಿ ಕುರಿಯಾಗಿಸಿದ್ದಾನೆ.ಮೊದಲಿಗೆ ಈ ವಿಷಯ ಕೇಳಿದವರಿಗೆ ನಿಜಕ್ಕೂ ನಂಬಲಿಕ್ಕೆ ಸಾಧ್ಯವಿಲ್ಲ! ಏಕೆಂದರೆ ಈ ದ್ರೋಣ್ ಪ್ರತಾಪ್ ಅಷ್ಟು ಅಮಾಯಕನಾಗಿ ಜನರಿಗೆ, ಮಾಧ್ಯಮಗಳ ಮುಂದೆ ಇರುತ್ತಾನೆ. ಮತ್ತು ಅಷ್ಟೇ ಚಂದವಾಗಿ ಮಾತನಾಡುತ್ತಾನೆ.
ವಿಷಯ ಇಷ್ಟೇ ಈ ಪ್ರತಾಪ್ 2017ರ ಜಪಾನ್ ನಲ್ಲಿ ನಡೆದ ಅಂತರರಾಷ್ಟ್ರೀಯ ರೋಬೊಟಿಕ್ ಎಕ್ಸಿಬ್ಯುಷನ್ ಪ್ರಥಮ ಸ್ಥಾನಗಳಿಸಿರುದು ಮತ್ತು 2018 ಜರ್ಮನಿಯಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ಗೋಲ್ಡ್ ಮೇಡಲ್ ಮತ್ತು Cebit ಬಹುಮಾನ ಹೀಗೆ ಅನೇಕ್ ಆವಾರ್ಡ್ ಗಳಿಸಿರುವುದು ಎಲ್ಲವೂ ಸುಳ್ಳು ಎಂಬುದಾಗಿ ರಾಷ್ಟ್ರೀಯ ಸುದ್ದಿ ಮಾದ್ಯಮ opindia ಪ್ಯಾಕ್ಟ್ ಚೆಕ್ ಮಾಡಿ ಪ್ರಕಟಿಸಿದೆ. ಇನ್ನೂ ಇದಕ್ಕೆ ಪುರವೇ ಎಂಬಂತೆ ಪ್ರತಾಪ್ ಪ್ರಶಸ್ತಿ ಸ್ವೀಕರಿಸುತ್ತೀರುವ ಯಾವ ಪೋಟೋ ಕೂಡ ಪ್ರಕಟಿಸಿಲ್ಲ ಮತ್ತು ಈತನ ಬಳಿ ಇವನು ತಯಾರಿಸಿರುವ ದ್ರೋಣ್ ಇದೆ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ!. ಜಪಾನ್ ದೇಶದವರು ತಯಾರಿಸಿರುವ ದ್ರೋಣ್ ಪಕ್ಕ ಪೋಟೊ ತೆಗೆಸಿಕೊಂಡಿರುವುದು ಮಾತ್ರ ಎಲ್ಲೇಡೆ ಇದೆ.
ಇಷ್ಟಕ್ಕೂ ಈ ದ್ರೋಣ್ ಪ್ರತಾಪ್‍ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಕೆಲವರು ಡ್ರೋಣ್ ಪ್ರತಾಪ್ ನ ಪ್ರತಿಕ್ರಿಯೇಗಾಗಿ ಕಾಯುತ್ತಿದ್ದಾರೆ. ಇನ್ನೂ ಕೆಲವರು ಈತನನ್ನು ಹಿಗ್ಗಾ ಮಗ್ಗಾ ಉಗಿದಿದ್ದಾರೆ. ನಟ ಜಗ್ಗೇಶ್ ಕೂಡ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಈತನ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ.“ಕಣ್ಣು ಕಿತ್ತರು ನಿದ್ರೆ ಬರಲಿಲ್ಲಾ ಇವನ ವಿಷಯ ಕೇಳಿ…! ಇವನ ಬಗ್ಗೆ ಬರೆದದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ..! ಕಷ್ಟ ಅಂತ ಬಂದವರಿಗೆ ಭುಜಕೊಡುತ್ತಿದ್ದೆ ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರು ನಂಬುವುದಿಲ್ಲಾ..!! ನನ್ನ ಬದಲಾವಣೆ ಮಾಡಿದ ದ್ರೋಣ್ ಪ್ರತಾಪ್ ನಿನಗೆ ಧನ್ಯವಾದ!! ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು 57ನೇ ವಯಸ್ಸಿಗೆ ಹೊಸ ಪಾಠ ಕಲಿತೆ..ಕಲಿಯುಗ” ಈ ಪೋಸ್ಟ್‍ಗೆ ನೂರಾರು ಮಂದಿ ಕಮೆಂಟ್ ಮಾಡಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಇನ್ನೂ ಖಾಸಗಿ ಸುವರ್ಣನ್ಯೂಸ್ ಈತನನ್ನು ಸಂಪರ್ಕಿಸಿ ಮಾತನಾಡಿಸಿದ್ದು, ಇಲ್ಲಿ ಈತ 4, 5 ದಿನಗಳಲ್ಲಿ ಪತ್ರಿಕಾಗೊಷ್ಠಿಯನ್ನು ಕರೆದು ಎಲ್ಲದಕ್ಕೂ ಉತ್ತರ ಕೊಡುವುದಾಗಿ ತಿಳಿಸಿದ್ದಾನೆ. ಆದರೆ ನಿರೂಪಕರ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಈತನ ಮುಖಭಾವ ಮತ್ತು ಉತ್ತರಗಳು ಜಾರಿಕೊಳ್ಳುವಂತೆ ಇದ್ದದ್ದು ಎಲ್ಲರೂ ಗಮನಸಿದ್ದಾರೆ.
ಯೂ ಟ್ಯೂಬ್ ನಲ್ಲಿ ಪ್ರತಾಪ್ ಮೊಟಿವೇಷನ್ ವಿಡಿಯೋಗಳು ಸಾಕಷ್ಟು ಜನರಿಗೆ ತಲುಪಿದ್ದು, ಈ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನಂಬಲು ಕೂಡ ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಕೆಲವು ಬುದ್ದಿವಂತರೂ ಈತನ ಸುಳ್ಳು ಮಾತುಗಳು ನಮಗೆ ಮೊದಲೇ ಗೊತ್ತಿತ್ತು ಎಂಬುದಾಗಿ ಸೋಷಿಯಲ್ ಮಿಡಿಯಾಗಳಲ್ಲಿ ತಿಳಿಸಿದ್ದಾರೆ. ಪ್ರತಾಪ್ ಮಾತನಾಡುವಾಗ ತುಂಬಾ ಸ್ಫೂರ್ತಿದಾಯಕವಾಗಿ ಕಥೆಯನ್ನು ಹೇಳುತ್ತಿದ್ದ. ತಾನು ಜಪಾನ್‍ನಲ್ಲಿ ಟ್ರೈನ್ ನಲ್ಲಿ ತನ್ನ ದ್ರೋಣ್ ತಯಾರಿಕೆಯ ಸಾಮಾಗ್ರಿಗಳನ್ನು ಸಾಗಿಸಿದ ಕತೆಯಂತೂ ಎಂತವರಿಗೂ ಕಣ್ಣಿರು ತರಿಸಿತ್ತು. ಆದರೆ ಇದು ಸತ್ಯಕ್ಕೆ ದೂರವಾದದ್ದು ಅಂತ ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಈ ದ್ರೋಣ್ ಪ್ರತಾಪ್ ಈ ಎಲ್ಲಾ ಆರೋಪಗಳಿಗೆ ಸಾಕ್ಷಿ ಸಮೇತ ಉತ್ತರ ಕೊಡುತ್ತಾನಾ ಕಾದು ನೋಡಬೇಕು. ಅದನೇ ಇರಲಿ ಸುಳ್ಳು ಹೇಳಿ ಸತ್ಯವನ್ನು ಹೆಚ್ಚು ದಿನ ಮರೆ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನಾದರೂ ಮಾಧ್ಯಮ, ಜನರು ಯಾರೇ ಸಾಧನೆ ಮಾಡಲಿ ಕೂಲಂಕೂಷವಾಗಿ ಪರಿಶೀಲಿಸಿ ಸತ್ಯ ಸತ್ಯತೆಯನ್ನು ತಿಳಿದುಕೊಂಡು ಅವರನ್ನು ಪರಿಚಯಿಸುವಂತಾಗಲಿ. ಕುರಿಗಳು ಸಾರ್ ನಾವು ಕುರಿಗಳೂ ಆಗೋದು ಬೇಡ!!