“ಲೋಕಕಲ್ಯಾಣಕ್ಕಾಗಿ ನಿಸ್ವಾರ್ಥದಿಂದ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು”
ಈ ಸಮಾಜದಲ್ಲಿ ಹುಟ್ಟಿದ ನಾವು ಸೇವಾ ಮನೋಭಾವನೆಯಿಂದ ಬದುಕಬೇಕು. ಸ್ವಾರ್ಥದಿಂದ ಬದುಕಬಾರದು. ಅದರಲ್ಲೂ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಸಂಸ್ಕಾರವಂತರಾಗಬೇಕು. ಸಂಸ್ಕಾರವಿಲ್ಲದ ಬದುಕು ವ್ಯರ್ಥ. ವಿದ್ಯಾರ್ಥಿ ಜೀವನದಲ್ಲಿ 25 ವರ್ಷ ಶ್ರಮಪಟ್ಟರೇ 75 ವರ್ಷ ಸುಖವಾಗಿ ಬದುಕಬಹುದು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ: ನಿರ್ಮಲಾನಂದನಾಥ ಮಹಾಸ್ವಾಮಿಗಳು ಹೇಳಿದರು.
ದಯಾನಂದ ಸಾಗರ ಸಭಾಂಗಣದಲ್ಲಿ ಶಿವಶಂಕರಿ ಸಾಂಸ್ಕೃತಿಕ ಸಭಾ (ನೋ) ಸಂಸ್ಥೆ ದಯಾನಂದ ಸಾಗರ್ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂಸ್ಕøತಿ ಚಿಂತನ -153 ಕಾರ್ಯಕ್ರಮದಲ್ಲಿ ಸೇವಾ-ಜೀವನ ಸಂದೇಶ ವಿಷಯದ ಕುರಿತು ಶ್ರೀಗಳು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪದ್ಮನಾಭನಗರ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ಆಯ್ಕೆಯಾಗುತ್ತಿರುವ ಶ್ರೀ ಆರ್. ಅಶೋಕ್ರವರನ್ನು ಶಿವಶಂಕರಿ ಸಾಂಸ್ಕೃತಿಕ ಸಭಾವತಿಯಿಂದ ಶ್ರೀಗಳು ಗೌರವಿಸಿ ಆಶೀರ್ವದಿಸಿದರು. ಶ್ರೀಮತಿ ಗಾಯತ್ರಿ ಎಂ.ಆರ್. ವೆಂಕಟೇಶ್ರವರ ಪುತ್ರಿ ಅರಳುತ್ತಿರುವ ನೃತ್ಯ ಪ್ರತಿಭೆ ಕು: ಬಿಂದುರವರಿಗೆ ಶ್ರೀಗಳು ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದಯಾನಂದ ಸಾಗರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ: ಡಿ..ಹೇಮಚಂದ್ರಸಾಗರ್, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಆರ್.ಅಶೋಕ್, ಸಂಗೀತ ವಿದ್ಯಾನಿಧಿ ಶೃತಿಲಯ ಭಾರತಿ ವಿದ್ವಾನ್ ಆರ್.ಕೆ.ಪದ್ಮನಾಭ, ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮಿಗಳು ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶಿವಶಂಕರಿ ಸಾಂಸ್ಕೃತಿಕ ಸಭಾ ಅಧ್ಯಕ್ಷರಾದ ಶ್ರೀ ಬಿ.ಪಿ. ರುದ್ರೇಶ್ಬಾಬು ಮತ್ತು ಅವರ ಪದಾಧಿಕಾರಿಗಳು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೆ ಮುಂಚಿತವಾಗಿ ಪರದೆ ಮೇಲೆ ಆದಿಚುಂಚನಗಿರಿ ಕ್ಷೇತ್ರದ ಕುರಿತು ಹಾಗೂ ದಯಾನಂದ ಸಾಗರ ವಿದ್ಯಾ ಸಂಸ್ಥೆಗಳ ಬಗ್ಗೆ ಕಿರುಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಶ್ರೀಗಳನ್ನು ಸಭಾಂಗಣದ ಮುಖ್ಯ ದ್ವಾರದಲ್ಲಿ ಶ್ರೀಮತಿ ಧನಲಕ್ಷ್ಮಮ್ಮ ಮತ್ತು ಶ್ರೀ ರಾಮಕೃಷ್ಣ ದಂಪತಿಗಳ ಮಂಗಳವಾದ್ಯ, ಸಂಸ್ಕೃತ ವಿದ್ಯಾರ್ಥಿಗಳ ವೇದಘೋಷಗಳ ಮೂಲಕ ಸ್ವಾಗತಿಸಿದ್ದು ಹಾಗೂ ಶ್ರೀಮತಿ ಪದ್ಮ ಹೇಮಂತ್ ತಂಡ ನ್ಯತ್ಯ ರೂಪಕದ ಮೂಲಕ ವೇದಿಕೆಗೆ ಆಹ್ವಾನಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರದಲ್ಲಿ ಪದ್ಮನಾಭನಗರ ಕ್ಷೇತ್ರದ 20 ವಿವಿಧ ಶಾಲೆಗಳ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
-bbmnews