ಸುದ್ದಿ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ. ಡಿಕೆಶಿ ಭಾಷಣದಿಂದ ಕಾರ್ಯಕರ್ತರಲ್ಲಿ ಸಂಚಲನ.

ಕಾಂಗ್ರೇಸ ಪಕ್ಷದ ಸೂಪರ್ ಪವರ್ ಲೀಡರ್ ಡಿ.ಕೆ.ಶಿವಕುಮಾರ್‍ರವರು ಇಂದು ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ವಿನೂತನವಾಗಿ ಅಧಿಕಾರ ಸ್ವೀಕರಿಸುವ ಮೂಲಕ ದಾಖಲೆ ನಿರ್ಮಿಸಿದರು.

ಕನಕಪುರ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್‍ರವರು ಇಂದು ಕಾಂಗ್ರೇಸ್ ಪಕ್ಷದ ದಂಡನಾಯಕನಾಗಿ ಕಾಂಗ್ರೇಸ್ ಪಕ್ಷದ ಎಲ್ಲ ಮುಖಂಡರ ಸಮಕ್ಷಮದಲ್ಲಿ ಇಂದು ಕೆಪಿಸಿಸಿ ಹಿಂದಿನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್‍ರವರಿಂದ ಪಕ್ಷದ ಭಾವುಟವನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಮೊದಲಿಗೆ ಚೀನಾದ ವಿರುದ್ದ ಹೋರಾಡಿ ಹುತಾತ್ಮರಾದ ಸೈನಿಕರಿಗೆ ನಮನಸಲ್ಲಿಸಿ. ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಮತ್ತು ರಾಜ್ಯದ ಕಾಂಗ್ರೇಸ್ ನಾಯಕರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಾಧುಕೋಕಿಲ ಸಂಯೋಜನೆಯ ಕಾಂಗ್ರೇಸ್ ಗೀತೆಯನ್ನು ಹಾಡಲಾಯಿತು.

ಡಿ.ಕೆ. ಶಿವಕುಮಾರ್‍ರವರು ಮಾತನಾಡಿ ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ದುಡಿಯಲು ಬಂದಿದ್ದೇನೆ. ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಶೀರ್ವಾದದಿಂದ ನಾನು ಇಂದು ಅಧಿಕಾರ ಸ್ವೀಕರಿಸಿದ್ದೇನೆ. ನನಗೆ ಒಗ್ಗಟ್ಟಿನ ಹೊರಾಟದಲ್ಲಿ ನಂಬಿಕೆಯಿದೆ ಸಮೂಹ ಹೋರಾಟದೊಂದಿಗೆ ಕಾಂಗ್ರೇಸ್ ಪಕ್ಷವನ್ನು ತೆಗೆದುಕೊಂಡು ಹೋಗೋಣ ಎಂದರು.
ಭೂತ್ ಮಟ್ಟದ ಕಾರ್ಯಕರ್ತರಿಗೆ ಶಕ್ತಿ ಕೊಡಬೇಕು. ಕೇರಳ ಮಾಡಲ್ ಮಾದರಿಯಲ್ಲಿ ನಾವು ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರನೀಡುವಂತಾಗಬೇಕು. ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅಧಿಕಾರ ಸಿಗುವಂತಾಗಬೇಕು. ನನಗೆ ಗುಂಪುಗಾರಿಕೆಯಲ್ಲಿ ನಂಬಿಕೆಯಿಲ್ಲ. ನನಗೆ ಕಾಂಗ್ರೇಸ್ ಗುಂಪು ಆ ಗುಂಪಿನ ಮೇಲೆ ನಂಬಿಕೆ ಇದೆ. ರಾಷ್ಟ್ರ ಧ್ವಜದ ಬಣ್ಣವನ್ನು ಹೊಂದಿರುವ ಪಕ್ಷದ ಧ್ವಜವನ್ನು ಹೊಂದಿರುವ ಪಕ್ಷ ನಮ್ಮದು. ವ್ಯಕ್ತಿ ಪೂಜೆ ಬಿಡೋಣ, ಪಕ್ಷ ಪೂಜೆ ಮಾಡೋಣ. ಹಿಂಬಾಲಕರು ಬೇಡ, ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ.                 

ರಾಜೀವ್ ಗಾಂಧಿಯವರು ಯುವಕರ ಮೇಲೆ ಅಪಾರವಾದ ನಂಬಿಕೆಯಿಟ್ಟಿದ್ದರು. ಯುವ ಶಕ್ತಿಯನ್ನು ನಾವು ಮರಿಯಲಿಕ್ಕೆ ಸಾಧ್ಯವಿಲ್ಲ. ವಿಜ್ಞಾನ ತಂತ್ರಜ್ಞಾನವನ್ನು ಮುಂಚೂಣಿಗೆ ತಂದಿದ್ದೆ ರಾಜೀವ್ ಗಾಂಧಿಯವರು ಇವರ ನೆರಳಿನಲ್ಲಿ ನಾವು ದುಡಿಯೋಣ. ನನ್ನ ಮೇಲೆ ಇಡಿ. ಸಿಬಿಐ. ಪೊಲೀಸ್ ಎಲ್ಲ ಮೂಲಗಳ ಮೂಲಕ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನಾನು ಇವೆಲ್ಲಕ್ಕೂ ಜಗ್ಗುವ ಮನುಷ್ಯನಲ್ಲ. ನನ್ನನ್ನು ಕನಕಪುರದ ಬಂಡೆ ಎಂದೂ ಕೆಲವರೂ ಕರೆಯುತ್ತಾರೆ. ನಾನು ಬಂಡೆಯಲ್ಲ, ಕಲ್ಲು, ಕಲ್ಲು ಕೆತ್ತಿದರೆ ಶಿಲೆಯಾಗುತ್ತದೆ. ಕಂಬವಾಗುತ್ತದೆ. ಮೆಟ್ಟಿಲಾಗುತ್ತದೆ. ನಾನು ವಿಧಾನಸೌದದ ಮೆಟ್ಟಿಲಿನ ರೀತಿ ಕಲ್ಲಾಗಿರುತ್ತೇನೆ. ನನ್ನ ಪಕ್ಷ ಅಧಿಕಾರಕ್ಕೆ ಬರಬೇಕು. ರೈತ ಅನ್ನ ಬೆಳೆಯುತ್ತಾನೆ. ಅನ್ನಕ್ಕೆ ಜಾತಿ ಇಲ್ಲ ಹಾಗೆ ಯಾವುದೇ ಜಾತಿಗೆ ಸ್ಥಿಮಿತವಾಗಿ ನಾವು ದುಡಿಯುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ನೇರವಾಗಿ ರೈತರ ಬಳಿ ನೇರವಾಗಿ ಹೋಗಿ ರಾಜ್ಯಾದ್ಯಂತ 100ಕೋಟಿಗೂ ಹೆಚ್ಚು ಮೌಲ್ಯದ ತರಕಾರಿಯನ್ನು ಖರೀದಿ ಮಾಡಿ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಉಚಿತವಾಗಿ ಹಂಚಿದ್ದೇವೆ.

ನೋವಿನ ಪರ, ದಮನಿತರ ಪರ, ಬಡವರಪರ , ಸಂಕಷ್ಟದಲ್ಲಿರುವವರ ಪರ ನಮ್ಮ ಪಕ್ಷ ದನಿಯೆತ್ತಲೂ ಸದಾ ಇದೆ. ನಮ್ಮ ಪಕ್ಷ ಹೋರಾಟದ ಮೂಲಕ ಬಿಜೆಪಿ ಮುಕ್ತ ಕರ್ನಾಟಕವನ್ನು ಮಾಡುವ ಪಣ ತೊಡೋಣ. ನಿಮ್ಮ ಮಗನಾಗಿ ನನಗೆ ಆಶಿರ್ವಾದಮಾಡಿ. ನಿಮ್ಮೇಲ್ಲರ ಸಹಕಾರವಿರಲಿ. ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ಕಾರ್ಯಕ್ರಮವನ್ನು ಜೂಮ್, ಫೇಸ್‍ಬುಕ್, ಯೂ, ಟ್ಯೂಬ್, ಕನ್ನಡದ ಚಾನೆಲ್‍ಗಳ ಮೂಲಕ ಸುಮಾರು 20 ¯ಕ್ಷ ಜನರು ವೀಕ್ಷಿಸಿ ಸಾಮಾಜಿಕೆ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ಅಧಿಕಾರ ಸ್ವೀಕರಿಸುವ ಈ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ದಾಖಲಾಯಿತು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!