ರಾಮನಗರ, ಜುಲೈ 10 :- ಜಿಲ್ಲೆಯಲ್ಲಿ ಇಂದು 23 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.
ಇಂದು ಮಾಗಡಿ 5, ಚನ್ನಪಟ್ಟಣ 2, ಕನಕಪುರ 10 ಮತ್ತು ರಾಮನಗರದಲ್ಲಿ 6 ಪ್ರಕರಣಗಳು ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.*ಒಟ್ಟು ಪ್ರಕರಣ:* ಇದುವರೆಗೆ ಜಿಲ್ಲೆಯಲ್ಲಿ 355 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ 82, ಮಾಗಡಿ 127, ಚನ್ನಪಟ್ಟಣ 56 ಮತ್ತು ರಾಮನಗರದ 90 ಪ್ರಕರಣಗಳು ಸೇರಿವೆ.
ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 355 ಪ್ರಕರಣಗಳ ಪೈಕಿ 186 ಜನರು ಗುಣಮುಖರಾಗಿದ್ದರೆ, ಇನ್ನೂ 161 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕನಕಪುರ 23, ಮಾಗಡಿ 60, ಚನ್ನಪಟ್ಟಣ 19 ಮತ್ತು ರಾಮನಗರದ 59 ಪ್ರಕರಣಗಳು ಸೇರಿವೆ.
ಗುಣಮುಖ: 29 ಜನರು ಕೋವಿಡ್ ಸೋಂಕಿನಿಂದ ಇಂದು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 186 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಕನಕಪುರ 59, ಮಾಗಡಿ 60, ಚನ್ನಪಟ್ಟಣ 37 ಮತ್ತು ರಾಮನಗರದ 30 ಜನರು ಸೇರಿದ್ದಾರೆ.*ಸಾವು:* ಒಟ್ಟಾರೆ ರಾಮನಗರದಲ್ಲಿ ಒಬ್ಬರು ಹಾಗೂ ಮಾಗಡಿಯಲ್ಲಿ 7 ಜನ ಮೃತ ಪಟ್ಟಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ವರದಿ: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಶುಕ್ರವಾರ (ಜುಲೈ 10) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 11375 (ಹೊಸದಾಗಿ ಇಂದಿನ 250 ಸೇರಿ). ಒಟ್ಟು 4511 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 185 ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 2529ಗೆ ಇಳಿಕೆಯಾಗಿದೆ.
*ಜ್ವರ ತಪಾಸಣೆಃ * ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 16 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 3331 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.*ಕ್ವಾರಂಟೈನ್ಃ* ಒಟ್ಟು 6 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು 63 ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ 303ಕ್ಕೆ ಏರಿಕೆಯಾಗಿದೆ.
*ಮಾದರಿ ಸಂಗ್ರಹಃ* ಇಂದು ಹೊಸದಾಗಿ 259 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 11713 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 9442 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ 259 ಬಾಕಿ ವರದಿ ಸೇರಿ ಒಟ್ಟು 1678 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.