ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಕೊರೊನಾ ವೈರಸ್ ಎಲ್ಲರ ನಿದ್ದೆಗೆಡಿಸಿದೆ. ಕೋರೊನಾ ವೈರಸ್ ಮಾತು ಎಲ್ಲೆಡೆ. ಮನುಷ್ಯ ಸೃಷ್ಠಿಯ ದೇವಸ್ಥಾನಗಳು, ಚರ್ಚ್ಗಳು, ಮಸೀದಿಗಳು, ಎಲ್ಲವೂ ಬಂದ್ ಆಗುತ್ತಿವೆ.
ಈ ವೈರಸ್ನಿಂದಾಗಿ ಈಗಾಗಲೇ ಪ್ರಪಂಚದಲ್ಲಿ 7175 ಜನರ ಪ್ರಾಣ ಹೋಗಿದೆ. ಈ ಡೆಡ್ಲಿ ಕೋರೋನಾ ವೈರಸ್ ಭಾರತಕ್ಕೂ ಕಾಲಿಟ್ಟೂ 100ಕ್ಕೂ ಹೆಚ್ಚು ಜನರಲ್ಲಿ ಸೋಂಕಿರುವುದು ದೃಡಪಟ್ಟಿದೆ. ಅದರಲ್ಲಿ ಕರ್ನಾಟಕದ 8 ಮಂದಿ ಪಾಸಿಟೀವ್ ಕೇಸ್ಗಳು ದಾಖಲಾಗಿವೆ. ಶಂಕಿತ ಸೋಂಕಿತ ವ್ಯಕ್ತಿಗಳು ದಿನೇ ದಿನೇ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದಾರೆ.
ಕಲ್ಬುರ್ಗಿಯಲ್ಲಿ ಮನೆಯಿಂದ ಹೊರಬರಲೇ ಬಾರದು ಎಂಬ ಆಜ್ಞೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಕೋರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ವೃದ್ದನ ಸಂಪರ್ಕದಲ್ಲಿದ್ದ ಕೆಲವರಿಗೆ ಸೋಂಕಿರುವುದು ದೃಡಪಟ್ಟಿದೆ. ಅದರಲ್ಲೂ ವೃದ್ದನನ್ನು ಮನೆಯಲ್ಲೇ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೋರೊನಾ ವೈರಸ್ ಅಂಟಿರುವುದು ದೃಢಪಟ್ಟಿದೆ.
ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ ವೈದ್ಯರಿಗೆ, ಏಕೆ ಅಂತಾ ಎಲ್ಲರಿಗೂ ಈಗ ಅರ್ಥವಾಗುತ್ತಿದೆ. ಕೋರೊನಾ ಸೋಂಕಿತರನ್ನು ಮುಟ್ಟಿ ಅವರನ್ನು ಗುಣಮುಖರಾಗುವಂತೆ ಮಾಡುತ್ತೀರುವುದು ಯಾವುದೇ ದೇವರಲ್ಲ ದೇವರ ರೂಪದಲ್ಲಿರುವ ವೈದ್ಯರು ನರ್ಸ್ಗಳು ಅವರಿಗೆ ಪ್ರತಿಯೊಬ್ಬರೂ ಗೌರವ ಕೊಡಲೇ ಬೇಕು. ಅವರಿಗೂ ಬದುಕಿದೆ, ತಾಯಿ, ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರೂ ಇದ್ದಾರೆ. ಈ ಎಲ್ಲಾ ಸಂಬಂಧಗಳನ್ನು ಮೀರಿ ರೋಗಿ ಗುಣ ಆಗಬೇಕು ಎಂಬ ದೃಷ್ಟೀಯಿಂದ ಸೇವೆ ಮಾಡುತ್ತಿರುವ ವೈದ್ಯರಿಗೆ ಪ್ರತಿಯೊಬ್ಬರೂ ಕೂಡ ಕೈ ಮುಗಿಯಲೇ ಬೇಕು.
ಆಧುನಿಕ ಯುಗದ ಮಹಾಮಾರಿ ಕೋರೋನಾ( ಚೀನಾ ವೈರಸ್) ಬಡಿದೊಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಜೊತೆಗೆ ಸಾರ್ವಜನಿಕ ಸಹಕಾರವೂ ಕೂಡ ಬಹಳ ಮುಖ್ಯ. ಈ ವೈರಸ್ಗೆ ಭಯಪಡದೇ ಜಾಗೃತಿಯಿಂದ ಸರ್ಕಾರವು ನೀಡುವ ಸೂಚನೆಗಳನ್ನು ಪ್ರತಿಯೊಬ್ಬರೂ ಚಾಚು ತಪ್ಪದೇ ಪಾಲಿಸೋಣ. ಈ ಸಾಂಕ್ರಮಿಕ ರೋಗವನ್ನು ತಡೆಗಟ್ಟುವಲ್ಲಿ ಎಲ್ಲರೂ ಕೈಜೋಡಿಸೋಣ.
ಓದಿದ ಪ್ರತಿಯೊಬ್ಬರೂ ತಪ್ಪದೇ ಲೈಕ್ ಮಾಡಿ ಶೇರ್ ಮಾಡುವ ಮೂಲಕ ವೈದ್ಯರಿಗೆ ಮತ್ತು ನರ್ಸ್ಗಳಿಗೆ ಗೌರವ ಸಲ್ಲಿಸಿ.
-ನವೀನ್ ರಾಮನಗರ