ಬೆಂಗಳೂರು : ರಾಜ್ಯದಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಶೇ. 10 ರಷ್ಟು ರಿಯಾಯ್ತಿ ಮುಂದುವರಿಸುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನವರಿ 1, 2022 ರಿಂದ ಮಾರ್ಚ್ 31,2022 ರವರೆಗೆ ಈ ರಿಯಾಯ್ತಿ ಮಾಡಲಾಗಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸ್ಟಾಂಪ್ ರಿಜಿಸ್ಟ್ರೇಷನ್ ದರ ಕಡಿಮೆ ಮಾಡಲಾಗಿತ್ತು. ಶೇ.10 ಕಡಿಮೆ ಮಾಡಿದ ಕಾರಣ ಹೆಚ್ಚಿನ ನೋಂದಣಿಗಳಾಗಿವೆ. ಸರ್ಕಾರಕ್ಕೂ ಆದಾಯ ಬಂದಿದೆ, ಜನರಿಗೂ ಅನುಕೂಲವಾಗಿದೆ. ರಿಯಾಯ್ತಿ ಮುಂದುವರೆಸುವಂತೆ ಜನರಿಂದ ಬೇಡಿಕೆ ಬಂದಿದ್ದರಿಂದ ಮುಂದಿನ ಮೂರು ತಿಂಗಳು ಏಪ್ರಿಲ್ 25,2022 ರವರೆಗೆ ಮಾರ್ಗ ಸೂಚಿಯಲ್ಲಿ ರಿಯಾಯ್ತಿ ನೀಡಲಾಗಿದ್ದು, ಎಲ್ಲ ರೀತಿಯ ಸ್ವತ್ತುಗಳ ಮಾರಾಟ ಮತ್ತು ಖರೀದಿಗೆ ಇದು ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.