ದೇಶದಲ್ಲಿ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಆಗಿ ಸಿದ್ಧವಾಗಿರುವ ನೆಲಮಂಗಳದ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ನಿನ್ನೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಭೇಟಿ ನೀಡಿ ಸೌಕರ್ಯಗಳ ಪರಿಶೀಲನೆ ನಡೆಸಲಾಯಿತು.
ಮಾನ್ಯ ಮುಖ್ಯಮಂತ್ರಿಗಳು ಇಲ್ಲಿನ ವ್ಯವಸ್ಥೆಗೆ ಸಮಾಧಾನ ವ್ಯಕ್ತಪಡಿಸಿದ್ದು ರೋಗಲಕ್ಷಣ ರಹಿತ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗುವುದು.
10100 ಹಾಸಿಗೆಗಳನ್ನೊಳಗೊಂಡ ಈ ಸುಸಜ್ಜಿತ ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯಗಳು, ಅಗತ್ಯ ಸಿಬ್ಬಂದಿ, ಆಹಾರ, ಮೂಲಸೌಕರ್ಯ, ಸುರಕ್ಷತಾ ಕ್ರಮಗಳು ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಲಾಗಿದ್ದು 20 ಆಂಬುಲೆನ್ಸ್ ಗಳು ದಿನದ 24 ಗಂಟೆಗಳೂ ಇಲ್ಲಿ ಲಭ್ಯವಿರಲಿವೆ. ಮಾನ್ಯ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್, ಗೃಹಸಚಿವ ಶ್ರೀ ಬಸವರಾಜ್ ಬೊಮ್ಮಾಯಿ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.