ಕೋರೊನಾ ಎಂಬ ಹೆಮ್ಮಾರಿ ವಿಶ್ವದೆಲ್ಲೆಡೆ ತನ್ನ ಕದಂಬ ಬಾಹುವನ್ನು ವಿಸ್ತರಿಸಿದ್ದು. ಭಾರತವೂ ಈಗ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದು, ಸೋಂಕು ತಡೆಯಲು ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆಯಾದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಕೋರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನರು ಆತಂಕದಿಂದ ದಿನ ದೂಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊರೊನಾ ಹಾಟ್‍ಸ್ಪಾಟ್ ಕಲಾಸಿಪಾಳ್ಯ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ ಈ ನಾಲ್ಕು ಏರಿಯಾಗಳಲ್ಲಿ ಲಾಕ್‍ಡೌನ್ ಮಾಡಲು ಸೂಚಿಸಲಾಗಿದೆ.
ಬೆಕ್ಕು ಅಡ್ಡ ಬಂದಾಗ ನಿಂತು ಹೋಗೊದು ಏಕೆ ಗೊತ್ತಾ? ಮೂಡನಂಬಿಕೆ! ವೈಜ್ಞಾನಿಕ ಕಾರಣ!!
ಕೋರೋನಾ ಬಗ್ಗೆ ಜನರಲ್ಲಿ ಆತಂಕವಿದ್ದರೂ ಕೂಡ ಬೇಕಾ ಬಿಟ್ಟಿ ಓಡಾಡುವುದು, ಅನಗತ್ಯವಾಗಿ ಮನೆಯಿಂದ ಹೊರಬರುವುದು, ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಪಾಲಿಸದೇ ಓಡಾಡುತ್ತಿರುವ ಹಿನ್ನಲೆಯಲ್ಲಿ ಸೋಂಕು ದಿನ ದಿನ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯ ಎಂದು ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
-Chiguru News