ದೇಶದ ಯಾವುದೇ ಮೂಲೆಯಲ್ಲಿ ಮನುಕುಲಕ್ಕೆ ತೊಂದರೆಯಾದರೇ ಧಾವಿಸುವರಲ್ಲಿ ಇನ್‍ಫೋಸಿಸ್ ಫೌಂಡೇಷನ್ ಯಾವತ್ತಿಗೂ ಮುಂದೆ ಇರುತ್ತದೆ. ದೇಶಕ್ಕಾಗಿ ಪ್ರಾಣಬಿಟ್ಟ ಯೋಧರ ಕುಟುಂಬಗಳಿಗೆ, ಪ್ರವಾಹ, ಭೂಕಂಪ ಹೀಗೆ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ಇನ್‍ಫೋಸಿಸ್‍ನ ಸುಧಾಮೂರ್ತಿಯವರು ತಾವೇ ಮುಂದೆ ನಿಂತು ಸಹಾಯ ಹಸ್ತ ಚಾಚುತ್ತಾರೆ. ಆಗಾಗಿ ಅವರಿಗೆ ಮಾನವೀಯತೆಯ ತಾಯಿ ಅಂತಲೂ ಕರೆಯುತ್ತಾರೆ.
ಇತ್ತಿಚೇಗೆ ಪ್ರಪಂಚವನ್ನೇ ಅಲುಗಾಡಿಸುತ್ತೀರುವ ಕೊರೋನಾ ವೈರಸ್ ನಮ್ಮ ಕರುನಾಡಿಗೂ ಲಗ್ಗೆ ಇಟ್ಟಿದ್ದು. ಈಗಾಗಲೇ ಒಬ್ಬ ವೃದ್ಧ ಸಾವನ್ನಪ್ಪಿರುವುದು ಎಲ್ಲರಿಗೂ ಗೊತ್ತಿದೆ. ಕೋರೋನಾ ವೈರಸ್ ತಡೆಯಲು ಸರ್ಕಾರ ಕೂಡ ಸಾಕಷ್ಟ್ರು ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಂದರ್ಭದಲ್ಲೇ ಸುಧಾಮೂರ್ತಿಯವರು ಶಿಕ್ಷಣ ಸಚಿವರೊಂದಿಗೆ ಮಾತನಾಡಿ ಇನ್‍ಪೋಷಿಸ್ ಫೌಂಡೇಷನ್ ನಿಂದ ಒಂದು ಆಸ್ಪತ್ರೆ ನಿರ್ವಹಿಸುತ್ತೇವೆ. ಅದರ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ಸರ್ಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ. ಇದರ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಏನೇ ಇರಲಿ ಮನುಕುಲದ ಸಂಕಷ್ಟಕ್ಕೆ ಧಾವಿಸುವ ಸುಧಾಮೂರ್ತಿ ಅಮ್ಮ ನಿಜಕ್ಕೂ ಮಾನವೀಯತೆಯ ದೇವತೆ ಅಂದರೇ ತಪ್ಪಾಗಲಾರದು. ಇಂತಹ ಸುಧಾಮ್ಮ ನಮ್ಮ ಕರ್ನಾಟಕದಲ್ಲಿ ಇರುವುದು ನಮ್ಮೆಲ್ಲರ ಸೌಭಾಗ್ಯ ಎಂದೂ ಕರುನಾಡ ಜನ ಹೆಮ್ಮೆಯಿಂದ ಹೇಳುತ್ತಿದ್ದಾರೆ.
ಈ ವಿಷಯವನ್ನು ಓದಿ ಲೈಕ್ ಮಾಡಿ ಶೇರ್ ಮಾಡಿ ಮನುಕುಲದ ಸಂಕಷ್ಟಕ್ಕೆ ಮತ್ತಷ್ಟು ಸಹಾಯ ನೀಡುವ ಮನಸ್ಸುಗಳು ಮುಂದೆ ಬರಲಿ.
-ನವೀನ್ ರಾಮನಗರ