ದುಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಕರ್ನಾಟಕ ಮೂಲದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಹೆಚ್ ಒನ್ ಎನ್ ಒನ್ ಎಂಬ ಕಾಯಿಲೆಗೆ (ಹೃದಯ ಸೋಂಕಿನ ಸಮಸ್ಯೆಯಿದ್ದ ಬಳಲುತ್ತಿದ್ದರು) ತುತ್ತಾಗಿ ಹೈದರ್‍ಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ತುರ್ತು ನಿಘ ಘಟಕದಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (28.12.2018) ರಾತ್ರಿ ಸುಮಾರು 9 ಗಂಟೆಗೆ ನಿಧರಾಗಿದ್ದಾರೆ.
ಪ್ರಾಮಾಣಿಕ ದಕ್ಷ ಐಪಿಎಸ್ ಅಧಿಕಾರಿ ಎಂದು ಜನರ ಮನದಲ್ಲಿ ಹೆಸರು ಮಾಡಿದ್ದ ಮಧುಕರ್ ಶೆಟ್ಟಿ ಮೂಲತ: ಕರ್ನಾಟಕದ ಉಡುಪಿ ಜಿಲ್ಲೆಯವರು. ಇವರ ತಂದೆ ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ . ಮಧುಕರ್ ಶೆಟ್ಟಿ 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು.
ದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಅಮೇರಿಕಾ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದರು. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಖಡಕ್ ಹಾಗೂ ಜನಪರ ಅಧಿಕಾರಿಯಾಗಿ ಜನಮನರಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದರು. ತಮ್ಮ ಪ್ರೋಬೇಷನರಿ ಸಮಯದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕೆಲಸ ನಿರ್ವಹಿಸಿದ್ದರು. ಆ ಸಮಯದಲ್ಲೇ ಇಡೀ ಚನ್ನಪಟ್ಟಣ ಇವರ ಖದರ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಪ್ರಸ್ತುತ ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿದ್ದರು.
ಸಾರ್ವನಿಕರಿಗೆ ಸದಾ ಇಷ್ಟವಾಗುವ ಇಂತಹ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ! ದುಷ್ಟರ ಸಂಹಾರಕ್ಕೆಂದೇ ಹುಟ್ಟುವ ಇಂತಹ ಅಧಿಕಾರಿಗೆ ಇಷ್ಟು ಬೇಗನೆ ಸಾವು ಬರಬಾರದಿತ್ತೆಂದು ಸಾರ್ವಜನಿಕರು ದೇವರಿಗೆ ಇಡೀ ಶಾಪ ಹಾಕುತ್ತಿದ್ದಾರೆ. ದೇವರ ಅಚ್ಚಿನ ತಪ್ಪೋ ವಿಧಿಲಿಲೆ ಎನ್ನಬೇಕೋ ಒಂದು ತಿಳಿಯದು! ಮತ್ತೊಮ್ಮೆ ಹುಟ್ಟಿ ಬನ್ನಿ…ನಿಮಗಿದೋ ಭಾವಪೂರ್ಣ ನುಡಿನಮನದ ಶ್ರದ್ದಾಂಜಲಿ.
-ನವೀನ್ ರಾಮನಗರ