ಈ ವಿಷಯ ನೀವು ನಂಬುವುದು ಸಹ ಕಷ್ಟವಾಗುತ್ತೆ. ಆದ್ರೂ ಇದು ಸತ್ಯ. 7 ವರ್ಷದ ಬಾಲಕನ ಬಾಯಿಯಲ್ಲಿ ಇದ್ದಿದ್ದು ಬರೋಬ್ಬರಿ 526 ಹಲ್ಲುಗಳು. ಶಾಕ್ ಆಗ್ಬೇಡಿ. ಇದು ಅಪ್ಪಟ ಸತ್ಯ. ನಾವೇನು ನಿಮ್ಗೆ ತಮಾಷೆ ವಿಷ್ಯ ಹೇಳ್ತಿಲ್ಲ. ಇಂತಹದೊಂದು ವಿಚಿತ್ರ ಪ್ರಕರಣ ನಡೆದಿರುವುದು ಸಹ ನಮ್ಮ ನೆಲದಲ್ಲಿಯೇ. ತಮಿಳುನಾಡಿನಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಕಂಡು ಬಂದಿದೆ.
7 ವರ್ಷದ ಬಾಲಕ ರವೀಂದ್ರನಾಥ ಬಾಯಿಯಲ್ಲಿದ್ದಿ ಬರೋಬ್ಬರಿ 526 ಹಲ್ಲುಗಳನ್ನ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಇದೀಗ ಬಾಲಕ ಚೇತರಿಸಿಕೊಳ್ತಿದ್ದು, ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣವಾಗಿದೆ. ಬಾಲಕ ರವೀಂದ್ರನಾಥನ ಬಲ ಬದಿಯ ದವಡೆ ಊದಿಕೊಂಡಿತ್ತು. ತುಂಬಾ ನೋವಿನಿಂದ ಬಳಲುತ್ತಿದ್ದ. ಆಸ್ಪತ್ರೆಯಲ್ಲಿ ಚೆಕ್ ಮಾಡಿದಾಗ ಬಾಯಿಯಲ್ಲಿ 526 ಹಲ್ಲುಗಳು ಇರೋದು ಕಂಡು ಬಂದಿದೆ. ಈ ನೋವಿಗೆ ‘ಕಾಂಪೌಂಡ್ ಕಾಂಪೋಸಿಟ್ ಒಂಡೋಟೊಮ’ ಅನ್ನೋ ಅಪರೂಪದ ಖಾಯಿಲೆ ಕಾರಣವಾಗಿದೆ.
ಹಳದಿ ಸೀರೆಯ ಚೆಲುವೆ ರೀನಾ ವಿಡಿಯೋ ವೈರಲ್!
3 ವರ್ಷದ ಮಗುವಿದ್ದಾಗಲೆ ಇತ್ತು ಖಾಯಿಲೆ ಬಾಲಕ ರವೇಂದ್ರನಾಥ ಮೂರು ವರ್ಷದ ಮಗುವಿದ್ದಾಗಲೇ ಈ ನೋವು ಕಾಣಿಸಿಕೊಂಡಿದೆ. ಇದನ್ನ ಪೋಷಕರು ನೋಡಲು ಹೋದಾಗ ಮಗು ಅಳಲು ಶುರು ಮಾಡ್ತಿತ್ತು. ಏನೋ ಸ್ವಲ್ಪ ಊದಿಕೊಂಡಿದೆ. ಅದಕ್ಕೆ ಅಳುತ್ತಾನೆ ಅಂತಾ ಸುಮ್ಮನಾಗಿದ್ರು. ಕ್ರಮೇಣ ಬಾವು ಹೆಚ್ಚಾಗುತ್ತಿದ್ದಂತೆ ಹೆತ್ತವರು ಎಚ್ಚೆತ್ತುಕೊಂಡಿದ್ದಾರೆ. ಎಕ್ಸ್ ರೇ ಸಿಟಿ ಸ್ಕ್ಯಾನ್ ಮಾಡಿಸಿದಾಗ, ಕೆಳಭಾಗದ ಬಲ ದವಡೆಯಲ್ಲಿ ಹಲ್ಲುಗಳು ಇರೋದು ಕಂಡು ಬಂದಿದೆ. ಬಾಲಕನಿಗೆ ಅರವಳಿಕೆ ಮದ್ದು ಕೊಟ್ಟು ಚಿಕಿತ್ಸೆ ಮಾಡಿದಾಗ, 200 ಗ್ರಾಂ ತೂಕದ ಹಲ್ಲಿನ ಭಾಗ ಪತ್ತೆಯಾಯ್ತು. ಅದನ್ನ ಹೊರ ತೆಗೆದಾಗ ಅದರಲ್ಲಿ 526 ಹಲ್ಲುಗಳು ಅದರಲ್ಲಿದ್ವು.
ಡಾ.ಸೆಂದಿಲ್ನಾಥನ್ ತಂಡ ಸತತ ಐದು ಗಂಟೆಗಳ ಚಿಕಿತ್ಸೆ ಮೂಲಕ ಬಾಲಕನ ನೋವಿಗೆ ಮುಕ್ತಿ ನೀಡಿದೆ. ಬಾಲಕ ರವೀಂದ್ರನಾಥ ಇದೀಗ ನಾರ್ಮಲ್ ಆಗಿದ್ದು, ಈತನ ಪೋಷಕರಿಂದ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳದೆ ಮನೆಗೆ ಕಳುಹಿಸಿ ಕೊಡಲಾಗಿದೆ. ವೈದ್ಯರ ಈ ಮಾನವೀಯ ಗುಣಕ್ಕೆ ನಮ್ಮದೊಂದು ಸಲಾಂ.