ಒಂದು ಕಾಲದಲ್ಲಿ ರಸ್ತೆಗಳ ಮೇಲೆ ಬೆಳದಿಂಗಳ ಬಾಲೆಯಂತೆ ಓಡಾಡುತ್ತಿದ್ದ “ಪ್ರೀಮಿಯರ್ ಪದ್ಮಿನಿ” ಕಾರು ನಿಮ್ಮೆಲ್ಲರಿಗೂ ನೆನಪಿರಬಹುದು, ಈಗ ಆ ಕಾರಿನ ಟೈಟಲ್ ಸಿನಿಮಾ ಹೆಸರು! ಕಿರುತೆರೆಯಲ್ಲಿ ನಟಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಮಿಂಚುತ್ತಿರುವ ಪ್ರತಿಭೆ ಶೃತಿನಾಯ್ಡು ರವರು ಬೆಳ್ಳಿತೆರೆಗೆ ನಿರ್ಮಾಪಕಿಯಾಗಿ ನೂತನ ಹೆಜ್ಜೆ ಇಡುತ್ತಿದ್ದಾರೆ. ಅದು ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ಮಾಪಕಿಯಾಗಿ.
ಶ್ರೀರಸ್ತು ಶುಭಮಸ್ತು, ಮಹಾದೇವಿ, ಬ್ರಹ್ಮಗಂಟು, ಪುನರ್ ವಿವಾಹ ಮುಂತಾದ ಸದಭಿರುಚಿಯ ಧಾರವಾಹಿಗಳನ್ನು ನಿರ್ಮಾಣ ಮಾಡಿ ಅನುಭವವಿರುವ ಶೃತಿ ನಾಯ್ಡುರವರು ಪ್ರೀಮಿಯರ್ ಪದ್ಮಿನಿ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ರಮೇಶ್ ಇಂದ್ರರವರು.
ನವರಸ ನಾಯಕ ಕನ್ನಡದ ಜನಪ್ರಿಯ ನಟ ಶ್ರೀ ಜಗ್ಗೇಶ್ ನಾಯಕರಾಗಿರುವ ಈ ಚಿತ್ರದಲ್ಲಿ ಮಧೂ, ಸುಧಾರಾಣಿ, ಸಿಹಿ ಕಹಿಗೀತಾ, ಪ್ರಮೋದ ತಾರಬಳಗದಲ್ಲಿರಲ್ಲಿದ್ದು, ಚಿತ್ರದ ಚಿತ್ರೀಕರಣವೂ ಮೈಸೂರು ಮತ್ತು ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇರುವ ಈ ಚಿತ್ರಕ್ಕೆ ಇದೇ ತಿಂಗಳು 18ನೇ ತಾರೀಖು ಮಹೂರ್ತ ಸಮಾರಂಭ ನಡೆಯಲಿದೆ.
-ಬಿಬಿಎಂ ನ್ಯೂಸ್