ಬಾಲಿವುಡ್ ನಟಿ ಸುಷ್ಮಿತಾ ಸೇನ್ ಹಾಗೂ ರೂಪದರ್ಶಿ ರ್ಹೋನ್ ಶಾಲ್ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಇದೀಗ ಬಿಟೌನ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. ಪ್ರೀತಿಗೆ ಕಣ್ಣಿಲ್ಲಂತಾರೆ. ಅದು ಕೆಲ ವಿಚಾರಗಳಲ್ಲಿ ನಿಜವಾಗುತ್ತೆ. ಬಿಟೌನ್ ಅಂಗಳದಲ್ಲಿ ಇದು ಇತ್ತೀಚೆಗೆ ಸಾಬೀತಾಗ್ತಿದೆ.
ಸುಷ್ಮಿತಾ ಸೇನ್ ಗಿಂತ ರ್ಹೋನ್ ಶಾಲ್ 14 ವರ್ಷ ಚಿಕ್ಕವನಾಗಿದ್ದಾನೆ. ನಟಿ ಸುಷ್ಮಿತಾಗೆ 42 ವರ್ಷ. ಶಾಲ್ ಗೆ 28 ವರ್ಷ. ಈ ಜೋಡಿ ಮದುವೆಯಾಗಲಿದೆ ಅನ್ನೋದು ಸದ್ಯದ ನ್ಯೂಸ್. ಈ ಹಿಂದೆ ಅನೇಕ ಬಾರಿ ಇವರಿಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ರೂಪದರ್ಶಿ, ಫಿಟ್ ನೆಸ್ ಎಕ್ಸ್ ಪರ್ಟ್ ಆಗಿರುವ ಶಾಲ್ ಹಾಗೂ ಸುಷ್ ಪರಿಚಯದ ನಂತ್ರ ಸ್ನೇಹ, ಸ್ನೇಹ ಪ್ರೀತಿ, ಪ್ರೀತಿ ಮದುವೆಯ ಹಂತಕ್ಕೆ ಬಂದಿದೆ.
ಮಾಜಿ ಭವನ ಸುಂದರಿ ಸುಷ್ಮಿತಾ ಸೇನ್ ಹಾಗೂ ರ್ಹೋನ್ ಶಾಲ್ ವಿದೇಶಗಳಲ್ಲಿಯೂ ಒಟ್ಟಿಗೆ ಓಡಾಡಿದ್ದಾರೆ. ವರ್ಕೌಟ್ ಟೈಂನಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಬ್ಬರು ಬಾಯಿ ಬಿಡದಿದ್ರೂ ಬಿಟೌನ್ ಮಂದಿಗೆ ಅರ್ಥವಾಗಿದೆ. ಮದುವೆಯಾದ್ರೆ ಅಚ್ಚರಿ ಪಡಬೇಕಿಲ್ಲ.
ಬಿಟೌನ್ ನಟಿಯರಿಗೆ ಯಂಗ್ ಹುಡ್ಗರ ಮೇಲೆ ಕಣ್ಣುನಟಿ ಪ್ರಿಯಾಂಕಾಗೆ 37 ವರ್ಷ. ಈಕೆಯ ಪತಿ ಪಾಪ್ ಸಿಂಗರ್ ನಿಕ್ ಜಾನ್ಸನ್ ಗೆ 26 ವರ್ಷ. ಇನ್ನು ನಟಿ ಮಲೈಕಾ ಅರೋರಾ ಹಾಗೂ ಅರ್ಜುನ ಕಪೂರ ಜೋಡಿಯ ನಡುವೆ ಸಹ 11 ವರ್ಷಗಳ ಅಂತರವಿದೆ. ಅರ್ಜುನಗೆ 34 ವರ್ಷ. ಮಲೈಕಾಗೆ 45 ವರ್ಷ.ಇವರಿಬ್ಬರ ನಡುವೆ ಲವ್ವಿಡವ್ವಿ ಇರೋದು ಸತ್ಯ. ಆದ್ರೆ, ಒಪ್ಪಿಕೊಳ್ತಿಲ್ಲ. ಹೀಗಾಗಿ ಬಿಟೌನ್ ನಟಿಯರಿಗೆಲ್ಲ ಯಂಗ್ ಹುಡ್ಗರ ಮೇಲೆಯೇ ಕಣ್ಣು ಅಂತಾ ಹೇಳಲಾಗ್ತಿದೆ.