ಜಗತ್ತಿನ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರ್ ಗಳನ್ನ ಚಾರಿಟಿ ಟ್ರಸ್ಟ್ ವೊಂದಕ್ಕೆ ದಾನ ಮಾಡಿದ್ದಾರಂತೆ. ಇದರ ಮೌಲ್ಯ ಬರೋಬ್ಬರಿ 36 ಕೋಟಿ ರೂಪಾಯಿ. ಆದ್ರೆ, ಇದನ್ನ ಯಾರಿಗೆ ದಾನ ಮಾಡಲಾಗಿದೆ ಅನ್ನೋದನ್ನ ಆಪಲ್ ಕಂಪನಿ ಬಹಿರಂಗ ಪಡಿಸಿಲ್ಲ.
ಆಪಲ್ ಕಂಪನಿ ಹೇಳುವ ಪ್ರಕಾರ ಕುಕ್ ಬಳಿ 8,54,849 ಷೇರ್ ಗಳಿವೆ. ಇದರ ಒಟ್ಟ ಮೌಲ್ಯ 17.6 ಕೋಟಿ ಡಾಲರ್. ರೂಪಾಯಿ ಲೆಕ್ಕದಲ್ಲಿ ಹೇಳುವುದಾದ್ರೆ 1, 267 ಕೋಟಿ ರೂಪಾಯಿ. ಇದನ್ನ ಸಹ ಕುಕ್ ದಾನ ಮಾಡ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಎಷ್ಟು ಜನಕ್ಕೆ ಗೊತ್ತಿದೆಯೋ ಗೊತ್ತಿಲ್ಲವೋ ಒಂದು ಕಾಲದಲ್ಲಿ ಕುಕ್ ಪೇಪರ್ ಮಾರಿ ಜೀವನ ಮಾಡ್ತಿದ್ರು.
ಅಮೆರಿಕ ಮೂಲದ ಕುಕ್ ಅಲಬಾಮಾದಲ್ಲಿ ದಿ ಪ್ರೆಸ್ ರಿಜಿಸ್ಟರ್ ಅನ್ನೋ ಪತ್ರಿಕೆಯನ್ನ ಮಾರಾಟ ಮಾಡುತ್ತಾ, ತಾಯಿ ಜೊತೆಗೆ ಫಾರ್ಮಸಿಯಲ್ಲಿ ಕೆಲಸ ಮಾಡ್ತಿದ್ದರಂತೆ. ಕುಕ್ ಸತತ ಪರಿಶ್ರಮದಿಂದಾಗಿ ಇಂದು ಆಪಲ್ ಅನ್ನೋ ದೈತ್ಯ ಕಂಪನಿಯ ಸಿಇಒ ಆಗಿದ್ದಾರೆ. ಆಬ್ರೂನ್ ವಿಶ್ವವಿದ್ಯಾಲಯದಲ್ಲಿ ಓದ್ತಿದ್ದಾಗ ರಾಯ್ ನೊಲ್ಡ್ಸ್ ಅಲ್ಯೂಮಿನಿಯಂ ಕಂಪನಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತಿದ್ದರಂತೆ. ಅದ್ರಿಂದ ಬಂದ ಹಣವನ್ನ ತಮ್ಮ ವಿದ್ಯಾಭ್ಯಾಸಕ್ಕೆ ಖರ್ಚು ಮಾಡ್ತಿದ್ದರಂತೆ.
ಮುಂದೆ ಕುಕ್ ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಒಬ್ಬೊಬ್ಬರಾಗಿ ಕೆಲಸ ಬಿಡುತ್ತಾ ಹೋದ್ರು. ಆಗ ಕುಕ್ ಆ ಕಂಪನಿ ಅಧ್ಯಕ್ಷರಿಗೆ ಸಹಾಯ ಮಾಡಿದ. ಇದರ ಜೊತೆಗೆ ಓದುತ್ತಲೇ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಮುಗಿಸಿದ್ರು. ಕಷ್ಟದ ದಿನಗಳನ್ನ ಅನುಭವಿಸಿರುವ ಟಿಮ್ ಕುಕ್ ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ.