ಸಾಫ್ಟ್ ವೇರ್ ಜಗತ್ತೇ ಹಾಗೇ ಏನಾದರೊಂದು ವಿಸ್ಮಯದ ವಿಷಯವನ್ನು ತರುತ್ತಲೇ ಇರುತ್ತದೆ. ಅಂತಹ ವಿಷಯಗಳಲ್ಲಿ ಹೈದರಾಬಾದ್‍ನ 12 ವರ್ಷದ ಹುಡುಗ ಸಿದ್ದಾರ್ಥ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕಗೊಂಡಿದ್ದಾನೆ. ಈ ಮೂಲಕ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಒಂದು ಸಂಚಲನವನ್ನು ಮೂಡಿಸಿದ್ದಾನೆ.
ಸದ್ಯ ಮಣಿಕೊಂಡ ಪ್ರದೇಶದ ಚೈತನ್ಯ ಸ್ಕೂಲ್‍ನಲ್ಲಿ ಏಳನೇ ತರಗತಿ ಓದುತ್ತಿರುವ ಸಿದ್ದಾರ್ಥ ಶ್ರೀವತ್ಸ ಪಿಲ್ಲಿ ಮಾಧಾಪುರದಲ್ಲಿರುವ ಮೌಂಟೇನ್ ಸ್ಮಾರ್ಟ್ ಬಿಜಿನೆಸ್ ಸೆಲ್ಯೂಷನ್ಸ್ ಎಂಬ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿದ್ದಾನೆ.
ತಂದೆ ತಾಯಿ ಇಬ್ಬರೂ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರಿಂದ ಮನೆಯಲ್ಲಿಯೇ ತಂದೆಯಿಂದ ಕೋಡಿಂಗ್ ಬಗ್ಗೆ ತರಬೇತಿ ಪಡೆದು ತನ್ನ ಜಾಣ್ಮೆಯಿಂದ ಕೆಲಸ ಗಿಟ್ಟಿಸಿಕೊಂಡಿದ್ದಾನೆ ಸಿದ್ದಾರ್ಥ. ಕೆಲಸಕ್ಕೆ ಸೇರುವ ಮುನ್ನ ಕಂಪನಿ ಈತನಿಗೆ ಲಿಖಿತ ಪರೀಕ್ಷೆ ಮತ್ತು ಪ್ರಾಜೆಕ್ಟ್ ಒಂದನ್ನು ನೀಡಿತ್ತು ಇದನ್ನುಯಶಸ್ವಿಯಾಗಿ ನಿಭಾಯಿಸಿ ಉತ್ತೀರ್ಣನಾಗುವ ಮೂಲಕ ಕೆಲಸ ಈತನ ಪಾಲಾಗಿದೆ.
ಗೂಗಲ್ ನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹುದ್ದೆ ಗಿಟ್ಟಿಸಿದ್ದ ತನ್ಮಯ್ ಬಕ್ಷಿಯೇ ನನಗೆ ಸ್ಪೂರ್ತಿ ಎನ್ನುವ ಸಿದ್ದಾರ್ಥ ತನ್ನ ಪಾಲಕರೇ ನನಗೆ ಆದರ್ಶವೆನ್ನುತ್ತಾನೆ. ಭವಿಷ್ಯದಲ್ಲಿ ತನ್ನದೇ ಕಾರ್ಯವೈಖರಿಯ ಬಗ್ಗೆ ಕಂಪನಿ ಸ್ಥಾಪಿಸಬೇಕೆಂಬ ಕನಸನ್ನು ಹೊಂದಿರುವ ಸಿದ್ದಾರ್ಥಗೆ ಶುಭ ಹಾರೈಸೋಣ.
ಕನ್ನಡಿಗರ ಹೆಮ್ಮೆ ಸುಧಾಮೂರ್ತಿಯವರು ಅಮಿತಾಬ್ ಗೆ ಕೊಟ್ಟ ಉಡುಗೊರೆ ಕೌದಿ.